»   » ನಟ ಅಜಯ್ ದೇವಗನ್ ಟ್ವಿಟ್ಟರ್ ಅಕೌಂಟ್ ಕ್ಲೋಸ್

ನಟ ಅಜಯ್ ದೇವಗನ್ ಟ್ವಿಟ್ಟರ್ ಅಕೌಂಟ್ ಕ್ಲೋಸ್

Posted By:
Subscribe to Filmibeat Kannada

ಬಾಲಿವುಡ್ ಸಿಂಗಂ ಅಜಯ್ ದೇವಗನ್ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಗೆ ವಿದಾಯ ಹೇಳಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯನ್ನು ಅವರು ಡಿಲೀಟ್ ಮಾಡಿದ್ದು ಈಗ Sorry, that page doesn't exist! ಎಂಬ ಸಂದೇಶ ಬಿತ್ತರವಾಗುತ್ತಿದೆ.

ತಾನು ಟೆಕ್ ಸ್ಯಾವಿ ಅಲ್ಲ ಎಂಬ ಮಾತನ್ನು ಅಜಯ್ ಒಪ್ಪುತ್ತಾರೆ. ಬಹುಶಃ ಟ್ವಿಟ್ಟರ್ ಗೆ ವಿದಾಯ ಹೇಳಲು ಇದೇ ಪ್ರಮುಖ ಕಾರಣ ಎನ್ನುತ್ತವೆ ಬಾಲಿವುಡ್ ಮೂಲಗಳು. ಈಗ ಬಹಳಷ್ಟು ಸೆಲೆಬ್ರಿಟಿಗಳ ತಮ್ಮ ಚಿತ್ರಗಳ ಪ್ರಚಾರಕ್ಕೆ ಆಯ್ಕೆ ಮಾಡಿಕೊಂಡಿರುವ ಸುಲಭದ ದಾರಿ ಟ್ವಿಟ್ಟರ್, ಫೇಸ್ ಬುಕ್.


ಅಭಿಮಾನಿಗಳಿಗೆ ತಮ್ಮ ಚಿತ್ರಗಳ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡುವುದು, ಅವರ ಪ್ರಶ್ನೆಗಳಿಗೆ ಉತ್ತರಿಸುವುದು ಇವೆಲ್ಲವೂ ಈಗ ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ನೀರು ಕುಡಿದಷ್ಟೇ ಸುಲಭ. ಇದನ್ನು ಮನಗಂಡೇ ಅಜಯ್ ದೇವಗನ್ ಕೆಲವರ್ಷಗಳ ಹಿಂದೆ ಟ್ವಿಟ್ಟರ್ ಗೆ ಅಡಿಯಿಟ್ಟಿದ್ದರು.

ಗುರುವಾರ (ಅ.25) ಅವರು ತಾನು ಟ್ವಿಟ್ಟರ್ ಗೆ ಗುಡ್ ಬೈ ಹೇಳುತ್ತಿರುವುದಾಗಿ ಪ್ರಕಟಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ. ಟ್ವಿಟ್ಟರ್ ನಿಂದ ದೂರ ಸರಿಯುತ್ತಿದ್ದೇನೆ. ಆದರೆ ನಿಮ್ಮ ಪ್ರೀತಿ, ವಿಶ್ವಾಸ ಹೀಗೆ ಮುಂದುವರಿಯಲ್ಲಿ ಎಂಬ ಸಂದೇಶವನ್ನೂ ರವಾನಿಸಿ ಅಕೌಂಟ್ ಕ್ಲೋಸ್ ಮಾಡಿದ್ದಾರೆ.

ಸದ್ಯಕ್ಕೆ ಅವರ ಗಮನವೆಲ್ಲಾ 'ಸಿಗಂ 2' ಚಿತ್ರದ ಮೇಲಿದೆ. ಇತ್ತೀಚೆಗೆ ಅವರ ಖಾಸಗಿ ವಿಚಾರಗಳ ಬಗ್ಗೆಯೇ ಹೆಚ್ಚಾಗಿ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದಕ್ಕೆಲ್ಲಾ ಉತ್ತರಿಸಲು ಅವರು ಹೆಣಗಾಡಬೇಕಾಗಿತ್ತು. ಈ ತಲೆನೋವೆ ಬೇಡ ಎಂದು ಅವರು ಈಗ ಟ್ವಿಟ್ಟರ್ ಗೆ ಗುಡ್ ಬೈ ಹೇಳಲು ಕಾರಣ ಎನ್ನಲಾಗಿದೆ. ಸಮಾಧನಾದ ಸಂಗತಿ ಏನೆಂದರೆ ಅಜಯ್ ದೇವಗನ್ ಅಭಿಮಾನಿಗಳ ಟ್ವಿಟ್ಟರ್ ಅಕೌಂಟ್ ಸಖತ್ ಆಕ್ಟೀವ್ ಆಗಿರುವುದು. (ಏಜೆನ್ಸೀಸ್)

English summary
Actor Ajay Devgn abruptly announced that he is going off Twitter. He said, “Going off Twitter for a while guys! But taking all your love and good wishes with me. See you soon!”
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada