For Quick Alerts
  ALLOW NOTIFICATIONS  
  For Daily Alerts

  ಅಜಯ್ ದೇವಗನ್ ಸಹೋದರ ಅನಿಲ್ ದೇವಗನ್ ನಿಧನ

  |

  ಬಾಲಿವುಡ್ ನಟ ಅಜಯ್ ದೇವಗನ್ ಅವರ ಸಹೋದರ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಸ್ವತಃ ಅಜಯ್ ದೇವಗನ್ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  ''ಕಳೆದ ರಾತ್ರಿ ನನ್ನ ಸಹೋದರ ಅನಿಲ್ ದೇವಗನ್ ಅವರನ್ನು ಕಳೆದುಕೊಂಡೆ. ಅವರ ಅಕಾಲಿಕ ನಿಧನ ನಮ್ಮ ಕುಟುಂಬವನ್ನು ಎದೆಗುಂದಿಸಿದೆ. ಎಡಿಎಫ್ಎಫ್ ಮತ್ತು ನಾನು ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಅವನ ಆತ್ಮಕ್ಕೆ ಶಾಂತಿ ಕೋರಿ'' ಎಂದು ಮನವಿ ಮಾಡಿದ್ದಾರೆ.

  ಹಿರಿಯ ರಂಗಕರ್ಮಿ ಕೊಡಗನೂರು ಜಯಕುಮಾರ್ ನಿಧನಹಿರಿಯ ರಂಗಕರ್ಮಿ ಕೊಡಗನೂರು ಜಯಕುಮಾರ್ ನಿಧನ

  ಇನ್ನು ಕೊರೊನಾ ವೈರಸ್ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆ ಸಭೆ ಇರುವುದಿಲ್ಲ ಎಂದು ಸಹ ತಿಳಿಸಿದ್ದಾರೆ. ಅನಿಲ್ ದೇವಗನ್ ತಮ್ಮ ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.

  ರಾಜು ಚಾಚಾ (2000), ಬ್ಲ್ಯಾಕ್‌ಮೇಲ್ (2005) ಮತ್ತು ಹಾಲ್-ಎ-ದಿಲ್ (2008) ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಅನಿಲ್ ದೇವಗನ್ ಖ್ಯಾತಿ ಗಳಿಸಿಕೊಂಡಿದ್ದರು. ಅಜಯ್ ದೇವಗನ್ ಅವರ ಶಿವಾಯ್ (2016) ಮತ್ತು ಸನ್ ಆಫ್ ಸರ್ದಾರ್ (2012) ಚಿತ್ರಗಳಲ್ಲಿ ಕ್ರಿಯೆಟೀವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.

  ಅಜಯ್ ದೇವಗನ್ ಸಹೋದರನ ಹಠಾತ್ ನಿಧನದ ಬಗ್ಗೆ ತಿಳಿದ ಅಭಿಮಾನಿಗಳು ಸಹ ಸಂತಾಪ ಸೂಚಿಸಿದ್ದು, ಅಜಯ್ ದೇವ್‌ಗನ್ ಧೃತಿಗೆಡಬೇಡಿ ಎಂದು ಧೈರ್ಯ ತುಂಬುತ್ತಿದ್ದಾರೆ.

  Ajay Devgns brother Anil Devgan dies, actor mourns demise

  ಇನ್ನು ಅಭಿಷೇಕ್ ಬಚ್ಚನ್ ಮತ್ತು ಬೋನಿ ಕಪೂರ್ ಅವರು ಅಜಯ್ ದೇವಗನ್ ಸಹೋದರನ ಸಾವಿಗೆ ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

  English summary
  Filmmaker Anil Devgan, brother of actor Ajay Devgan, has passed way.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X