»   » ಶಾರುಖ್ ಖಾನ್ ಭಯ ನನಗಿಲ್ಲ; ಅಜಯ್ ದೇವಗನ್

ಶಾರುಖ್ ಖಾನ್ ಭಯ ನನಗಿಲ್ಲ; ಅಜಯ್ ದೇವಗನ್

Posted By:
Subscribe to Filmibeat Kannada

ಅಜಯ್ ದೇವಗನ್ ನಾಯಕತ್ವದ 'ಸನ್ ಆಫ್ ಸರ್ದಾರ್' ಹಾಗೂ ಯಶ್ ಚೋಪ್ರಾ ನಿರ್ದೇಶನದ ಇನ್ನೂ ಹೆಸರಿಡದ ಶಾರುಖ್ ಖಾನ್ ನಾಯಕತ್ವದ ಚಿತ್ರ, ಇವೆರಡೂ ಕೂಡ ಒಂದೇ ದಿನ ಬಿಡುಗಡೆಯಾಗಲಿವೆ. ಈ ವಿಷಯ ಪಕ್ಕಾ ಆಗಿದ್ದು ಈ ವಿಷಯವಾಗಿ ಅಜಯ್ ದೇವಗನ್ ಮಾತನಾಡಿದ್ದಾರೆ. "ಒಂದೇ ದಿನ ಬಿಡುಗಡೆಯಾದರೂ ನನಗೇನೂ ಭಯವಿಲ್ಲ" ಎಂದಿದ್ದಾರೆ.

ಈ ವಿಷಯವಾಗಿ ಮಾತನಾಡಿರುವ ಅಜಯ್ ದೇವಗನ್, "ಇಬ್ಬರ ಚಿತ್ರಗಳೂ ಒಂದೇ ದಿನ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಬೇರೆ ದಾರಿಯಿಲ್ಲ, ಎಲ್ಲವನ್ನೂ ಬ್ಯಾಲೆನ್ಸ್ ಮಾಡಬೇಕಾಗಿದೆ. ನನ್ನ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಚೆನ್ನಾಗಿ ಗಳಿಸಲಿದೆ ಎಂಬ ಧೈರ್ಯ ನನಗಿದೆ. ಶಾರುಖ್ ಚಿತ್ರ ಬರುವುದರಿಂದ ನನಗೇನೂ ಭಯವಿಲ್ಲ" ಎಂದಿದ್ದಾರೆ.

"ಚಿತ್ರ ಚೆನ್ನಾಗಿದ್ದರೆ ಖಂಡಿತ ಯಶಸ್ವಿಯಾಗುತ್ತದೆ. ಬಿಡುಗಡೆಯಾದ ನಮ್ಮಿಬ್ಬರ ಚಿತ್ರಗಳೆರಡೂ ಚೆನ್ನಾಗಿದ್ದರೆ ಎರಡೂ ಗಳಿಕೆ ಚೆನ್ನಾಗಿಯೇ ಬರುತ್ತದೆ. ನನಗೆ ನಮ್ಮಿಬ್ಬರ ಚಿತ್ರಗಳ ನಡುವಿನ ಸ್ಪರ್ಧೆ ಇಷ್ಟವೇ ಹೊರತೂ ವೈಯಕ್ತಿಕ ಸ್ಷರ್ಧೆ ಇಷ್ಟವಿಲ್ಲ. ನಾನು ವೈಯಕ್ತಿಕವಾಗಿ ಯಾರೊಂದಿಗೂ ಸ್ಪರ್ಧಿಸಲು ಬಯಸುವುದಿಲ್ಲ" ಎಂಬುದು ಅಜಯ್ ಮನದಾಳದ ಮಾತು!

ಅಜಯ್ ದೇವಗನ್ ಆಪ್ತ ನಿರ್ದೇಶಕ ರೋಹಿತ್ ಶೆಟ್ಟಿ ಇದೀಗ ಶಾರುಖ್ ಖಾನ್ ನಾಯಕತ್ವದಲ್ಲಿ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಬಗ್ಗೆ ಅಜಯ್ ದೇವಗನ್ ಗಮನ ಸೆಳೆದರೆ, ಅದಕ್ಕೆ ಕೂಲ್ ಆಗಿ "ಶಾರುಖ್ ರನ್ನು ಭೇಟಿಯಾದ ತಕ್ಷಣ ರೋಹಿತ್ ಶೆಟ್ಟಿ ಮೊದಲು ತಿಳಿಸಿದ್ದು ನನಗೇ. ಖಂಡಿತ ಮಾಡು, ಬೇರೆ ಏನೂ ಯೋಚಿಸಬೇಡ" ಎಂದಿದ್ದಾರೆ.

ಹೀಗೆ ಹೇಳುವ ಮೂಲಕ ಅಜಯ್, ರೋಹಿತ್ ಶೆಟ್ಟಿ ಜೊತೆ ತಮ್ಮ ಸಂಬಂಧ ಹದಗೆಟ್ಟಿಲ್ಲ ಎಂಬುದನ್ನು ತೋರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ಸ್ಟಾರ್ ಗಳ ನಡುವೆ ಹೆಲ್ತಿ ಸ್ಪರ್ಧೆ ಇದೆ ಎಂಬುದನ್ನು ಅಜಯ್ ದೇವಗನ್ ಜಾಹೀರು ಮಾಡಿದ್ದಾರೆ. ಜೊತೆಗೆ ಶಾರುಖ್ ಚಿತ್ರಗಳಿಗೆ ತಮ್ಮ ಚಿತ್ರ ಸ್ಪರ್ಧೆ ನೀಡಲು ರೆಡಿ ಎಂಬುದನ್ನೂ ತಿಳಿಸಿದ್ದಾರೆ. (ಏಜೆನ್ಸೀಸ್)

English summary
Ajay Devgn's film and Shahrukh Khan's film is releasing on the same day. But Ajay is not afraid of SRK and says that he is confident that his film will do well.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada