For Quick Alerts
  ALLOW NOTIFICATIONS  
  For Daily Alerts

  9 ವರ್ಷಗಳ ನಂತರ ಮತ್ತೆ ಒಂದಾದ ಅಕ್ಷಯ್ ಕುಮಾರ್ ಮತ್ತು ಕತ್ರಿನಾ

  |

  ಬಾಲಿವುಡ್ ನ ಸೂಪರ್ ಹಿಟ್ ಜೋಡಿಗಳಲ್ಲಿ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಜೋಡಿಯೂ ಒಂದು. ಈ ಜೋಡಿ ಸುಮಾರು 8 ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದೆ. ಅಚ್ಚರಿ ಅಂದ್ರೆ ಬಾಲಿವುಡ್ ಕಿಲಾಡಿ ಅಕ್ಷಯ್ ಮತ್ತು ಕತ್ರಿನಾ ಮತ್ತೆ ಚಿತ್ರಾಭಿಮಾನಿಗಳನ್ನು ಮೋಡಿ ಬರಲು ಒಟ್ಟಿಗೆ ಬರುತ್ತಿದ್ದಾರೆ.

  9 ವರ್ಷದ ನಂತರ ಅಕ್ಷಯ್ ಮತ್ತು ಕತ್ರಿನಾ ಒಂದೇ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 2010ರಲ್ಲಿ ರಿಲೀಸ್ ಆಗಿದ್ದ 'ತೀಸ್ ಮಾರ್ ಖಾನ್' ಚಿತ್ರದ ನಂತರ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರಲ್ಲಿಲ. ಈಗ ನಿರ್ದೇಶಕ ರೋಹಿತ್ ಶೆಟ್ಟಿ ಸಿನಿಮಾ ಮೂಲಕ 10ನೇ ಬಾರಿಗೆ ಒಂದಾಗುತ್ತಿದ್ದಾರೆ.

  ಕರಣ್ ಜೋಹರ್ ವಿರುದ್ಧ ಶಾರುಖ್ ಖಾನ್ ಫ್ಯಾನ್ಸ್ ಗರಂ

  ನಿರ್ದೇಶಕ ರೋಹಿತ್ ಶೆಟ್ಟಿ ಮತ್ತು ಅಕ್ಷಯ್ ಕಮಾರ್ ಕಾಂಬಿನೇಶನ್ ನಲ್ಲಿ 'ಸೂರ್ಯವಂಶಿ' ಸಿನಿಮಾ ಸೆಟ್ಟೇರಿದೆ. ಮೊದಲ ಬಾರಿಗೆ ರೋಹಿತ್ ಶೆಟ್ಟಿ, ಅಕ್ಷಯ್ ಕುಮಾರ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಟೈಟಲ್ ಮೂಲಕವೇ ಎಲ್ಲರ ಗಮನ ಸೆಳೆದ್ದ ರೋಹಿತ್, ನಾಯಕಿಯ ಆಯ್ಕೆ ವಿಚಾರದಲ್ಲಿ ತಲೆಕೆಡಿಸಿಕೊಂಡಿದ್ದರು. ಜೊತೆಗೆ ಸಾಕಷ್ಟು ನಾಯಕಿಯರ ಹೆಸರುಗಳು ಕೇಳಿಬರುತ್ತಿತ್ತು. ಆದ್ರೀಗ ಕತ್ರಿನಾ ಕೈಫ್ ಅವರನ್ನು ಫೈನಲ್ ಮಾಡಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಬಹಿರಂಗ ಪಡಿಸಿಲ್ಲ.

  ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶೋತ್ಸವ: ಕತ್ರೀನಾ ಮಾಡಿದಳು ಯಡವಟ್ಟು

  ಕತ್ರಿನಾ ಕೈಫ್ ಸದ್ಯ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇತ್ತ ಕೇಸರಿ ಸಿನಿಮಾದ ಸಕ್ಸಸ್ ನಲ್ಲಿರುವ ಅಕ್ಷಯ್ ಕುಮಾರ್ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಹೌಸ್ ಫುಲ್ 4', 'ಗುಡ್ ನ್ಯೂಸ್', 'ಮಿಷನ್ ಮಂಗಲ್' ಚಿತ್ರಗಳಲ್ಲಿ ಅಭಿನಯಸುತ್ತಿದ್ದಾರೆ. ಈ ಸಿನಿಮಾಗಳು ಮುಗಿದ ಬಳಿಕ ರೋಹಿತ್ ಶೆಟ್ಟಿ ನಿರ್ದೇಶನದ 'ಸೂರ್ಯವಂಶಿ'ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  Akshay Kumar and Katrina Kaif to sharing screen space after 9 years in 'Sooryavanshi' movie. this movie is directed by Rohit Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X