Just In
Don't Miss!
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- News
ಪೆಟ್ರೋಲ್ ಪಂಪ್ಗಳಿಂದ ಪ್ರಧಾನಿ ಮೋದಿ ಫೋಟೊ ತೆರವಿಗೆ ಚುನಾವಣಾ ಆಯೋಗ ಸೂಚನೆ
- Automobiles
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Sports
'ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ನಲ್ಲಿ ನಾನು ಇಂಗ್ಲೆಂಡ್ಗೆ ಚಿಯರ್ ಮಾಡ್ತೇನೆ'
- Lifestyle
ಮಾರ್ಚ್ ನಲ್ಲಿದೆ ಕಷ್ಟ ನಿವಾರಿಸುವ ಫಾಲ್ಗುಣ ಅಮವಾಸ್ಯೆ, ಯಾಕಿಷ್ಟು ಮಹತ್ವ ಗೊತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
ಹೇರಾ ಫೆರಿ, ಫಿರ್ ಹೇರಾ ಫೆರಿ, ಗರಂ ಮಸಾಲ, ವೆಲ್‌ಕಮ್, ಭೂಲ್ ಭುಲಯ್ಯ, ಮತ್ತು ಓ ಮೈ ಗಾಡ್ ಅಂತಹ ಚಿತ್ರಗಳ ಮೂಲಕ ಬಾಲಿವುಡ್ ಪ್ರೇಕ್ಷಕರನ್ನು ರಂಜಿಸಿರುವ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಜೋಡಿ ಮತ್ತೊಮ್ಮೆ ಒಟ್ಟಿಗೆ ಬರ್ತಿದೆ.
ಕಳೆದ ಕೆಲವು ವರ್ಷಗಳಿಂದ ಹೇರಾ ಫೆರಿ 3 ಸಿನಿಮಾದ ಮೂಲಕ ಇವರಿಬ್ಬರ ಜೋಡಿ ಮತ್ತೆ ಬರ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಅಧಿಕೃತವಾಗಿ ಪ್ರಕಟಣೆಯಾಗಿರಲಿಲ್ಲ. ಇದೀಗ, ಓ ಮೈ ಗಾಡ್ ಮುಂದುವರಿದ ಭಾಗಕ್ಕಾಗಿ ಅಕ್ಷಯ್ ಮತ್ತು ಪರೇಶ್ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಈ ಕುರಿತು ಪಿಂಕ್‌ವಿಲ್ಲಾ ವೆಬ್‌ಸೈಟ್ ವರದಿ ಮಾಡಿದ್ದು, ಓ ಮೈ ಗಾಡ್ ಸೀಕ್ವೆಲ್ ಸಿದ್ಧವಾಗಲಿದೆ. ಸದ್ಯದಲ್ಲೇ ಈ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ವರದಿ ಮಾಡಿದೆ.
ಜಪಾನ್ನಲ್ಲಿ 'ಮಿಷನ್ ಮಂಗಲ್' ರಿಲೀಸ್: ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ
2012ರ ಸೂಪರ್ ಹಿಟ್ ಚಿತ್ರದ ಮುಂದುವರಿದ ಭಾಗವನ್ನು ಅಶ್ವಿನಿ ವರ್ಧೆ ಮತ್ತು ಅಕ್ಷಯ್ ಕುಮಾರ್ ಜಂಟಿಯಾಗಿ ನಿರ್ಮಿಸಲು ಯೋಜಿಸಿದ್ದಾರಂತೆ. ಕಳೆದ ಆರು ತಿಂಗಳಿಂದ ಓ ಮೈ ಗಾಡ್ ಸ್ಕ್ರಿಪ್ಟ್ ಕೆಲಸದಲ್ಲಿ ಸ್ವತಃ ಅಕ್ಷಯ್ ಕುಮಾರ್ ತೊಡಗಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ 'ಬಚ್ಚನ್ ಪಾಂಡೆ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್
ಬೇರೆ ಸಿನಿಮಾಗಳ ಶೂಟಿಂಗ್ ನಡುವೆಯೂ ಅಶ್ವಿನಿ ವರ್ಧೆ ಜೊತೆ ಸಂಪರ್ಕದಲ್ಲಿದ್ದರು. ಸ್ಕ್ರಿಪ್ಟ್ ಕೆಲಸ ಮಾಡಿದ್ದರು. ಈಗ ಸ್ಕ್ರಿಪ್ಟ್ ಅಂತಿಮ ಕೆಲಸ ಮುಗಿದಿದೆ. ಚಿತ್ರದ ಪೂರ್ವ ತಯಾರಿ ಕೆಲಸ ನಡೆಯುತ್ತಿದ್ದು, ಸಮ್ಮರ್‌ವೊತ್ತಿಗೆ ಸಿನಿಮಾ ಶುರುವಾಗಬಹುದು ಎಂದು ಹೇಳಲಾಗಿದೆ.
ನಿರ್ದೇಶಕರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. 2012ರಲ್ಲಿ ತೆರೆಕಂಡಿದ್ದ ಓ ಮೈ ಗಾಡ್ ಚಿತ್ರವನ್ನು ಉಮೇಶ್ ಶುಕ್ಲಾ ನಿರ್ದೇಶಿಸಿದ್ದರು. ನಂತರ ಈ ಚಿತ್ರ ತೆಲುಗಿನಲ್ಲಿ ಗೋಪಾಲ ಗೋಪಾಲ ಹಾಗೂ ಕನ್ನಡದಲ್ಲಿ ಮುಕುಂದಾ ಮುರಾರಿ ಹೆಸರಿನಲ್ಲಿ ರೀಮೇಕ್ ಆಗಿತ್ತು.