For Quick Alerts
  ALLOW NOTIFICATIONS  
  For Daily Alerts

  100 ಆಮ್ಲಜನಕ ಸಾಂದ್ರಕ ದಾನ ಮಾಡಿದ ಅಕ್ಷಯ್ ಕುಮಾರ್ ದಂಪತಿ

  |

  ಕೊರೊನಾ ವೈರಸ್ ಎರಡನೇ ಅಲೆ ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದೇಶದಲ್ಲಿ ಬೆಡ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ, ವೆಂಟಿಲೇಟರ್ ಸಮಸ್ಯೆ ಹೀಗೆ ಹಲವು ರೀತಿಯ ಸಮಸ್ಯೆಗಳು ಎದುರಾಗಿದ್ದು ಬಹಳ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.

  ಅಗತ್ಯ ಚಿಕಿತ್ಸೆ ಸಿಗದ ರೋಗಿಗಳು ಪರದಾಡುತ್ತಿದ್ದಾರೆ. ವಿಶೇಷವಾಗಿ ಆಕ್ಸಿಜನ್ ಕೊರತೆ ಎದುರಾಗಿದೆ. ಇದೀಗ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಪತ್ನಿ ಟ್ವಿಂಕಲ್ ಖನ್ನಾ 100 ಆಮ್ಲಜನಕ ಸಾಂದ್ರಕಗಳನ್ನು ನೆರವು ನೀಡಲು ಮುಂದಾಗಿದ್ದಾರೆ.

  ಗೌತಮ್ ಗಂಭೀರ್ ಫೌಂಡೇಶನ್‌ಗೆ 1 ಕೋಟಿ ನೆರವು ನೀಡಿದ ಅಕ್ಷಯ್ ಕುಮಾರ್ಗೌತಮ್ ಗಂಭೀರ್ ಫೌಂಡೇಶನ್‌ಗೆ 1 ಕೋಟಿ ನೆರವು ನೀಡಿದ ಅಕ್ಷಯ್ ಕುಮಾರ್

  ಮಂಗಳವಾರ ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ಟ್ವಿಂಕಲ್ ಖನ್ನಾ ''ಕೋವಿಡ್19 ರೋಗಿಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ 100 ಆಮ್ಲಜನಕದ ಸಾಂದ್ರತೆಯನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅದನ್ನು ಅಗತ್ಯವೆನಿಸುವವರಿಗೆ ನೀಡಲಿದ್ದೇವೆ'' ಎಂದು ತಿಳಿಸಿದ್ದಾರೆ.

  ''ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಡಲು ಇತರರು ತಮ್ಮ ಕೈಯಿಂದ ಸಾಧ್ಯವಾದಷ್ಟು ಸಹಾಯ ಮಾಡಿ'' ಎಂದು ವಿನಂತಿಸಿದ್ದಾರೆ.

  ಮತ್ತೊಂದು ಅದ್ಭುತ ಸುದ್ದಿ ಹಂಚಿಕೊಂಡಿರುವ ಟ್ವಿಂಕಲ್ ''ಡೈವಿಕ್ ಫೌಂಡೇಶನ್ ಮೂಲಕ ಲಂಡನ್ ಎಲೈಟ್ ಹೆಲ್ತ್‌ನ ಡಾ ದ್ರಾಶ್ನಿಕಾ ಪಟೇಲ್ ಮತ್ತು ಡಾ.ಗೋವಿಂದ್ ಬಂಕಾನಿ ಅವರು 120 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡುತ್ತಿದ್ದಾರೆ. ಇದರ ಜೊತೆಗೆ ಅಕ್ಷಯ್ ಕುಮಾರ್ ಮತ್ತು ನಾನು 100 ಆಮ್ಲಜನಕ ಸಾಂದ್ರಕಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮಲ್ಲಿ ಈಗ ಒಟ್ಟು 220 ಆಮ್ಲಜನಕ ಸಾಂದ್ರಕ ಇದೆ'' ಎಂದು ತಿಳಿಸಿದ್ದಾರೆ.

  ತಮ್ಮಲ್ಲಿರುವ 100 ಆಮ್ಲಜನಕ ಸಾಂದ್ರಕ ಹಾಗೂ ಲಂಡನ್‌ನಿಂದ ತರಸಲಾಗುವ 120 ಆಮ್ಲಜನಕ ಸಾಂದ್ರಕಗಳನ್ನು ಅಗತ್ಯ ರೋಗಿಗಳಿಗೆ ತಲುಪಿಸಲು ನೋಂದಾಯಿತ ಎನ್‌ಜಿಓ ಸಂಸ್ಥೆ ಯಾವುದಾದರೂ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ

  ರಾಯರ ಪವಾಡದಿಂದ‌ ನನ್ನ‌ ತಮ್ಮ ಬದುಕಿದ ಅಂದ್ರು ಕೋಮಲ್ | Filmibeat Kannada

  ಅಂದ್ಹಾಗೆ, ಅಕ್ಷಯ್ ಕುಮಾರ್ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಅಗತ್ಯ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು. ಇತ್ತೀಚಿಗಷ್ಟೆ ದೆಹಲಿ ಸಂಸದ ಗೌತಮ್ ಗಂಭೀರ್ ಫೌಂಡೇಶನ್‌ಗೆ 1 ಕೋಟಿ ನೆರವು ನೀಡಿದ್ದರು.

  English summary
  Bollywood actor Akshay Kumar and his wife Twinkle Khanna donate 100 oxygen concentrator to help COVID-19 patients.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X