»   » ಪ್ರೇಯಸಿ ಜೊತೆ ಡೇಟಿಂಗ್: ಅಕ್ಷಯ್ ಕುಮಾರ್ ಗೆ ಪತ್ನಿ ವಾರ್ನ್ !

ಪ್ರೇಯಸಿ ಜೊತೆ ಡೇಟಿಂಗ್: ಅಕ್ಷಯ್ ಕುಮಾರ್ ಗೆ ಪತ್ನಿ ವಾರ್ನ್ !

By: ಭರತ್‌
Subscribe to Filmibeat Kannada

ಬಾಲಿವುಡ್‌ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಸದ್ಯ ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಕೊಡ್ತಿರೊ ನಟ. ಕಳೆದ ಎರಡು ವರ್ಷದಲ್ಲಿ ಅಕ್ಷಯ್ ಅಭಿಯದ ಬಹುತೇಕ ಎಲ್ಲಾ ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ. ಹೀಗೆ ಸಕ್ಸಸ್ ಬೆನ್ನಟ್ಟಿ ಹೊರಟಿರೊ ಅಕ್ಷಯ್ ಕುಮಾರ್ ರ ದಾಂಪತ್ಯ ಜೀವನದಲ್ಲಿ ಈಗ ನಟಿಯೊಬ್ಬಳ ಎಂಟ್ರಿಯಾಗಿದೆ.

ಹೌದು, ಬಾಲಿವುಡ್ ನಟಿಯೊಬ್ಬರ ಸ್ನೇಹದಿಂದ ಅಕ್ಷಯ್ ಕುಮಾರ್ ಹಾಗೂ ಅವರ ಪತ್ನಿ ಟ್ವಿಂಕಲ್ ಖನ್ನಾ ಮಧ್ಯೆ ಮನಸ್ಥಾಪ ಉಂಟಾಗಿದ್ದು, ಈ ಬಗ್ಗೆ ಟ್ವಿಂಕಲ್ ಖನ್ನಾ ತನ್ನ ಪತಿಗೆ ಆ ನಟಿಯಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಖ್ಯಾತ ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ.[ಮಾಧ್ಯಮದ ಮುಂದೆ ಕಣ್ಣೀರು ಹಾಕಿದ ಅಕ್ಷಯ್ ಕುಮಾರ್]

ಅಕ್ಷಯ್ ಕುಮಾರ್ ಹೆಸರು ಈ ರೀತಿ ನಟಿಯರ ಜೊತೆ ಸಿಲುಕಿಕೊಂಡಿರುವುದು ಇದೆ ಮೊದಲಲ್ಲ. ಇದಕ್ಕೂ ಮುಂದೆ ಹಲವು ಬಾಲಿವುಡ್ ನಾಯಕಿಯರ ಜೊತೆ ಖಿಲಾಡಿಯ ರಿಲೇಶನ್ ‍ಷಿಪ್ ಕೇಳಿಬಂದಿತ್ತು. ಹಾಗಾದ್ರೆ ಯಾವೆಲ್ಲ ನಟಿಯರ ಜೊತೆ ಅಕ್ಕಿಯ ಹೆಸ್ರು ಸಿಲುಕಿಕೊಂಡಿತ್ತು ಅಂತ ಮುಂದೆ ಓದಿ....

'ಮಾಡೆಲ್ ಪೂಜಾ' ಜೊತೆ ಅಕ್ಕಿ !

ಬಾಲಿವುಡ್‌ ನಟಿ ಹಾಗೂ ಮಾಜಿ ಮಾಡೆಲ್ ಪೂಜಾ ಬಾತ್ರ ಜೊತೆ ಅಕ್ಷಯ್ ಕುಮಾರ್ ಡೇಟಿಂಗ್ ಮಾಡ್ತಿದ್ದಾರೆ ಅಂತ ಈ ಹಿಂದೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಪೂಜಾ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದು, ಮಾಡಲಿಂಗ್ ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ರು.

'ಆಯಿಶಾ' ಜೊತೆ ಖಿಲಾಡಿ

ಬಾಲಿವುಡ್ ನಲ್ಲಿ 'ಖಿಲಾಡಿ' ಅಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ಜೋಡಿ ಆಯಿಶಾ ಜುಕ್ಲಾ ಹಾಗೂ ಅಕ್ಷಯ್ ಕುಮಾರ್. ಈ ಸಿನಿಮಾ ಮಾಡಬೇಕಾದ್ರೆ ಇವರಿಬ್ಬರ ಮಧ್ಯೆ ಪ್ರೇಮಾಂಕುರ ಆಗಿತ್ತಂತೆ.

ಅಕ್ಷಯ್-ರವಿನಾ

ಬಿಟೌನ್ ಗಲ್ಲಿಯಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದು ಅಕ್ಷಯ್ ಕುಮಾರ್ ಹಾಗೂ ರವಿನಾ ಜೋಡಿ. 'ಮೊಹ್ರಾ' ಚಿತ್ರದ ಮೂಲಕ ತೆರೆ ಹಂಚಿಕೊಂಡ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರಂತೆ.

ರೇಖಾಗೂ ಅಕ್ಷಯ್ ಮೇಲೆ ಲವ್ !

ಬಾಲಿವುಡ್ ನ ಎವರ್ ಗ್ರೀನ್ ನಟಿ ರೇಖಾಗೂ ಅಕ್ಷಯ್ ಕುಮಾರ್ ಮೇಲೆ ಲವ್ ಆಗಿತ್ತು ಅನ್ನೋದು ಗೊತ್ತಿರೊ ಸಮಾಚಾರ. 'ಖಿಲಾಡಿಯೊಂಕಾ ಖಿಲಾಡಿ' ಚಿತ್ರದಲ್ಲಿ ರೇಖಾ ಹಾಗೂ ಅಕ್ಷಯ್ ಕುಮಾರ್ ಒಟ್ಟಾಗಿ ಕಾಣಿಸಿಕೊಂಡಿದ್ರು.

ಶಿಲ್ಪಾ ಶೆಟ್ಟಿ ಜೊತೆ ಡೇಟಿಂಗ್ !

ಶಿಲ್ಪಾ ಶೆಟ್ಟಿ ಜೊತೆಯಲ್ಲಿ ಅಕ್ಕಿ ಡೇಟಿಂಗ್ ಮಾಡಿದ್ರಂತೆ. ಒಟ್ಟಾಗಿ ತೆರೆ ಹಂಚಿಕೊಂಡಿದ್ದ ಈ ಜೋಡಿಗಳು ಪ್ರಣಯ ಪಕ್ಷಿಗಳಂತೆ ಓಡಾಡಿದ್ರಂತೆ. ಆದ್ರೆ, ಟ್ವಿಂಕಲ್ ಖನ್ನಾ ಪರಿಚಯದಿಂದ ಶಿಲ್ಪಾ ಶೆಟ್ಟಿಯನ್ನ ಅಕ್ಷಯ್ ದೂರು ಮಾಡಿಕೊಳ್ಳಬೇಕಾಯ್ತಂತೆ.

ಟ್ವಿಂಕಲ್ ಖನ್ನಾ ಜೊತೆ ದಾಂಪತ್ಯ !

ಹಲವು ನಟಿಯರು ಜೊತೆ ಡೇಟಿಂಗ್ ಮಾಡಿದ್ದ ಅಕ್ಷಯ್ ಕುಮಾರ್, ಬಾಲಿವುಡ್ ನ ರಾಜೇಶ್ ಖನ್ನಾ ಹಾಗೂ ಡಿಂಪಲ್ ಕಪಾಡಿಯಾ ದಂಪತಿಯ ಮುದ್ದಿನ ಮಗಳು ಟ್ವಂಕಲ್ ಖನ್ನಾರನ್ನ 2001ರಲ್ಲಿ ಪ್ರೀತಿಸಿ ಮದುವೆಯಾದ್ರು.

ಮದುವೆ ನಂತರವೂ ಡೇಟಿಂಗ್ !

ಟ್ವಿಂಕಲ್ ಖನ್ನಾರನ್ನ ವಿವಾಹವಾದ ಕೆಲ ವರ್ಷದ ನಂತರ ಪ್ರಿಯಾಂಕ ಚೋಪ್ರಾ ಜೊತೆ ಖಿಲಾಡಿ ಹೆಸ್ರು ಅಂಟಿಕೊಂಡಿತು. 'ಅಂದಾಜ್', 'ಮುಜ್ಸೆ ಶಾದಿ ಕರೋಗಿ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸ್ಕ್ರೀನ್ ಶೇರ್ ಮಾಡಿದ ಈ ಜೋಡಿ ಹೆಚ್ಚು ಸುದ್ದಿಯಾಗಿದ್ರು.

ಲೇಟೆಸ್ಟ್ ! ಜಾಕ್ವೆಲಿನ್ ಜೊತೆ ಅಕ್ಷಯ್

ಹೀಗೆ ಮದುವೆಗೆ ಮುಂಚೆ ಮದುವೆ ಆದ್ಮೆಲೆ ಹಲವು ನಟಿಯರು ಜೊತೆ ರಿಲೇಶನ್ ‍‍ಷಿಪ್ ಮುಂದುವರೆಸಿದ್ದ ಅಕ್ಷಯ್ ಕುಮಾರ್, ಈಗ ಲೇಟೆಸ್ಟ್ ಆಗಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಲವ್ವಿಡವ್ವಿ ಶುರು ಮಾಡಿಕೊಂಡಿದ್ದಾರಂತೆ. ಇದ್ರಿಂದ ಟ್ವಿಂಕಲ್ ಖನ್ನಾ ಫುಲ್ ಗರಂ ಆಗಿದ್ದು, ಅಕ್ಷಯ್ ಗೆ ವಾರ್ನಿಂಗ್ ಕೂಡ ಮಾಡಿದ್ದಾರಂತೆ.

ಜಾಕ್ವೆಲಿನ್ ರಿಂದ ದೂರವಿರುವಂತೆ ಎಚ್ಚರಿಕೆ !

ಅಕ್ಷಯ್ ಕುಮಾರ್ ಅಭಿನಯದ ಹೌಸಫುಲ್-೩, ಬ್ರದರ್ಸ್ ಚಿತ್ರಗಳಲ್ಲಿ ಜಾಕ್ವೆಲಿನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೀಗಾಗಿ ಇನ್ಮುಂದೆ ಜಾಕ್ವೆಲಿನ್ ಜೊತೆ ಸಿನಿಮಾ ಮಾಡಬಾರದು ಅಂತಾ ಟ್ವಿಂಕಲ್ ಖನ್ನಾ ಎಚ್ಚರಿಕೆ ನೀಡಿದ್ದಾರಂತೆ.

English summary
Akshay Kumar Cheating On His Wife Twinkle Khanna For Jacqueline Fernandez. when Akshay Kumar's wife Twinkle Khanna came to know about it, he warned Akshay Kumar to stay away from Jacqueline Fernandez. She also told him never to work with Jacky again.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada