For Quick Alerts
  ALLOW NOTIFICATIONS  
  For Daily Alerts

  ಉತ್ತರಾಖಂಡ ಹಿಮನದಿ ಸ್ಫೋಟ: ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಅಕ್ಷಯ್, ಅಜಯ್, ಕರೀನಾ ಪ್ರಾರ್ಥನೆ

  |

  ಉತ್ತರಾಖಂಡದ ಚಮೋಲಿ ಜಿಲ್ಲಿಯ ಜೋಶಿಮಠದಲ್ಲಿ ಸಂಭವಿಸಿದ ಹಿಮನದಿ ಸ್ಫೋಟದಿಂದ 7 ಮಂದಿ ಮೃಪಟ್ಟಿದ್ದು, 125ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಕಣ್ಮರೆಯಾದವರನ್ನು ಪತ್ತೆ ಹಚ್ಚಲು ಶೋಧಕಾರ್ಯ ನಡೆಯುತ್ತಿದೆ.

  ನೈಸರ್ಗಿಕ ವಿಪತ್ತಿಗೆ ಸಿಲುಕಿ ಬಳಲುತ್ತಿರುವವರಿಗೆ ಅನೇಕರು ಪ್ರಾರ್ಥನೆ ಮಾಡುತ್ತಿದ್ದಾರೆ. ಬೇರೆ ಬೇರೆ ಕ್ಷೇತ್ರದ ಗಣ್ಯರು ಮತ್ತು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅನೇಕರು ವಿಪತ್ತು ನಿರ್ವಹಣಾ ಅಧಿಕಾರಿಗಳ ಸಂಪರ್ಕ ಸಂಖ್ಯೆ ಮತ್ತು ಇತರ ಸಹಾಯವಾಣಿ ಸಂಖ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  'ವಿದೇಶಿ ಪ್ರಜೆ ಅಕ್ಷಯ್ ಕುಮಾರ್ ಭಾರತದ ಆಂತರಿಕ ವಿಷಯದಲ್ಲಿ ಮೂಗುತೂರಿಸುವುದೇಕೆ'

  ಬಾಲಿವುಡ್ ನಟಿ ಕರೀನಾ ಕಪೂರ್ ಸಹ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರಿನಾ, ಉತ್ತರಾಖಂಡದಲ್ಲಿ ಭೀಕರ ದುರಂತದಿಂದ ಬಳಲುತ್ತಿರುವವರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನನ್ನ ಪ್ರಾರ್ಥನೆ ಎಂದು ಹೇಳಿದ್ದಾರೆ.

  ಅನೇಕರು ಟ್ವೀಟ್ ಮಾಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ದುರಂತದಲ್ಲಿ ಬಲಿಯಾದವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ದುರಂತದಲ್ಲಿ ಸಿಲುಕಿದವರು ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅಕ್ಷಯ್ ಕುಮಾರ್, ಅಜಯ್ ದೇವಗನ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ತಮನ್ನಾ ಭಾಟಿಯಾ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

  ಸಲಾರ್ ಗೆ ಎಂಟ್ರಿ ಕೊಟ್ಟ ಕನ್ನಡದ ಸ್ಟಾರ್ ವಿಲನ್ | Filmibeat Kannada

  ಹಿಮನದಿ ಸ್ಫೋಟದಿಂದ ಬಾರಿ ದುರಂತ ಸಂಭವಿಸಿದ್ದು, ವಿದ್ಯುತ್ ಯೋಜನೆಯ ಅಣೆಕಟ್ಟೆಯೂ ಈ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಹಲವು ಕಾರ್ಮಿಕರು ಕೊಚ್ಚಿಹೋಗಿದ್ದಾರೆ.

  English summary
  Bollywood Actors Akshay kumar, Kareena Kapoor, Ajay Devgan and others send prayers for safety and well being of those Affected by Uttarakhand glacier burst.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X