»   » ಸೂಪರ್ ಸ್ಟಾರ್ ರಜಿನಿ ಕೈ ಹಿಡಿದ ಬಿಗ್ ಬಿ ಅಮಿತಾಭ್ ಬಚ್ಚನ್

ಸೂಪರ್ ಸ್ಟಾರ್ ರಜಿನಿ ಕೈ ಹಿಡಿದ ಬಿಗ್ ಬಿ ಅಮಿತಾಭ್ ಬಚ್ಚನ್

Posted By:
Subscribe to Filmibeat Kannada

ಕಾಲಿವುಡ್ ನ ಸೂಪರ್ ಸ್ಟಾರ್ ರಜಿನಿ ಕಾಂತ್ ಅವರ ಬಹುನಿರೀಕ್ಷಿತ ಸಿನಿಮಾ 'ಎಂಧಿರನ್ 2.0' ನ ಅತಿಥಿ ಪಾತ್ರದಲ್ಲಿ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ಅವರು ಕಾಣಿಸಿಕೊಳ್ಳಲಿದ್ದಾರೆ.

'ಎಂಧಿರನ್ 2.0' ಚಿತ್ರದ ನಿರ್ದೇಶಕ ಶಂಕರ್ ಮತ್ತು ಇಡೀ ಚಿತ್ರತಂಡ ಸದ್ಯಕ್ಕೆ ದೆಹಲಿಯಲ್ಲಿ ಶೂಟಿಂಗ್ ಗಾಗಿ ಬೀಡು ಬಿಟ್ಟಿದೆ. ಅಲ್ಲಿನ ಜವಾಹರ್ ಲಾಲ್ ನೆಹರು ಸ್ಟೇಡಿಯಂನಲ್ಲಿ ಶೂಟಿಂಗ್ ಗಾಗಿ ಎಲ್ಲಾ ತಯಾರಿ ನಡೆಯುತ್ತಿದೆ.[ರಜನಿಕಾಂತ್ ಎಂಧಿರನ್‌ಗೆ ಮತ್ತೊಂದು ಪೀಕಲಾಟ!]

Hindi Actor Amitabh and Abhishek Bachchan in Rajinikanth's '2.0'

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಚಿತ್ರದ ಖಳನಟ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸನ್ನಿವೇಶದ ದೃಶ್ಯಗಳನ್ನು ಸ್ಟೇಡಿಯಂನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.[ಕತೆ ಕದ್ದ ಆರೋಪ; ಹೊಸ ವಿವಾದದಲ್ಲಿ ಎಂಧಿರನ್]

Hindi Actor Amitabh and Abhishek Bachchan in Rajinikanth's '2.0'

ಅಂದಹಾಗೆ ದೆಹಲಿಯಲ್ಲಿ ಶೂಟಿಂಗ್ ನಡೆಯುತ್ತಿರುವ ಚಿತ್ರದ ಸನ್ನಿವೇಶದ ಪ್ರಕಾರ ಚೆನ್ನೈ ಮತ್ತು ಮುಂಬೈ ಫುಟ್ ಬಾಲ್ ತಂಡಗಳು ಆಟವಾಡಿದ್ದು, ಇಲ್ಲಿ ತಂಡದ ಮಾಲೀಕರಾಗಿ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ಮಿಂಚುತ್ತಿದ್ದಾರಂತೆ.[ಎಂಧಿರನ್ ಚಿತ್ರಮಂದಿರಗಳ ಮೇಲೆ ವಾಣಿಜ್ಯ ತೆರಿಗೆ ದಾಳಿ]

ಆದರೆ ಈ ಸುದ್ದಿಯನ್ನು ಗೌಪ್ಯವಾಗಿಟ್ಟಿರುವ ನಿರ್ದೇಶಕ ಶಂಕರ್ ಅವರು ಈ ಪಾತ್ರಗಳ ಕುರಿತಾದ ಬಗ್ಗೆ ಅಧಿಕೃತ ಹೇಳಿಕೆ ನೀಡುತ್ತಿಲ್ಲ.

rajinikanth

ಇನ್ನೊಂದು ವಿಷ್ಯಾ ಏನಪ್ಪಾ ಅಂದ್ರೆ 'ಎಂಧಿರನ್ 2.0' ಚಿತ್ರದಲ್ಲಿ ಖಳನಟನ ಪಾತ್ರ ನಿರ್ವಹಿಸಲು ಬಿಗ್ ಬಿ ಅಮಿತಾಭ್ ಬಚ್ಚನ್ ಅವರನ್ನು ಕೇಳಿಕೊಳ್ಳಲಾಗಿತ್ತು. ಆದರೆ ಇದಕ್ಕೆ ಖುದ್ದು ರಜಿನಿ ಅವರೇ ನೋ ಎಂದಿದ್ದರು. ತದನಂತರ ಅಮಿತಾಭ್ ಅವರೇ ಒಲ್ಲೆ ಎಂದಾಗ ಆ ಜಾಗಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಆಗಮಿಸಿದರು.

rajinikanth

ಇದೀಗ ರಜಿನಿಕಾಂತ್ ಅವರ ಮೇಲಿರುವ ಪ್ರೀತಿ-ವಿಶ್ವಾಸದ ಮೇರೆಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಅವರು ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಿಗ್ ಬಜೆಟ್ 'ಎಂಧಿರನ್ 2.0' ಸಿನಿಮಾದಲ್ಲಿ ಮಿಂಚಲಿದ್ದಾರೆ.

ಶಂಕರ್ ನಿರ್ದೇಶನದ ಚಿತ್ರದಲ್ಲಿ 'ಐ' ಖ್ಯಾತಿಯ ನಟಿ ಆಮಿ ಜಾಕ್ಸನ್ ಅವರು ಮಿಂಚುತ್ತಿದ್ದಾರೆ. ಈ ಮೊದಲು 'ಭಾಗ-1'ರಲ್ಲಿ ಬಚ್ಚನ್ ಸೊಸೆ ಐಶ್ವರ್ಯ ರೈ ಮಿಂಚಿದ್ದರು. ಚಿತ್ರದ ಹಾಡುಗಳಿಗೆ ಎ.ಆರ್ ರೆಹಮಾನ್ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

English summary
Hindi Actor Amitabh Bachchan and his actor-son Abhishek may play cameo roles in superstar Rajinikanth's upcoming sci-fi thriller 'Endhiran 2.O'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada