»   » 51 ಡಿಗ್ರಿ ತಾಪದಲ್ಲಿ ಕೂಲಾಗಿದ್ದ ಅಕ್ಷಯ್ ಕುಮಾರ್!

51 ಡಿಗ್ರಿ ತಾಪದಲ್ಲಿ ಕೂಲಾಗಿದ್ದ ಅಕ್ಷಯ್ ಕುಮಾರ್!

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಆಕ್ಷಯ್ ಕುಮಾರ್ ಅಂದ್ರೇನೇ ಖತರೋಂಕೆ ಖಿಲಾಡಿ. ಬೆಂಕಿ, ಗಾಳಿ, ನೀರು, ಎತ್ತರ, ಇದ್ಯಾವುದನ್ನೂ ಲೆಕ್ಕಿಸದೇ ಜೀವವನ್ನೇ ಪಣಕ್ಕಿಟ್ಟು 'ಆಕ್ಷನ್' ಮಾಡುವುದರಲ್ಲಿ ಅಕ್ಷಯ್ ಕುಮಾರ್ ನಿಸ್ಸೀಮ.

ಪ್ರತಿಯೊಂದು ಸಿನಿಮಾದಲ್ಲಿ ಏನಾದರೊಂದು ಸೂಪರ್ ಸ್ಟಂಟ್ ಮಾಡಿ ಎಲ್ಲರ ಕಣ್ಣುಕುಕ್ಕುವ ಅಕ್ಕಿ, ಈ ಬಾರಿ 51 ಡಿಗ್ರಿ ತಾಪದಲ್ಲಿ 'ಕೂಲಾ'ಗಿದ್ದು ಎಲ್ಲರು ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಸಾಮಾನ್ಯ 30 ರಿಂದ 35 ಡಿಗ್ರಿ ತಾಪವನ್ನೇ ಎಲ್ಲರು ತಡೆಯವುದಕ್ಕೆ ಆಗುವುದಿಲ್ಲ. ಅಂತದ್ರಲ್ಲಿ 51 ಡಿಗ್ರಿ ಉಷ್ಣಾಂಶ ಅಂದ್ರೆ ಸುಮ್ನೆನಾ. ಊಹಿಸಿಕೊಂಡರೆ ಬೆಂದು ಬೆವರುವಾಗ, ಅಕ್ಕಿ ಹೇಗೆ ಶೂಟ್ ಮಾಡಿದ್ರು ಅಂದ್ರೆ ಪಾರ್ಕ್ ನಲ್ಲಿ ಓಡಾಡುವಷ್ಟೇ ಆರಾಮಾಗಿದ್ದರು ಅಂತ ಚಿತ್ರತಂಡ ಹೇಳಿದೆ. [ಅಕ್ಷಯ್ ಕುಮಾರ್ ಪಾದದ ಮೇಲೆ ಹರಿದ ಟ್ರಕ್]

Akshay Kumar shoots an action sequence for Baby in 51 degrees heat

ಅಸಲಿಗೆ ಅಕ್ಷಯ್ ಕುಮಾರ್ 51 ಡಿಗ್ರಿ ಉಷ್ಣಾಂಶದಲ್ಲಿ ಶೂಟ್ ಮಾಡಿರುವುದು ಅಬುಧಾಬಿಯ ಮರುಭೂಮಿಯಲ್ಲಿ. 'ಬೇಬಿ' ಚಿತ್ರದಲ್ಲಿನ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಗಾಗಿ ಅಲ್ಲಿಗೆ ತೆರಳಿದ್ದ ಚಿತ್ರತಂಡಕ್ಕೆ, ಉಷ್ಣಾಂಶ ತುಂಬಾ ಕಿರಿಕಿರಿ ಉಂಟುಮಾಡಿತ್ತು. [ಸ್ಟಾರ್ ಪಟ್ಟಕ್ಕೆ ಆತ್ಮವನ್ನೇ ಪಣಕ್ಕಿಟ್ಟ ಖಿಲಾಡಿ ಅಕ್ಷಯ್]

ನಿಮಿಷಕೊಮ್ಮೆ ತಲೆ ಮೇಲೆ ನೀರು ಸುರಿದುಕೊಳ್ಳದೆ, ಕೈಯಲ್ಲಿ ಛತ್ರಿ ಹಿಡಿದುಕೊಳ್ಳದೆ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕದೇ ಇದ್ರೆ ಅಲ್ಲಿನ ತಾಪ ತಡೆಯುವುದು ತೀರಾ ಕಷ್ಟ. ಅಂತದ್ರಲ್ಲಿ ನೆಲದ ಮೇಲೆ ಕಾಲಿಡುವುದಕ್ಕೂ ಆಗದ ಪರಿಸ್ಥಿತಿ ಅಲ್ಲಿದ್ದಾಗ ಅಕ್ಕಿ ಸ್ಪಾಟ್ ಗೆ ಬರುತ್ತಾರೋ ಇಲ್ಲವೋ ಅನ್ನುವ ಅನುಮಾನ ಎಲ್ಲರಿಗೂ ಕಾಡ್ತಿತ್ತಂತೆ.

ಆದರೆ, ಅಕ್ಕಿ ಕೂಲಾಗಿ ಇದ್ದಿದ್ದರ ಜೊತೆಗೆ ಇಡೀ ಸೆಟ್ ಗೆ ಜೋಷ್ ತುಂಬಿ, ರೀಟೇಕ್ ಗಳನ್ನ ತೆಗೆದುಕೊಳ್ಳದೇ, ಒಂದೇ ಏಟಿಗೆ ಸೀನ್ ಕಂಪ್ಲೀಟ್ ಮಾಡಿದ್ದಾರೆ. ಹೆಸರಾಂತ ಹಾಲಿವುಡ್ ಸಾಹಸ ನಿರ್ದೇಶಕ ಸೈರಿಲ್ ರಫೇಲಿ ಸಂಯೋಜಿಸುತ್ತಿರುವ ಸಾಹಸ ದೃಶ್ಯಗಳನ್ನ ನೀರು ಕುಡಿದಷ್ಟೇ ಸಲೀಸಾಗಿ ಅಕ್ಷಯ್ ಮಾಡಿದ್ದಾರೆ.[ಮಹಿಳೆಯ ಜೀವ ಉಳಿಸಿದ ಕಿಲಾಡಿ ಅಕ್ಷಯ್ ಕುಮಾರ್]

ನೀರಜ್ ಪಾಂಡೇ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಬರೀ ಇಷ್ಟೇ ಅಲ್ಲ, ರೋಮಾಂಚನಕಾರಿ ವಿಷಯಗಳು ಇನ್ನೂ ಬಹಳಿಷ್ಟಿವೆ. ಎಲ್ಲವೂ ಬಹಿರಂಗ ಆಗಬೇಕಷ್ಟೆ. (ಏಜೆನ್ಸೀಸ್)

English summary
Bollywood Actor Akshay Kumar, known for his action prowess recently shot a larger action portion for his upcoming movie Baby, under extreme heat of 51 degrees in Abu Dhabi desert.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada