For Quick Alerts
  ALLOW NOTIFICATIONS  
  For Daily Alerts

  ಆಮೀರ್ ಖಾನ್ ಗಾಗಿ ಅಕ್ಷಯ್ ಕುಮಾರ್ ಹೀಗೆ ಮಾಡಿದ್ರಾ.?

  |

  ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಸದ್ಯ 'ಬೆಲ್ ಬಾಟಂ' ತೊಟ್ಟು ಸುದ್ದಿಯಲ್ಲಿದ್ದಾರೆ. ಇದರ ಬೆನ್ನಲ್ಲೆ ಮತ್ತೊಂದು ವಿಚಾರ ಸದ್ದು ಮಾಡುತ್ತಿದೆ. ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಬಚ್ಚನ್ ಪಾಂಡೆ ರಿಲೀಸ್ ಆಗಬೇಕಿದ್ದ ದಿನವೆ, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಕೂಡ ತೆರೆಗೆ ಬರುತ್ತಿದೆ.

  ಆದರೀಗ 'ಬಚ್ಚನ್ ಪಾಂಡೆ' ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಇದರಿಂದ ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ'ಗೆ ದಾರಿ ಸುಗಮವಾಗಿದೆ. 'ಬಚ್ಚನ್ ಪಾಂಡೆ' ಮತ್ತು ಆಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಮುಂದಿನ ವರ್ಷ ಕ್ರಿಸ್ ಮಸ್ ಗೆ ತೆರೆಗೆ ಬರಲು ಸಿದ್ಧವಾಗಿದ್ದವು. ಇಬ್ಬರು ಸೂಪರ್ ಸ್ಟಾರ್ ಸಿನಿಮಾಗಳು ಒಂದೆ ದಿನ ತೆರೆಗೆ ಬರುತ್ತಿರುವುದರಿಂದ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ವಾರ್ ಸಂಭವಿಸಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.

  ಖಿಲಾಡಿ ಅಕ್ಷಯ್ ಕುಮಾರ್ 'ಬಚ್ಚನ್ ಪಾಂಡೆ' ಲುಕ್ ಗೆ ಅಭಿಮಾನಿಗಳು ಫಿದಾಖಿಲಾಡಿ ಅಕ್ಷಯ್ ಕುಮಾರ್ 'ಬಚ್ಚನ್ ಪಾಂಡೆ' ಲುಕ್ ಗೆ ಅಭಿಮಾನಿಗಳು ಫಿದಾ

  ಆಮೀರ್ ಖಾನ್ ಗಾಗಿ ಅಕ್ಷಯ್ ಸಿನಿಮಾ ಮುಂದಕ್ಕೆ ಹೋಗಿದೆ ಅಂತ ಅದ್ಕೋಬೇಡಿ. ಸಿನಿಮಾ ಪೋಸ್ಟ್ ಪೋನ್ ಆಗಲು ಕಾರಣ ಸಿನಿಮಾದ ಕಥೆಯಂತೆ. ಚಿತ್ರದ ಕಥೆಗೆ ಇನ್ನು ಸಮಯ ಬೇಕಾಗುವ ಕಾರಣ ಬಚ್ಚನ್ ಪಾಂಡೆ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಆಮೀರ್ ಖಾನ್ ಎರಡು ವರ್ಷದ ನಂತರ 'ಲಾಲ್ ಸಿಂಗ್ ಚಡ್ಡಾ' ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ಆಮೀರ್ ಗೆ ಅಕ್ಷಯ್ ಬಿಗ್ ಫೈಟ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೀಗ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

  ಅಕ್ಷಯ್ ಕುಮಾರ್ ಬಳಿ ಸಾಲು ಸಾಲು ಸಿನಿಮಾಗಳಿವೆ. 'ಗುಡ್ ನ್ಯೂಸ್', 'ಸೂರ್ಯವಂಶಿ', 'ಲಕ್ಷ್ಮಿ ಬಾಂಬ್' ಮತ್ತು ಇತ್ತೀಚಿಗೆ ಅನೌನ್ಸ್ ಆಗಿರುವ 'ಬೆಲ್ ಬಾಟಂ' ಸಿನಿಮಾಗಳಲ್ಲಿ ಅಕ್ಷಯ್ ಬ್ಯುಸಿಯಾಗಿದ್ದಾರೆ. ಹೌಸ್ ಫುಲ್-4 ಸಿನಿಮಾ ನಂತರ ಅಕ್ಷಯ್ ಅಭಿನಯದ ಯಾವ ಸಿನಿಮಾ ತೆರೆಗೆ ಬರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Akshay Kumar starrer Bachchan Pandey release date postponed. Akshay Kumar Makes Way For Aamir Khan For A Solo Christmas Release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X