twitter
    For Quick Alerts
    ALLOW NOTIFICATIONS  
    For Daily Alerts

    ವಿವಾದದ ನಡುವೆ ಬಿಡುಗಡೆ ಆಯ್ತು 'ರಾಮ್ ಸೇತು' ಟ್ರೈಲರ್: ಈ ಕತೆ ಬೇರೆಯದ್ದೇ!

    |

    ಅಕ್ಷಯ್ ಕುಮಾರ್ ನಟನೆಯ 'ರಾಮ್ ಸೇತು' ಸಿನಿಮಾ ಬಗ್ಗೆ ವಿವಾದ ಇನ್ನೂ ಪೂರ್ಣವಾಗಿ ತಣ್ಣಗಾಗುವ ಮುನ್ನವೇ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

    'ರಾಮ್ ಸೇತು' ಸಿನಿಮಾದ 2 ನಿಮಿಷದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಜೊತೆಗೆ ಸಿನಿಮಾ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಆರ್ಕಿಯಾಲಜಿಸ್ಟ್ ಆಗಿದ್ದು, ರಾಮ್ ಸೇತು ಅನ್ನು ಕೆಡವಲು ಸರ್ಕಾರ ಯತ್ನಿಸಿದಾಗ ಅದನ್ನು ಉಳಿಸಲು ಮುಂದಾಗುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ವಿಜ್ಞಾನ, ಇತಿಹಾಸ, ಪೌರಾಣಿಕ ನಂಬಿಕೆಗಳನ್ನು ಒಳಗೊಂಡಿದೆ ಎಂಬುದು ಟ್ರೈಲರ್‌ನಿಂದ ತಿಳಿಯುತ್ತಿದೆ.

    ಆದರೆ ಈ ಸಿನಿಮಾ 'ರಾಮ್ ಸೇತು' ಸಿನಿಮ ವಿವಾದಕ್ಕೆ ಸಹ ಗುರಿಯಾಗಿದೆ. ಈ ಸಿನಿಮಾದ ವಿರುದ್ಧ ಬಿಜೆಪಿ ಮುಖಂಡ ಮಾಜಿ ಕೇಂದ್ರ ಸಚಿವ ಸುಬ್ರಹ್ಮಣಿಯನ್ ಸ್ವಾಮಿ ದಾವೆ ಹೂಡಿದ್ದಾರೆ.

    ಈಗಾಗಲೇ ಹಿಟ್ ಸಿನಿಮಾಕ್ಕಾಗಿ ಪರದಾಡುತ್ತಿರುವ ಅಕ್ಷಯ್ ಕುಮಾರ್‌ಗೆ, ಸುಬ್ರಹ್ಮಣಿಯನ್ ಸ್ವಾಮಿ ಅಂತಹಾ ಹಿರಿಯ, ನಿಷ್ಠುರ ರಾಜಕಾರಣಿ ಎದುರು ನಿಂತಿರುವುದು ಇನ್ನಷ್ಟು ಸಂಕಷ್ಟ ತಂದಿದೆ. ಹಾಗಿದ್ದರೂ ಸಹ 'ರಾಮ್ ಸೇತು' ತಂಡ ಟೀಸರ್ ಹಾಗೂ ಟ್ರೈಲರ್ ಬಿಡುಗಡೆ ಮಾಡಿದ್ದು, ಸಿನಿಮಾವನ್ನು ಅಕ್ಟೋಬರ್ 25ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

    ಸುಬ್ರಹ್ಮಣಿಯನ್ ಸ್ವಾಮಿ ಆರೋಪ

    ಸುಬ್ರಹ್ಮಣಿಯನ್ ಸ್ವಾಮಿ ಆರೋಪ

    'ರಾಮ್ ಸೇತು' ಸಿನಿಮಾದಲ್ಲಿ ರಾಮಸೇತುವಿನ ಬಗ್ಗೆ ಸುಳ್ಳು ಅಥವಾ ತಿರುಚಿದ ಮಾಹಿತಿ ಸೇರಿಸಲಾಗಿದೆ ಎಂದು ಮಾಜಿ ಸಚಿವ, ಹಾಲಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದು, ಸಿನಿಮಾದಲ್ಲಿ ನಟಿಸಿರುವ ಅಕ್ಷಯ್ ಕುಮಾರ್, ಜಾಕ್ವೆಲಿನ್ ಫರ್ನಾಂಡೀಸ್, ನುಶ್ರತ್ ಬರೂಚಾ ಸೇರಿದಂತೆ ಎಂಟು ಮಂದಿಗೆ ನೊಟೀಸ್ ಅನ್ನು ಈಗಾಗಲೇ ನೀಡಿದ್ದಾರೆ. ಸುಬ್ರಹ್ಮಣಿಯನ್ ಸ್ವಾಮಿ ಪರವಾಗಿ ಹಿರಿಯ ವಕೀಲ ಸತ್ಯ ಸಬರ್ವಾಲ್ ಅವರು ಚಿತ್ರತಂಡಕ್ಕೆ ನೋಟೀಸ್ ನೀಡಿದ್ದಾರೆ.

    ರಾಮಸೇತು ಕುರಿತು ನ್ಯಾಯಾಲಯದಲ್ಲಿ ಹೋರಾಟ

    ರಾಮಸೇತು ಕುರಿತು ನ್ಯಾಯಾಲಯದಲ್ಲಿ ಹೋರಾಟ

    ಸತ್ಯ ಸಬರ್ವಾಲ್ ಕಳಿಸಿರುವ ನೊಟೀಸ್‌ನಲ್ಲಿ, ''ನನ್ನ ಕಕ್ಷೀದಾರರು (ಸುಬ್ರಹ್ಮಣಿಯನ್ ಸ್ವಾಮಿ) 2007 ರಲ್ಲಿ ರಾಮಸೇತು ಸಂರಕ್ಷಣೆ ಮತ್ತು ರಕ್ಷಣೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಯಶಸ್ವಿಯಾಗಿ ವಾದ ಮಂಡಿಸಿದ್ದಾರೆ ಮತ್ತು ರಾಮಸೇತುವನ್ನು ಛಿದ್ರಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರ ಮಾಡ ಹೊರಟಿದ್ದ ಸೇತುಸಮುದ್ರಂ ಶಿಪ್ ಚಾನೆಲ್ ಯೋಜನೆಯನ್ನು ವಿರೋಧಿಸಿದ್ದರು. 2007 ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್, ರಾಮ್ ಸೇತುವನ್ನು ಕೆಡವುವ ಸರ್ಕಾರದ ಯೋಜನೆಗೆ ತಡೆಯಾಜ್ಞೆ ನೀಡಿತು. ಇದೀಗ ರಾಮ್ ಸೇತು ಹೆಸರಿನ ಸಿನಿಮಾ ಬಿಡುಗಡೆ ಆಗುತ್ತಿರುವುದು ನನ್ನ ಕಕ್ಷೀಧಾರರ ಗಮನಕ್ಕೆ ಬಂದಿದ್ದು, ರಾಮ್ ಸೇತುವನ್ನು ಉಳಿಸುವ ಕಾರ್ಯದಲ್ಲಿ ನ್ಯಾಯಾಲಯದಲ್ಲಿ ನಡೆದ ಹೋರಾಟ ಅತ್ಯಂತ ಮಹತ್ವದ್ದಾಗಿದ್ದು, ಈ ಕುರಿತು ಸಿನಿಮಾದಲ್ಲಿ ಮಾಹಿತಿಯನ್ನು ಇರಿಸಲಾಗಿದೆಯೇ ಎಂಬುದು ಕಕ್ಷೀಧಾರರ ಪ್ರಶ್ನೆ'' ಎಂದಿದ್ದಾರೆ.

    ಸುಬ್ರಹ್ಮಣಿಯನ್ ಸ್ವಾಮಿಯ ಅನುಮತಿ ಪಡೆಯಬೇಕು!

    ಸುಬ್ರಹ್ಮಣಿಯನ್ ಸ್ವಾಮಿಯ ಅನುಮತಿ ಪಡೆಯಬೇಕು!

    ಒಂದೊಮ್ಮೆ ಸಿನಿಮಾದಲ್ಲಿ ರಾಮ್ ಸೇತು ಪರವಾಗಿ ಮಾಡಿದ ನ್ಯಾಯಾಲಯದ ಹೋರಾಟದ ಚಿತ್ರಣ ಇದ್ದರೆ ನನ್ನ ಕಕ್ಷೀದಾರ (ಸುಬ್ರಹ್ಮಣಿಯನ್ ಸ್ವಾಮಿ) ಅವರ ಅನುಮತಿ ಪಡೆಯಬೇಕು, ಇಲ್ಲವಾದರೆ ಸಿನಿಮಾವನ್ನು ಬಿಡುಗಡೆ ಮಾಡುವ ಮುನ್ನ ನನ್ನ ಕಕ್ಷೀಧಾರರಿಗೆ ತೋರಿಸಬೇಕು ಎಂದು ಕೋರಲಾಗಿದೆ. ಆದರೆ ಕೆಲವು ಮೂಲಗಳ ಪ್ರಕಾರ, ಅಕ್ಷಯ್ ಕುಮಾರ್ ಮಧ್ಯಸ್ಥಿಕೆಯಿಂದ ಸುಬ್ರಹ್ಮಣಿಯನ್ ಸ್ವಾಮಿ ಅವರ ಬಳಿ ರಾಜಿ ಮಾಡಿಕೊಳ್ಳಲಾಗಿದೆ. ಅಲ್ಲದೆ, ಸುಬ್ರಹ್ಮಣಿಯನ್ ಸ್ವಾಮಿ ತಕರಾರಿನಂತೆ 'ರಾಮ್ ಸೇತು' ಸಿನಿಮಾದಲ್ಲಿ ನ್ಯಾಯಾಲಯ ಹೋರಾಟದ ಯಾವುದೇ ದೃಶ್ಯಗಳು ಸಹ ಇಲ್ಲ ಎನ್ನಲಾಗುತ್ತಿದೆ. ಈಗ ಬಿಡುಗಡೆ ಆಗಿರುವ ಟೀಸರ್ ಹಾಗೂ ಟ್ರೈಲರ್‌ಗಳು ಬೇರೆಯದ್ದೇ ಫ್ಯಾಂಟಸಿ ಮಾದರಿಯ ಕತೆಯನ್ನು ಸಿನಿಮಾ ಒಳಗೊಂಡಿರುವ ಸುಳಿವು ನೀಡುತ್ತಿವೆ.

    ಹಿಟ್‌ ಸಿನಿಮಾಕ್ಕಾಗಿ ಪರದಾಡುತ್ತಿರುವ ಅಕ್ಷಯ್ ಕುಮಾರ್

    ಹಿಟ್‌ ಸಿನಿಮಾಕ್ಕಾಗಿ ಪರದಾಡುತ್ತಿರುವ ಅಕ್ಷಯ್ ಕುಮಾರ್

    ಇನ್ನು ಅಕ್ಷಯ್ ಕುಮಾರ್ ಪಾಲಿಗೆ 'ರಾಮ್ ಸೇತು' ಸಿನಿಮಾ ಬಹಳ ಪ್ರಮುಖವಾದ ಸಿನಿಮಾ ಆಗಿದೆ. 2021ರ ಆಗಸ್ಟ್‌ ತಿಂಗಳಿನಿಂದ ಈವರೆಗೆ ಅಂದರೆ 14 ತಿಂಗಳಲ್ಲಿ ಅಕ್ಷಯ್ ಕುಮಾರ್ ನಟಿಸಿರುವ ಏಳು ಸಿನಿಮಾಗಳು ಬಿಡುಗಡೆ ಆಗಿವೆ. ಅದರಲ್ಲಿ 'ಸೂರ್ಯವಂಶಂ' ಸಿನಿಮಾದ ಹೊರತಾಗಿ ಇನ್ನೆಲ್ಲ ಸಿನಿಮಾಗಳು ಸಹ ಫ್ಲಾಪ್ ಆಗಿವೆ. ಅದರಲ್ಲಿಯೂ ಈ ವರ್ಷ ಬಿಡುಗಡೆ ಆಗಿರುವ 'ಸಾಮ್ರಾಟ್ ಪೃಥ್ವಿರಾಜ್', 'ಬಚ್ಚನ್ ಪಾಂಡೆ', 'ರಕ್ಷಾ ಬಂಧನ್', 'ಕಟ್‌ಪುತ್ಲಿ' ಸಿನಿಮಾಗಳಂತೂ ದೊಡ್ಡ ಫ್ಲಾಫ್ ಎನಿಸಿಕೊಂಡಿವೆ. ಹಾಗಾಗಿ 'ರಾಮ್ ಸೇತು' ಸಿನಿಮಾ ಗೆಲ್ಲುವುದು ಅಕ್ಷಯ್ ಕುಮಾರ್‌ಗೆ ಬಹಳ ಅವಶ್ಯಕವಾಗಿದೆ.

    English summary
    Dispite controversy Akshay Kumar starrer Ram Setu movie trailer released on October 11. Movie will hit the theaters on October 25.
    Tuesday, October 11, 2022, 16:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X