For Quick Alerts
  ALLOW NOTIFICATIONS  
  For Daily Alerts

  ದೇವಸ್ಥಾನಗಳಿಗೆ ಇನ್ನು ಮುಂದೆ ಹೋಗಲ್ಲ: ನಟ ಅಕ್ಕಿ

  By Rajendra
  |

  ಎರಡನೇ ಮಗುವಿಗೆ ತಂದೆಯಾಗಿರುವ ನಟ ಅಕ್ಷಯ್ ಕುಮಾರ್ ಗೆ ಜ್ಞಾನೋದಯವಾಗಿದೆಯಂತೆ. ಇನ್ನು ಮುಂದೆ ದೇವಸ್ಥಾನಗಳು ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಡಲ್ಲ ಎಂದು ಹೇಳಿದ್ದಾರೆ. ಯಾಕೆ ದೇವರ ಮೇಲೆ ಸಿಟ್ಟೇ? ವಿರಕ್ತಿಯೇ ಎಂದು ಕೇಳಲಾಗಿ, ಅವರಿಂದ ಬಂದಿರುವ ಉತ್ತರ ಹೀಗಿದೆ.

  "ನಾನು ಪ್ರತಿಯೊಬ್ಬರಿಗೂ ಒಂದು ಪ್ರಶ್ನೆ ಕೇಳಬೇಕು ಎಂದಿದ್ದೇನೆ. ಇಷ್ಟಕ್ಕೂ 'ಮಂದಿರ' ಎಂದರೆ ಏನು ಅರ್ಥ ಎಂದು ಹೇಳಿ? ಮಂದಿರ ಎಂದರೆ ಮನಸ್ಸಿನ ಒಳಗೆ (ಮನ್ ಕಾ ಅಂದರ್) ಎಂದರ್ಥ. ಅಂದರೆ ದೇವರು ಎಲ್ಲೋ ಇಲ್ಲ. ನಮ್ಮ ಮನಸ್ಸಿನಲ್ಲೇ ಇದ್ದಾರೆ..."

  "ಹಾಗಾಗಿ ತಾನು ಇನ್ನು ಮುಂದೆ ಮಂದಿರಗಳಿಗೆ ಭೇಟಿ ನೀಡಲ್ಲ. ಈ ಒಂದು ಸತ್ಯ ನನ್ನ ಅರಿವಿಗೆ ಬಂದದ್ದು ತೀರಾ ಇತ್ತೀಚೆಗೆ. ಅದೂ 'ಕಾಂಜಿ ವಿರುದ್ಧ್ ಕಾಂಜಿ' (ಓ ಮೈ ಗಾಡ್ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ) ಎಂಬ ಚಿತ್ರ ನೋಡಬೇಕಾದರೆ ಈ ಸತ್ಯ ತನ್ನರಿಗೆ ಬಂತು ಎಂದಿದ್ದಾರೆ.

  ಆ ಚಿತ್ರ ನೋಡಿದಷ್ಟು ಹೊತ್ತು ನಾನು ನಕ್ಕು ನಕ್ಕು ಸುಸ್ತಾದೆ. ಚಿತ್ರದ ಅಂತ್ಯ ಮಾತ್ರ ಅನಿರೀಕ್ಷಿತವಾಗಿದ್ದು ಚಕಿತಗೊಳಿಸಿತು. ಈ ಮುಂಚೆ ನಾನು ದೇವಾಲಗಳು ಹಾಗೂ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದೆ. ಇದಕ್ಕಾಗಿ ದೇಶದಾದ್ಯಂತ ಸಂಚರಿಸಿದ್ದೇನೆ.

  ಪ್ರತಿ ಬಾರಿ ತೀರ್ಥಕ್ಷೇತ್ರಗಳಿಗೆ ಹೋದಾಗಲೂ ಏನಿಲ್ಲವೆಂದರೂ ರು.4 ರಿಂದ 5 ಲಕ್ಷ ಖರ್ಚಾಗುತ್ತಿತ್ತು. ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೆ, ಜೊತೆಗೆ ಸೆಕ್ಯುರಿಟಿ ಬೇರೆ ಇರುತ್ತಿತ್ತು. ಹೋದ ಕಡೆಗೆಲ್ಲಾ ಸಿಕ್ಕಾಪಟ್ಟೆ ದೇಣಿಗೆ ನೀಡುತ್ತಿದ್ದೆ. ಉಳಿದುಕೊಳ್ಳುತ್ತಿದ್ದದ್ದು ಐಶಾರಾಮಿ ಹೋಟೆಲ್ ಗಳಲ್ಲಿ.

  ದೇವರು ಬೇರೆಲ್ಲೂ ಇಲ್ಲ. ನಮ್ಮಲ್ಲೇ ಇದ್ದಾನೆ, ಎಂಬ ಸತ್ಯ ಈಗ ನನಗೆ ಅರಿವಾಗಿದೆ. ಹಾಗಾಗಿ ದೇವಸ್ಥಾನಗಳಿಗೆ ಹೋಗುವುದನ್ನು ಬಿಟ್ಟಿದ್ದೇನೆ. ಅದೇ ಹಣವನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ನೀಡುತ್ತಿದ್ದೇನೆ. ತಮ್ಮ ನಿರ್ಮಾಣದ ಓ ಮೈ ಗಾಡ್ ಚಿತ್ರ ದೇವರ ಮಹತ್ವವನ್ನು ತಿಳಿಸುತ್ತದೆ. ನಾನೀಗ ಬದಲಾಗಿದ್ದೇನೆ ಎಂದಿದ್ದಾರೆ ಅಕ್ಷಯ್ ಕುಮಾರ್. ಅದಕ್ಕೆ ತಾನೆ ಹೇಳುವುದು ಮನೆಯೇ ಮಂತ್ರಾಲಯ...ಮನಸ್ಸೇ ದೇವಾಲಯ... (ಏಜೆನ್ಸೀಸ್)

  English summary
  We all know that Akshay Kumar is a very religious man. But the actor says that he will stop visiting temples and religious place from now on as his latest film Oh My God has changed his perception towards God.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X