For Quick Alerts
  ALLOW NOTIFICATIONS  
  For Daily Alerts

  ಮಾಧ್ಯಮದ ಮುಂದೆ ಕಣ್ಣೀರು ಹಾಕಿದ ಅಕ್ಷಯ್ ಕುಮಾರ್

  By ಸೋನು ಗೌಡ
  |

  ಬಾಲಿವುಡ್ ನಲ್ಲಿ ಸದ್ಯಕ್ಕೆ ಹಿಟ್ ಮೇಲೆ ಹಿಟ್ ಸಿನಿಮಾ ಕೊಡುತ್ತಿರುವ ನಟ 'ಖಿಲಾಡಿ' ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ 'ಹೌಸ್ ಫುಲ್ 3' ಚಿತ್ರದ ಪತ್ರೀಕಾಗೋಷ್ಠಿಯಲ್ಲಿ ಕಣ್ಣೀರು ಸುರಿಸಿದ್ದಾರೆ.

  'ಏರ್ ಲಿಫ್ಟ್' ಚಿತ್ರದ ನಂತರ ಇದೀಗ 'ಹೌಸ್ ಫುಲ್ 3' ಚಿತ್ರ ಕೂಡ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದ್ದು, ಮೊದಲ ವಾರದಲ್ಲೇ ಕೋಟಿ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ.[ಸದಾ ಬಡವರಿಗಾಗಿ ಮಿಡಿಯುತ್ತದೆ ಅಕ್ಷಯ್ ಕುಮಾರ್ ಹೃದಯ]

  ಅಂದಹಾಗೆ 'ಹೌಸ್ ಫುಲ್ 3' ಚಿತ್ರದ ಸಕ್ಸಸ್ ಪ್ರೆಸ್ ಮೀಟ್ ನಲ್ಲಿ ಪತ್ರಕರ್ತರೊಬ್ಬರು, 'ನಿಮ್ಮ ಎರಡು ಸಿನಿಮಾಗಳು ಹಿಟ್ ಆಗಿವೆ. ಆದರೆ ನಿಮಗೆ ಯಾವುದೇ ಆವಾರ್ಡ್ ಬಂದಿಲ್ಲಾ ಅಲ್ವಾ ಯಾಕೆ? ಅಂತ ಪ್ರಶ್ನೆ ಮಾಡಿದ್ದಾರೆ.[ಚೆನ್ನೈ ಮಹಾನಗರಿಗೆ ಅಕ್ಷಯ್ ಕುಮಾರ್ ಮಹಾ ದೇಣಿಗೆ]

  ಅದಕ್ಕೆ ಅಕ್ಷಯ್ ಕುಮಾರ್ ಅವರು ಉತ್ತರ ನೀಡಲು ತಡಬಡಾಯಿಸಿದ್ದು, 'ಆವಾರ್ಡ್, ಆವಾರ್ಡ್ ಅಂತ ಹೇಳುತ್ತಾ ಹೇಳುತ್ತಾ ಸ್ಟೇಜ್ ಮೇಲೆ ಕಣ್ಣೀರು ಹಾಕಿದ್ದಾರೆ. ಇದನ್ನು ಕಂಡು ವೇದಿಕೆಯ ಮೇಲಿದ್ದವರು ಕೂಡ ಒಂದು ಕ್ಷಣ ಶಾಕ್ ಆಗಿದ್ದಾರೆ.

  ಕೂಡಲೇ ನಟ ರಿತೇಶ್ ದೇಶ್ ಮುಖ್ ಅವರು ಕರವಸ್ತ್ರ ನೀಡಿದ್ದಾರೆ. ತಕ್ಷಣ ಸಾವರಿಸಿಕೊಂಡ ಅಕ್ಷಯ್ ಕುಮಾರ್ ಅವರು 'ಪರವಾಗಿಲ್ಲ ನನಗೆ ಯಾವುದೇ ಆವಾರ್ಡ್ ಬಂದಿಲ್ಲ ಅಂತ ಬೇಜಾರಿಲ್ಲ. ಪ್ರಶಸ್ತಿ ಬರುತ್ತೆ, ಮುಂದೊಂದು ದಿನ ಬಂದೇ ಬರುತ್ತೆ ಅಂತ ಮಾಧ್ಯಮದ ಮುಂದೆ ಕಣ್ಣೊರೆಸಿಕೊಳ್ಳುತ್ತಾ ಹೇಳಿದ್ದಾರೆ. ಅಕ್ಷಯ್ ಕುಮಾರ್ ಅತ್ತಿರುವ ವಿಡಿಯೋ ಇಲ್ಲಿದೆ ನೋಡಿ..

  English summary
  The success press meet of 'Housefull 3' was held, and at the event Superstar Akshay Kumar's 'teary' moment was caught on the camera.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X