For Quick Alerts
  ALLOW NOTIFICATIONS  
  For Daily Alerts

  ಯೋಧರ ಕುಟುಂಬದ ಕಣ್ಣೀರು ಒರೆಸಿದ ಅಕ್ಷಯ್ ಕುಮಾರ್

  |

  ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತದ ಯೋಧರ ಕುಟುಂಬದ ದುಃಖದಲ್ಲಿ ನಟ ಅಕ್ಷಯ್ ಕುಮಾರ್ ಭಾಗಿಯಾಗಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸಿನಿಮಾಗಳನ್ನು ಮಾಡುತ್ತಿರುವ ಈ ನಟ ಈಗ ಯೋಧರ ಕುಟುಂಬಕ್ಕೆ ಕಣ್ಣೀರು ಒರೆಸಿದ್ದಾರೆ.

  ಹುತಾತ್ಮ ಯೋಧರ ಕುಟುಂಬದ ನೆರವಿಗೆ ಬಂದ ಬಚ್ಚನ್

  ಉಗ್ರರ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ ಯೋಧರ ಕುಟುಂಬಕ್ಕೆ ಅಕ್ಷಯ್ ಕುಮಾರ್ ಧನ ಸಹಾಯ ಮಾಡುವ ನಿರ್ಧಾರ ಮಾಡಿದ್ದಾರೆ. ಯೋಧರ ಕುಟುಂಬಕ್ಕೆ 5 ಕೋಟಿ ಹಣ ನೀಡುವುದಾಗಿ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

  ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಅವರು ಈ ಘಟನೆ ಎಂದಿಗೂ ಮರೆಯುವಂತದ್ದಲ್ಲ. ಯೋಧರ ಆತ್ಮಕ್ಕೆ ಶಾಂತಿಯನ್ನು ಆ ದೇವರು ನೀಡಲಿ. ಅವರ ಕುಟುಂಬಗಳಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ದಾಳಿಯಲ್ಲಿ ಗಾಯಗೊಂಡಿರುವ ಯೋಧರು ಬೇಗ ಗುಣಮುಖರಾಗಲಿ. ಎಂದು ಟ್ವೀಟ್ ಮಾಡಿದ್ದಾರೆ.

  ಅಕ್ಷಯ್ ಕುಮಾರ್ ಜೊತೆಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸಹ ಯೋಧರ ಕುಟುಂಬಗಳಿಗೆ ತಲಾ 5 ಲಕ್ಷವನ್ನು ನೀಡುವುದಾಗಿ ಹೇಳಿದ್ದರು.

  ಅಂದಹಾಗೆ, ಅಕ್ಷಯ್ ಕುಮಾರ್ ಇತ್ತೀಚಿಗಷ್ಟೆ ಮಾಡುತ್ತಿರುವ ಪ್ರತಿ ಸಿನಿಮಾದಲ್ಲಿಯೂ ಸಮಾಜಕ್ಕೆ ಒಂದೇ ಸಂದೇಶ ನೀಡುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೆ ಅದರ ಹೊರತಾಗಿಯೂ ಅವರ ಈ ಕೆಲಸ ಪ್ರಶಂಸೆ ಪಡೆದಿದೆ.

  English summary
  Bollywood actor Akshay Kumar to donate 5 crore to CRPF martyrs family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X