»   » ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಈಗ ಗರ್ಭಿಣಿ

ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಈಗ ಗರ್ಭಿಣಿ

Posted By:
Subscribe to Filmibeat Kannada

ಬಾಲಿವುಡ್ ಆಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗವರು ಗರ್ಭಿಣಿ. ತಮ್ಮ ಎರಡನೇ ಮಗುವಿಗೆ ಸೆಪ್ಟೆಂಬರ್‌, 2012ರಲ್ಲಿ ಡೆಲಿವರಿ ನೀಡಲಿದ್ದಾರೆ.

ಇಷ್ಟು ದಿನ ಟ್ವಿಂಕಲ್ ಖನ್ನಾ ಗರ್ಭಿಣಿ ಎಂಬ ಸುದ್ದಿ ಇತ್ತು. ಈಗದು ಕನ್ಫರ್ಮ್ ಆಗಿದೆ. ಈಗವರು ಎರಡನೇ ತ್ರೈಮಾಸಿಕದಲ್ಲಿದ್ದಾರೆ ಎನ್ನುತ್ತವೆ ಮೂಲಗಳು. ಮೇ 24ರಂದು ನಡೆಯುವ ಕರಣ್ ಜೋಹರ್ 40ನೇ ಹುಟ್ಟುಹಬ್ಬದಲ್ಲಿ ಟ್ವಿಂಕಲ್ ಕಾಣಿಸಲಿದ್ದಾರೆ.

ಅಕ್ಷಯ್ ಮತ್ತು ಟ್ವಿಂಕಲ್ ಮದುವೆ ನವೆಂಬರ್ 2001ರಲ್ಲಿ ನಡೆದಿತ್ತು. ಮದುವೆ ಬಳಿಕ ಟ್ವಿಂಕಲ್ ನಟನೆಗೆ ಗುಡ್‌ಬೈ ಹೇಳಿದ್ದರು. ಇಷ್ಟು ದಿನ ಅವರು ಇಂಟೀರಿಯರ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ತಾರಾ ದಂಪತಿಗಳಿಗೆ ಈಗಾಗಲೆ 11ವರ್ಷದ ಮಗ ಆರವ್ ಇದ್ದಾನೆ. (ಏಜೆನ್ಸೀಸ್)

English summary
Akshay Kumar and Twinkle Khanna are over the moon these days and the reason behind their happiness is that the couple is expecting their second baby in September.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada