twitter
    For Quick Alerts
    ALLOW NOTIFICATIONS  
    For Daily Alerts

    ಅಕ್ಷಯ್‌ ಕುಮಾರ್ 'ಬೆಲ್ ಬಾಟಂ' ಮೊದಲ ದಿನ ಗಳಿಸಿದ್ದೆಷ್ಟು?

    |

    ನಟ ಅಕ್ಷಯ್ ಕುಮಾರ್ ನಟನೆಯ 'ಬೆಲ್ ಬಾಟಂ' ಸಿನಿಮಾ ನಿನ್ನೆಯಷ್ಟೆ (ಆಗಸ್ಟ್ 19)ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕೊರೊನಾ ಕಾರಣದಿಂದ ಕೆಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ತೆರೆದಿಲ್ಲವಾದರೂ ಹುಂಬ ಧೈರ್ಯದೊಂದಿಗೆ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ.

    ಸಿನಿಮಾ ಬಿಡುಗಡೆ ಮಾಡುವ ಕಠಿಣ ನಿರ್ಧಾರದಿಂದ ನಿರ್ಮಾಪಕರಿಗೆ ಲಾಭವೇ ಆದಂತಿದೆ. ಅಕ್ಷಯ್ ಕುಮಾರ್ ನಟನೆಯ 'ಬೆಲ್ ಬಾಟಂ' ಸಿನಿಮಾ ಮೊದಲ ದಿನ ಸಮಾಧಾನಕರ ಕಲೆಕ್ಷನ್ ಅನ್ನು ಗಳಿಸಿದೆ.

    ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ 'ಬೆಲ್ ಬಾಟಂ' 2ಡಿ ಹಾಗೂ 3ಡಿ ಎರಡೂ ವಿಧದಲ್ಲಿ ಬಿಡುಗಡೆ ಆಗಿದ್ದು 2ಡಿ ಗಿಂತಲೂ 3ಡಿ ಸಿನಿಮಾ ಹೆಚ್ಚು ಕಲೆಕ್ಷನ್ ಗಳಿಸಿದೆ ಎನ್ನುತ್ತಿದೆ ಡಾಟಾ.

    ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಪೂರ್ತಿ ತೆರೆದಿಲ್ಲ ಶೇಕಡಾ 50 ಸೀಟುಗಳನ್ನಷ್ಟೆ ಬಳಸಿಕೊಳ್ಳಲು ಅನುಮತಿ ಇದೆ. ಹಾಗಿದ್ದಾಗ್ಯೂ 'ಬೆಲ್ ಬಾಟಂ' ಸಿನಿಮಾ ಮೊದಲ ದಿನ ಸುಮಾರು 3 ಕೋಟಿ ಹಣ ಗಳಿಸಲು ಯಶಸ್ವಿಯಾಗಿದೆ. ಈ ಮೊತ್ತವು ವೀಕೆಂಡ್‌ನಲ್ಲಿ ದ್ವಿಗುಣವಾಗಲಿದೆ ಎಂಬುದು ಚಿತ್ರತಂಡದ ವಿಶ್ವಾಸ.

    ಪಿವಿಆರ್ ಒಂದರಲ್ಲೇ ಸುಮಾರು 35,000 ಕ್ಕೂ ಹೆಚ್ಚು ಟಿಕೆಟ್‌ಗಳು ಸೇಲ್ ಆಗಿವೆಯಂತೆ. 2ಡಿ ಗಿಂತಲೂ 3ಡಿ ಸಿನಿಮಾವನ್ನು ಜನರು ಹೆಚ್ಚಾಗಿ ನೋಡಿದ್ದಾರೆ ಎನ್ನುತ್ತಿದೆ ಪಿವಿಆರ್.

    ಮಹಾರಾಷ್ಟ್ರದಲ್ಲಿ ಸಿನಿಮಾ ಬಿಡುಗಡೆ ಇಲ್ಲ

    ಮಹಾರಾಷ್ಟ್ರದಲ್ಲಿ ಸಿನಿಮಾ ಬಿಡುಗಡೆ ಇಲ್ಲ

    'ಬೆಲ್ ಬಾಟಂ' ಸಿನಿಮಾದ ದೊಡ್ಡ ಹಿನ್ನಡೆಯೆಂದರೆ ಸಿನಿಮಾವು ಮಹಾರಾಷ್ಟ್ರದಲ್ಲಿ ಬಿಡುಗಡೆ ಆಗಿಲ್ಲ. ಮಹಾರಾಷ್ಟ್ರ ರಾಜ್ಯದಲ್ಲಿ ಚಿತ್ರಮಂದಿರಗಳು ಓಪನ್ ಆಗಿಲ್ಲ ಹಾಗಾಗಿ ಅಲ್ಲಿ ಸಿನಿಮಾ ಬಿಡುಗಡೆ ಆಗಿಲ್ಲ. ಒಂದೊಮ್ಮೆ ಮಹಾರಾಷ್ಟ್ರದಲ್ಲಿ ಸಿನಿಮಾ ಬಿಡುಗಡೆ ಆಗಿದ್ದಿದ್ದರೆ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಗಳಿಸುತ್ತಿತ್ತು. ಕೇರಳ ರಾಜ್ಯದಲ್ಲಿಯೂ 'ಬೆಲ್ ಬಾಟಂ' ಸಿನಿಮಾ ಬಿಡುಗಡೆ ಆಗಿಲ್ಲ. ಅದೂ ಸಹ ಚಿತ್ರತಂಡಕ್ಕೆ ದೊಡ್ಡ ಹಿನ್ನಡೆ.

    ಮುಂಬೈನಿಂದಲೇ 30% ಕಲೆಕ್ಷನ್ ಆಗುತ್ತಿತ್ತು

    ಮುಂಬೈನಿಂದಲೇ 30% ಕಲೆಕ್ಷನ್ ಆಗುತ್ತಿತ್ತು

    ಹಿಂದಿ ಸಿನಿಮಾಗಳ ಒಟ್ಟು ಕಲೆಕ್ಷನ್‌ನ ಶೇ 30ರಷ್ಟು ಭಾಗ ಮುಂಬೈ ಒಂದರಿಂದಲೇ ಬರುತ್ತದೆ. ಆದರೆ ಮುಂಬೈನಲ್ಲಿ ಈಗ ಚಿತ್ರಮಂದಿರಗಳು ತೆರೆದಿಲ್ಲ. ಹಾಗಾಗಿ 'ಬೆಲ್‌ ಬಾಟಂ' ಸಿನಿಮಾಕ್ಕೆ ದೊಡ್ಡ ನಷ್ಟವಾಗಿದೆ. ಆದರೆ ಇಂಥಹಾ ಸಂಕಷ್ಟದ ಸಮಯದಲ್ಲಿಯೂ ಸಿನಿಮಾವನ್ನು ಬಿಡುಗಡೆ ಮಾಡುವ ನಿರ್ಧಾರ ಮಾಡಿದ ನಿರ್ಮಾಪಕರಿಗೆ ಹಲವು ಬಾಲಿವುಡ್ ಪ್ರಮುಖರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    180 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ

    180 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ

    1980ರ ದಶಕದ ಕತೆಯನ್ನು 'ಬೆಲ್ ಬಾಟಂ' ಸಿನಿಮಾ ಹೊಂದಿದ್ದು, ಸಿನಿಮಾಕ್ಕೆ 180 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಸಿನಿಮಾದ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಇಂದಿರಾ ಗಾಂಧಿ ಪಾತ್ರದಲ್ಲಿ ಲಾರಾ ದತ್ತ, ನಾಯಕಿಯಾಗಿ ವಾಣಿ ಕಪೂರ್, ಹುಮಾ ಖುರೇಷಿ, ಅದಿಲ್ ಹುಸೇನ್, ಡ್ಯಾನ್ಜಿಯಲ್ ಸ್ಮಿತ್, ಅನಿರುದ್ಧ್ ಡೇವ್, ತಲೈವಾಸಲ್ ವಿಜಯ್ ಇನ್ನಿತರರು ನಟಿಸಿದ್ದಾರೆ. ಸಿನಿಮಾವನ್ನು ರಂಜಿತ್ ಎಂ ತಿವಾರಿ ನಿರ್ದೇಶನ ಮಾಡಿದ್ದು, ನಿರ್ಮಾಣವನ್ನು ವಾಶು ಭಗ್ನಾನಿ, ಜಾಕಿ ಭಗ್ನಾನಿ, ದೀಪ್ಶಿಕಾ ದೇಶ್‌ಮುಖ್, ಮೊನಿಶಾ ಅಡ್ವಾಣಿ, ಮಧು ಭೋಜ್ವಾನಿ, ನಿಖಿಲ್ ಅಡ್ವಾಣಿ ಮಾಡಿದ್ದಾರೆ.

    ಹಲವು ಸಿನಿಮಾಗಳು ಅಕ್ಷಯ್ ಕುಮಾರ್ ಕೈಯಲ್ಲಿವೆ

    ಹಲವು ಸಿನಿಮಾಗಳು ಅಕ್ಷಯ್ ಕುಮಾರ್ ಕೈಯಲ್ಲಿವೆ

    ನಟ ಅಕ್ಷಯ್ ಕುಮಾರ್ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ನಟಿಸಿರುವ 'ಸೂರ್ಯವಂಶಿ', 'ಅತರಂಗಿ ರೇ' ಬಿಡುಗಡೆಗೆ ತಯಾರಾಗಿದೆ. 'ಅತರಂಗಿ ರೇ' ಸಿನಿಮಾದಲ್ಲಿ ನಟ ಧನುಷ್ ಹಾಗೂ ಸಾರಾ ಅಲಿ ಖಾನ್ ನಟಿಸಿದ್ದಾರೆ. ಇವನ್ನು ಹೊರತುಪಡಿಸಿ, 'ಮಹಿಳಾ ಮಂಡಳಿ', 'ಪೃಥ್ವಿರಾಜ್', 'ಓಹ್ ಮೈ ಗಾಡ್ 2', 'ಮಿಷನ್ ಸಿಂಡ್ರೆಲಾ', 'ರಕ್ಷಾ ಬಂಧನ್', 'ಹೇರಾ-ಪೇರಿ 3', 'ಬಚ್ಚನ್ ಪಾಂಡೆ', 'ರೌಡ ರಾಥೋಡ್ 2', 'ರಾಮ್ ಸೇತು' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    English summary
    Akshay Kumar starer Bell Bottom movie first day collection. Movie collects average amount amid of theaters not fully functional in many states. Movie did not released in Maharashtra.
    Friday, August 20, 2021, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X