For Quick Alerts
  ALLOW NOTIFICATIONS  
  For Daily Alerts

  'ಗೋಲ್ಡ್' ಪೋಸ್ಟರ್ ನೋಡಿ ಬೌಲ್ಡ್ ಆದ ಬಾಲಿವುಡ್

  By Naveen
  |
  Akshay kumar's look in Gold movie is amazing..! | ರಿಲೀಸ್ ಆಯ್ತು ಅಕ್ಷಯ್ ಕುಮಾರ್ ಗೋಲ್ಡ್ ಸಿನಿಮಾ ಲುಕ್.!!

  ನಟ ಅಕ್ಷಯ್ ಕುಮಾರ್ ಈಗ ಮತ್ತೊಂದು ಅದ್ಭುತ ಪಾತ್ರ ಹಾಗೂ ಅತ್ಯದ್ಭುತ ಸಿನಿಮಾ ಮೂಲಕ ಬಂದಿದ್ದಾರೆ. 'ಪ್ಯಾಡ್ ಮ್ಯಾನ್' ಚಿತ್ರದ ಗೆಲುವಿನ ನಂತರ ಅಕ್ಷಯ್ ಕುಮಾರ್ 'ಗೋಲ್ಡ್' ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ.

  'ಗೋಲ್ಡ್' ಸಿನಿಮಾದ ಟೀಸರ್ ಈ ಹಿಂದೆಯೇ ಬಿಡುಗಡೆಯಾಗಿತ್ತು. ಅದರ ನಂತರ ಈಗ ಒಂದು ಪೋಸ್ಟರ್ ಹೊರಬಂದಿದೆ. ಚಿತ್ರದ ಬಿಡುಗಡೆಯ ದಿನಾಂಕವನ್ನು ಈ ಪೋಸ್ಟರ್ ಮೂಲಕ ಅನೌನ್ಸ್ ಮಾಡಲಾಗಿದೆ. ವಿಶೇಷ ಅಂದರೆ, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಿನಿಮಾ ಇದೇ ಆಗಸ್ಟ್ 15ಕ್ಕೆ ಬಿಡುಗಡೆಯಾಗಲಿದೆ.

  ಅಕ್ಷಯ್ ಕುಮಾರ್ 'ಗೋಲ್ಡ್' ಚಿತ್ರದಲ್ಲಿ ಮೌನಿ ರಾಯ್ ಅಕ್ಷಯ್ ಕುಮಾರ್ 'ಗೋಲ್ಡ್' ಚಿತ್ರದಲ್ಲಿ ಮೌನಿ ರಾಯ್

  ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಒಬ್ಬ ಬೆಂಗಾಲಿ ಹಾಕಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಒಲಿಂಪಿಕ್ ನಲ್ಲಿ ಚಿನ್ನ ಗೆಲ್ಲಬೇಕು ಎಂಬ ಕನಸು ಹೊಂದಿದ್ದ ಈ ಆಟಗಾರನ ಸುತ್ತ ಚಿತ್ರದ ಕಥೆ ಇದೆ. ಸದ್ಯ ರಿಲೀಸ್ ಆಗಿರುವ ಚಿತ್ರದ ಪೋಸ್ಟರ್ ನೋಡುಗರಿಗೆ ದೇಶಾಭಿಮಾನ ಹುಟ್ಟಿಸುವಂತಿದೆ.

  ಈ ಹಿಂದೆ ಅಮೀರ್ ಖಾನ್ ಅವರ 'ತಲಾಶ್' ಚಿತ್ರವನ್ನು ನಿರ್ದೇಶನ ಮಾಡಿದ್ದ ರೀಮಾ ಕಾಗ್ಟಿ ಈಗ 'ಗೋಲ್ಡ್' ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಮೌನಿ ರಾಯ್, ಕುನಾಲ್ ಕಪೂರ್ ನಟಿಸಿದ್ದಾರೆ.

  English summary
  Actor Akshay Kumar's 'Gold' hindi movie poster released. The movie will release on August 15th on the occasion of Independence Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X