ಆಲಿಯಾ-ರಣ್ಬೀರ್ ಮಗಳಿಗೆ ಮುದ್ದಾದ ಹೆಸರು: ಹೆಸರಿಟ್ಟಿದ್ದು ಯಾರು? ಅರ್ಥವೇನು?

ಇದೇ ವರ್ಷ ಏಪ್ರಿಲ್‌ನಲ್ಲಿ ವಿವಾಹವಾಗಿದ್ದ ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ಜೋಡಿ ನವೆಂಬರ್ 04 ರಂದು ಹೆಣ್ಣು ಮಗುವಿಗೆ ಪೋಷಕರಾಗಿದ್ದರು.

ಇದೀಗ ತಮ್ಮ ಮುದ್ದಾದ ಮಗುವಿಗೆ ಅಷ್ಟೆ ಮುದ್ದಾದ ಹೆಸರನ್ನು ಇಟ್ಟಿದೆ ಈ ಜೋಡಿ. ಆಲಿಯಾ ಹಾಗೂ ರಣ್ಬೀರ್ ಅವರುಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದಾರೆ.

ಆಲಿಯಾ ಹಾಗೂ ರಣ್ಬೀರ್ ಅವರುಗಳು ತಮ್ಮ ಮಗುವಿಗೆ ಮುತ್ತು ಕೊಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಫುಟ್ಬಾಲ್ ಸಮವಸ್ತ್ರವನ್ನು ಗೋಡೆಗೆ ತೂಗು ಹಾಕಲಾಕಿದ್ದು, ಅದರ ಮೇಲೆ ಮಗುವಿನ ಹೆಸರನ್ನು ಬರೆಯಲಾಗಿದೆ.

Alia Bhatt And Ranbir Kapoor Named Their Daughter Raha

ಆಲಿಯಾ-ರಣ್ಬೀರ್ ಅವರುಗಳು ತಮ್ಮ ಮಗಳಿಗೆ 'ರಾಹಾ' ಎಂದು ಹೆಸರಿಟ್ಟಿದ್ದಾರೆ. ರಣ್ಬೀರ್ ಹಾಗೂ ಆಲಿಯಾ ಎರಡೂ ಹೆಸರು ಸೇರಿಸಿ ಮಗಳಿಗೆ 'ರಾಹಾ' ಎಂದು ಹೆಸರಿಡಲಾಗಿದೆ. ಅಂದಹಾಗೆ ಈ ಹೆಸರನ್ನು ಸೂಚಿಸಿರುವುದು ರಣ್ಬೀರ್ ಕಪೂರ್ ಅವರ ತಾಯಿ ನೀತು ಸಿಂಗ್ ಅಂತೆ.

ರಾಹಾ ಹೆಸರಿಗೆ ಹಲವು ವಿಶೇಷವಾದ ಅರ್ಥಗಳಿವೆ. ರಾಹಾ ಎಂದರೆ ಪವಿತ್ರ ಹಾದಿ ಎಂಬ ಅರ್ಥವಿದೆ. ಸ್ವಾಹಿಲಿ ಭಾಷೆಯಲ್ಲಿ ರಾಹಾ ಎಂದರೆ ಖುಷಿ ಎಂಬ ಅರ್ಥವಿದೆ. ಸಂಸ್ಕೃತದಲ್ಲಿ ರಾಹಾ ಎಂದರೆ ಕುಲ ಅಥವಾ ಗೋತ್ರ. ಬಾಂಗ್ಲಾದಲ್ಲಿ ರಾಹಾ ಎಂದರೆ ತೃಪ್ತಿ, ಆರಾಮ ಎಂಬರ್ಥವಿದೆ. ಅರಬ್ ಭಾಷೆಯಲ್ಲಿ ಶಾಂತಿ ಎಂಬರ್ಥವಿದೆ. ಜೊತೆಗೆ ಖುಷಿ, ಸ್ವಾತಂತ್ರ್ಯ ಎಂಬ ಅರ್ಥವೂ ಇದೆಯಂತೆ.

ರಣ್ಬೀರ್ ಹಾಗೂ ಆಲಿಯಾ ಭಟ್ ಕೆಲ ವರ್ಷಗಳಿಂದ ಪ್ರೇಮಿಗಳಾಗಿದ್ದು, ಇದೇ ವರ್ಷದ ಏಪ್ರಿಲ್ 14 ರಂದು ತಮ್ಮದೇ ಮನೆಯಲ್ಲಿ ವಿವಾಹವಾದರು. ಮದುವೆಗೆ ಮುಂಚೆಯೇ ಆಲಿಯಾ ಭಟ್ ಗರ್ಭಿಣಿ ಆಗಿದ್ದರು. ನವೆಂಬರ್ 04 ರಂದು ಅವರಿಗೆ ಹೆಣ್ಣು ಮಗು ಜನನವಾಗಿದೆ.

More from Filmibeat

English summary
Alia Bhatt and Ranbir Kapoor named their daughter Raha. Alia said Raha name chosen by Ranbir's mother.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X