For Quick Alerts
  ALLOW NOTIFICATIONS  
  For Daily Alerts

  ತುಂಬಾ ಕಲರ್ ಫುಲ್ ಆಗಿತ್ತು ಫಿಲಂ ಫೇರ್ ಪ್ರಶಸ್ತಿ ಸಮಾರಂಭ

  |

  64ನೇ ವಿಮಲ್ ಫಿಲಂ ಫೇರ್ ಪ್ರಶಸ್ತಿ 2019 ಪಟ್ಟಿ ಪ್ರಕಟಗೊಂಡಿದ್ದು, ರಾಝಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದರೆ, ರಣಬೀರ್ ಕಪೂರ್ (ಸಂಜು) ಮತ್ತು ಅಲಿಯಾ ಭಟ್ (ರಾಜಿ) ಕ್ರಮವಾಗಿ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ಅಚ್ಚುಮೆಚ್ಚಿನ ಬ್ಲಾಕ್ ಲೇಡಿಯನ್ನು ತಮ್ಮದಾಗಿಸಿಕೊಂಡರು.

  ಈ ಬಾರಿಯ ಫಿಲಂ ಫೇರ್ ಪ್ರಶಸ್ತಿ ಸಮಾರಂಭ ತುಂಬಾ ಕಲರ್ ಫುಲ್ ಆಗಿ ನಡೆದಿದ್ದು, ವಿಶೇಷವಾಗಿತ್ತು. ಬಿ-ಟೌನ್ ಮಂದಿ ಭಾರತೀಯ ಸಿನೆಮಾದ ಅತ್ಯುತ್ತಮ ಪ್ರತಿಭೆ ಮತ್ತು ಸೃಜನಶೀಲತೆಗೆ ಸಿಕ್ಕ ಅತಿದೊಡ್ಡ ಗೌರವದ ಬ್ಲ್ಯಾಕ್ ಲೇಡಿ ಪ್ರಶಸ್ತಿ ಪ್ರಧಾನಕ್ಕೆ ಸಾಕ್ಷಿಯಾದರು.

  ಫಿಲಂಫೇರ್ ಪ್ರಶಸ್ತಿ ಗೆದ್ದ 'ಲವ್ ಬರ್ಡ್ಸ್' ರಣಬೀರ್, ಆಲಿಯಾ ಭಟ್ ಫಿಲಂಫೇರ್ ಪ್ರಶಸ್ತಿ ಗೆದ್ದ 'ಲವ್ ಬರ್ಡ್ಸ್' ರಣಬೀರ್, ಆಲಿಯಾ ಭಟ್

  2018ರ 3ನೇ ಫಿಲಂ ಫೇರ್ ಕಿರು ಚಲನಚಿತ್ರ ಪ್ರಶಸ್ತಿಗಳ ವಿಜೇತರು ಕೂಡ ಪ್ರತಿಷ್ಠಿತ ವೇದಿಕೆಗೆ ರಂಗು ತುಂಬಿದರು. ಬಹುನಿರೀಕ್ಷಿತ ಈ ಕಾರ್ಯಕ್ರಮವು ಮುಂಬೈನ ಬಿಕೆಸಿಯ ಜಿಯೊ ಗಾರ್ಡನ್ ನಲ್ಲಿ ನಡೆಯಿತು. ಮತ್ತು ಏಪ್ರಿಲ್ ರಂದು ಈ ಕಾರ್ಯಕ್ರಮ ಕಲರ್ಸ್ ನಲ್ಲಿ ಪ್ರಸಾರಗೊಳ್ಳಲಿದೆ.

  ಹಿಂದಿ ಚಲನಚಿತ್ರೋಧ್ಯಮವನ್ನು ಈ ವಾರ್ಷಿಕ ಆಚರಣೆಯೊಂದಿಗೆ ಎಲ್ಲಾ ವಿಭಾಗದವರನ್ನು ಒಟ್ಟುಗೂಡಿಸುವ ರೆಡ್ ಕಾರ್ಪೆಟ್ ಅತ್ಯುತ್ತಮವಾಗಿತ್ತು. ಸೋನಮ್ ಕಪೂರ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಕತ್ರಿನಾ ಕೈಫ್, ಹೇಮಾ ಮಾಲಿನಿ, ಆಯುಷ್ಮಾನ್ ಖುರಾನಾ, ವಿಕಿ ಕೌಶಲ್, ಸಾರಾ ಅಲಿ ಖಾನ್, ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರವರು ತಮ್ಮ ಉಬರ್ ಚಿಕ್ ಶೈಲಿಯೊಂದಿಗೆ ಆಗಮಿಸಿದರು.

  64ನೇ ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿ ಅಕ್ಷಯ್, ರಣಬೀರ್, ಅಲಿಯಾ64ನೇ ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿ ಅಕ್ಷಯ್, ರಣಬೀರ್, ಅಲಿಯಾ

  ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅತ್ಯುತ್ತಮ ಹಾಸ್ಯಭರಿತ ಮಾತುಗಳಿಂದ ಪ್ರೇಕ್ಷಕರ ಮನ ಗೆದ್ದರು. ವಿಕಿ ಕೌಶಲ್ ಸಂಜೆ ವೇಳೆ ಅದ್ಧೂರಿಯಾಗಿ ನೀಡಿದ ಪ್ರದರ್ಶನವೊಂದು ಎಲ್ಲರ ಗಮನ ಸೆಳೆಯಿತು. ಇದು ಫಿಲಂ ಫೇರ್ ವೇದಿಕೆಯಲ್ಲಿ ಅವರ ಚೊಚ್ಚಲ ಪ್ರದರ್ಶನವಾಗಿತ್ತು.

  Alia Bhatt and Ranbir Kapoor wins Filmfare Awards 2019

  ನಟಿಯರಾದ ಕೀರ್ತಿ ಸನನ್, ಜಾನ್ವಿ ಕಪೂರ್, ರಾಜ್ ಕುಮಾರ್ ರಾವ್, ಇಶಾನ್ ಖಟ್ಟರ್ ಅವರು ತಮ್ಮ ಅದ್ಭುತ ನರ್ತನದೊಂದಿಗೆ ವೇದಿಕೆಯಲ್ಲಿ ಮಿಂಚಿದರು. ರಣವೀರ್ ಸಿಂಗ್ ಅವರ ಅಂತಿಮ ಸಮ್ಮೋಹನಗೊಳಿಸುವ ಪ್ರದರ್ಶನ ಸಂಪೂರ್ಣ ಕಾರ್ಯಕ್ರಮ ಒಂದು ಹಂತ ಮೇಲೇರುವಂತೆ ಮಾಡಿತು.

  ಮೇಘನಾ ಗುಲ್ಜಾರ್ ರಾಜಿಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡರು. ರಣವೀರ್ ಸಿಂಗ್ (ಪದ್ಮಾವತ್) ಮತ್ತು ಆಯುಷ್ಮಾನ್ ಖುರಾನಾ (ಅಂಧಧುನ್) ಮತ್ತು ನೀನಾ ಗುಪ್ತ ಅವರು ಕ್ರಮವಾಗಿ ಕ್ರಿಟಿಕ್ಸ್ ಬೆಸ್ಟ್ ಆಕ್ಟರ್ (ಪುರುಷ) ಮತ್ತು (ಸ್ತ್ರೀ) ಪ್ರಶಸ್ತಿಯನ್ನು ಪಡೆದರು.

  English summary
  Filmfare Awards 2019: Best part of the event was when lovebirds Alia Bhatt and Ranbir Kapoor took home the black lady for the Best Actor (female and male respectively).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X