For Quick Alerts
  ALLOW NOTIFICATIONS  
  For Daily Alerts

  ಮನೆ ಇಲ್ಲದ ತನ್ನ ಡ್ರೈವರ್ ಗೆ 50 ಲಕ್ಷ ಹಣ ನೀಡಿದ ಆಲಿಯಾ

  |

  ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ವಿಭಿನ್ನ ರೀತಿಯ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ. ಸವಾಲಿನ ಪಾತ್ರಗಳನ್ನು ಸ್ವೀಕರಿಸಿ ಚಪ್ಪಾಳೆ ಪಡೆಯುವುದರಲ್ಲಿ ಆಲಿಯಾ ಎತ್ತಿದ ಕೈ.

  ಹೀಗಿರುವ ಆಲಿಯಾ ಈಗ ತನ್ನ ಮತ್ತೊಂದು ಕೆಲಸದ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ತಮ್ಮ ಜೊತೆಗೆ ಕೆಲಸ ಮಾಡುತ್ತಿದ್ದ ಡ್ರೈವರ್ ಹಾಗೂ ಸಹಾಯಕನಿಗೆ ಮನೆ ಖರೀದಿ ಮಾಡಲು ಸಹಾಯ ಮಾಡಿದ್ದಾರೆ.

  ರಣಬೀರ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಆಲಿಯಾ ಭಟ್

  ಆಲಿಯಾ ಕಾರ್ ಡ್ರೈವರ್ ಆಗಿದ್ದ ಸುನೀಲ್ ಹಾಗೂ ಸಹಾಯಕ ಅನ್ಮೋಲ್ ಇಬ್ಬರಿಗೂ 50 ಲಕ್ಷ ನೀಡಿರುವ ಆಲಿಯಾ ಮನೆ ಖರೀದಿ ಮಾಡಲು ಸಹಾಯ ಮಾಡಿದ್ದಾರೆ. ಆಲಿಯಾ ಭಟ್ ನೀಡಿರುವ ಚೆಕ್ ನಿಂದ ಮುಂಬೈ ನಲ್ಲಿ ಹೊಸ ಮನೆಯನ್ನು ಈ ಇಬ್ಬರು ಬುಕ್ ಮಾಡಿದ್ದಾರೆ

  ಸುನೀಲ್ ಹಾಗೂ ಅನ್ಮೋಲ್ 2012 ರಿಂದ ಆಲಿಯಾ ಜೊತೆಗೆ ಕೆಲಸ ಮಾಡುತ್ತಿದ್ದರು. ಆಲಿಯಾ ಚಿತ್ರರಂಗಕ್ಕೆ ಬಂದ ಪ್ರಾರಂಭದಿಂದ ಈ ಇಬ್ಬರು ಅವರ ಜೊತೆಗೆ ಇದ್ದರು. ಇಷ್ಟು ವರ್ಷ ತಮ್ಮ ಜೊತೆಗೆ ಕೆಲಸ ಮಾಡಿದ ಈ ಇಬ್ಬರ ಕುಟುಂಬಕ್ಕಾಗಿ ಆಲಿಯಾ ಸಹಾಯ ಮಾಡಿದ್ದಾರೆ. ಇತ್ತೀಚಿಗಷ್ಟೆ ಆಲಿಯಾ ತಮ್ಮ ಹುಟ್ಟುಹಬ್ಬದ ವಿಶೇಷವಾಗಿ ಅವರಿಗೆ ಉಡುಗೊರೆ ನೀಡಿದ್ದಾರೆ.

  ಆಲಿಯಾ ಭಟ್ ಹುಟ್ಟುಹಬ್ಬಕ್ಕೆ ರಣಬೀರ್ ಸ್ಪೆಷಲ್ ಗಿಫ್ಟ್

  ಆಲಿಯಾ ಭಟ್ ಸದ್ಯ 'ಕಳಂಕ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಸೌತ್ ನ ಬಿಗ್ ಸಿನಿಮಾ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಸಿನಿಮಾಗೆ ಕೂಡ ಅವರೇ ನಾಯಕಿ.

  English summary
  Bollywood actress Alia Bhatt gifts rs 50 lakh cheques to her driver Sunil and helper Anmol for to purchase house. Alia now busy with her 'Kalak' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X