For Quick Alerts
  ALLOW NOTIFICATIONS  
  For Daily Alerts

  ಮಗಳಿಗೆ ಇದೇ ಹೆಸರಿಡುವೆ ಎಂದು 3 ವರ್ಷದ ಹಿಂದೆಯೇ ಹೇಳಿದ್ದ ಆಲಿಯಾ!

  |

  ನಟಿ ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ದಂಪತಿ ಪೋಷಕರಾಗಿದ್ದಾರೆ. ಇದೇ ವರ್ಷದ ಏಪ್ರಿಲ್‌ನಲ್ಲಿ ವಿವಾಹವಾಗಿದ್ದ ಈ ಜೋಡಿಗೆ ನವೆಂಬರ್‌ 06 ರಂದು ಹೆಣ್ಣು ಮಗು ಜನನವಾಗಿದೆ.

  ತಾವು ಪೋಷಕರಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ ಈ ಜೋಡಿ. ಆದರೆ ಮಗುವಿನ ಹೆಸರು ಏನಾಗಿರುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಸುಮಾರು ಮೂರು ವರ್ಷಗಳ ಹಿಂದೆ, ಅಂದರೆ ರಣ್ಬೀರ್ ಅನ್ನು ಮದುವೆಯಾಗುವ ಮುಂಚೆಯೇ, ತಮ್ಮ ಮಗಳಿಗೆ ಹೀಗೆಂದು ಹೆಸರಿಡುವುದಾಗಿ ಆಲಿಯಾ ಭಟ್ ಘೋಷಿಸಿದ್ದರು.

  ಹೌದು, ಮೂರು ವರ್ಷಗಳ ಹಿಂದೆ ಸಿನಿಮಾದ ಪ್ರಮೋಷನ್‌ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಆಲಿಯಾ, ಬಾಲಕನೊಬ್ಬ ಹೇಳಿದ ಹೆಸರನ್ನು ಇಷ್ಟಪಟ್ಟು, ಈ ಹೆಸರನ್ನು ಮುಂದೊಮ್ಮೆ ನನ್ನ ಮಗಳಿಗೆ ಇಡುವೆ ಎಂದಿದ್ದರು. ಆಲಿಯಾ ನಿಜಕ್ಕೂ ಆ ಹೆಸರು ಇಡುತ್ತಾರಾ? ಯಾವ ಹೆಸರದು? ಮುಂದೆ ಓದಿ...

  ಗಲ್ಲಿ ಬಾಯ್ ಸಿನಿಮಾ ಪ್ರಚಾರ ಸಮಯದಲ್ಲಿ ನಡೆದ ಘಟನೆ

  ಗಲ್ಲಿ ಬಾಯ್ ಸಿನಿಮಾ ಪ್ರಚಾರ ಸಮಯದಲ್ಲಿ ನಡೆದ ಘಟನೆ

  ರಣ್ವೀರ್‌ಸಿಂಗ್ ಜೊತೆಗೆ ನಟಿಸಿದ್ದ 'ಗಲ್ಲಿಬಾಯ್' ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಲಿಯಾ ಭಟ್, ರಿಯಾಲಿಟಿ ಶೋ ಒಂದರ ಅತಿಥಿಯಾಗಿ ಭಾಗವಹಿಸಿದ್ದರು. ಅಲ್ಲಿ ಸ್ಪರ್ಧಿಯಾಗಿದ್ದ ಪುಟ್ಟ ಹುಡುಗನೊಬ್ಬ ಆಲಿಯಾ ಭಟ್‌ ಹೆಸರಿನ ಸ್ಪೆಲ್ಲಿಂಗ್ ಹೇಳಲು ಮುಂದೆ ಬಂದ. ಎಎಲ್‌ಐಎ-ಆಲಿಯಾ ಎಂದು ಹೇಳುವ ಬದಲಿಗೆ, ಎಎಲ್‌ಎಮ್‌ಎಎ ಎಂದು ಸ್ಪೆಲ್ಲಿಂಗ್ ಹೇಳಿದ್ದ ಆ ಹುಡುಗ.

   ಮಗಳಿಗೆ ಇದೇ ಹೆಸರಿಡುವೆ ಎಂದಿದ್ದ ಆಲಿಯಾ

  ಮಗಳಿಗೆ ಇದೇ ಹೆಸರಿಡುವೆ ಎಂದಿದ್ದ ಆಲಿಯಾ

  ಆದರೆ ಆ ಹುಡುಗ ಹೇಳಿದ ಎಎಲ್‌ಎಮ್‌ಎಎ- ಅಲ್ಮಾ ಹೆಸರು ಆಲಿಯಾ ಭಟ್‌ಗೆ ಬಹಳ ಇಷ್ಟವಾಯಿತು. ಮೊದಲಿಗೆ ತನ್ನ ಹೆಸರನ್ನು ತಪ್ಪಾಗಿ ಹೇಳಿದ ಆ ಹುಡುಗನ ಮುಗ್ಧತೆಗೆ ಮನಸಾರೆ ನಕ್ಕ ಆಲಿಯಾ ಭಟ್, ಆ ನಂತರ 'ಅಲ್ಮಾ' ಹೆಸರು ನನಗೆ ಬಹಳ ಹಿಡಿಸಿತು. ಮುಂದೊಮ್ಮೆ ನನ್ನ ಮಗಳಿಗೆ ಇದೇ ಹೆಸರು ಇಡುತ್ತೀನಿ'' ಎನ್ನುತ್ತಾರೆ ಆಲಿಯಾ ಭಟ್. ಆದರೆ ಈ ಮಾತನ್ನು ಅವರು ತಮಾಷೆಗೆ ಹೇಳಿದ್ದರು. ನಿಜವಾಗಿಯೂ ಇದೇ ಹೆಸರನ್ನು ಮಗಳಿಗೆ ಇಡುತ್ತಾರಾ? ಕಾದು ನೋಡಬೇಕಿದೆ.

  ಹೊಸ ಅತಿಥಿಯ ಆಗಮನ

  ಹೊಸ ಅತಿಥಿಯ ಆಗಮನ

  ಸದ್ಯಕ್ಕಂತೂ ಭಟ್ ಕುಟುಂಬ ಹಾಗೂ ಕಪೂರ್ ಕುಟುಂಬಗಳು ಹೊಸ ಅತಿಥಿಯ ಆಗಮನದಿಂದ ಬಹಳ ಥ್ರಿಲ್ ಆಗಿದ್ದಾರೆ. ರಣ್‌ಬೀರ್ ಕಪೂರ್ ಅಮ್ಮ ನೀತು ಕಪೂರ್ ಹಾಗೂ ಅತ್ತೆ ಸೋನಿ ರಜ್ದಾನ್ ಸೇರಿದಂತೆ ಶಾಹೀನ್ ಭಟ್ ಆಸ್ಪತ್ರೆಯಲ್ಲೇ ಇದ್ದರು. ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದ್ದು, ನಿರ್ದೇಶಕ ಮಹೇಶ್ ಭಟ್, ಸೋನಿ ರಜ್ದಾನ್, ನೀತು ಕಪೂರ್ ಸೇರಿದಂತೆ ಕುಟುಂಬದ ಸದಸ್ಯರು ಸಂಭ್ರಮದಲ್ಲಿ ಮುಳುಗಿದ್ದಾರೆ. ಅಲ್ಲದೆ, ಬಾಲಿವುಡ್‌ ಸ್ಟಾರ್‌ಗಳು ಕೂಡ ಸ್ಟಾರ್ ದಂಪತಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಮುಂಭೈನ ಎಚ್‌ಎನ್ ರಿಲಯನ್ಸ್‌ ಆಸ್ಪತ್ರೆಯಲ್ಲಿ ಆಲಿಯಾ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

  ಇತ್ತೀಚೆಗೆ ತಾಯಿಯಾದ ಸೆಲೆಬ್ರಿಟಿಗಳು

  ಇತ್ತೀಚೆಗೆ ತಾಯಿಯಾದ ಸೆಲೆಬ್ರಿಟಿಗಳು

  ಇತ್ತೀಚೆಗೆ ಹಲವು ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಹೆಣ್ಣು ಮಗು ಆಗಿರುವುದು ವಿಶೇಷ. ಕರೀನಾ ಕಪೂರ್‌ಗೆ ಎರಡನೇ ಮಗುವೂ ಗಂಡಾದ ಬಳಿಕ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿಗೆ ಹೆಣ್ಣು ಮಗುವಾಯ್ತು. ಬಳಿಕ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ದಂಪತಿಗೂ ಹೆಣ್ಣು ಮಗುವಾಯ್ತು (ಸೆರೊಗೇಟರಿ). ನಟಿ ಸೋನಂ ಕಪೂರ್‌ಗೆ ಗಂಡು ಮಗುವಾಗಿದೆ. ಅಂತರಾಷ್ಟ್ರೀಯ ಸ್ಟಾರ್‌ಗಳಾದ ರಿಹಾನಾ, ಜೆನ್ನಿಫರ್ ಲಾರೆನ್ಸ್‌ ಇನ್ನೂ ಕೆಲವರು ಸಹ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾರೆ.

  English summary
  Alia Bhatt once said she will name her baby as Amlaa. She said she liked that name very much and want to name her baby girl as Amlaa.
  Tuesday, November 8, 2022, 17:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X