For Quick Alerts
  ALLOW NOTIFICATIONS  
  For Daily Alerts

  ಆಲಿಯಾ ಭಟ್‌ಗೆ ಹೊಸ ಜವಾಬ್ದಾರಿ ಕೊಟ್ಟ 'ಆರ್‌ಆರ್‌ಆರ್‌' ಚಿತ್ರತಂಡ

  |

  'ಆರ್‌ಆರ್ಆರ್' ಸಿನಿಮಾದ ಪ್ರಚಾರ ಕಾರ್ಯಗಳು ಆರಂಭವಾಗಿದ್ದು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಸಿನಿಮಾ ಮಾಹಿತಿಯನ್ನು ಹೆಚ್ಚು ಜನರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ.

  ಈಗಾಗಲೇ ಹಲವು ಪೋಸ್ಟರ್‌ಗಳು, ಕ್ಯಾರೆಕ್ಟರ್ ಪ್ರೋಮೊಗಳು ಹಾಗೂ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದೀಗ ಹೊಸ ಪ್ರಯತ್ನವೊಂದಕ್ಕೆ 'ಆರ್‌ಆರ್‌ಆರ್‌' ಚಿತ್ರತಂಡ ಕೈ ಹಾಕಿದೆ.

  'ಆರ್‌ಆರ್‌ಆರ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಆಲಿಯಾ ಭಟ್ ಕೈಗೆ 'ಆರ್‌ಆರ್ಆರ್' ಸಿನಿಮಾದ ಸಾಮಾಜಿಕ ಜಾಲತಾಣ ಖಾತೆಗಳ ಜವಾಬ್ದಾರಿಯನ್ನು ನೀಡಿದೆ.

  ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಪ್ರಕಟಿಸಿರುವ 'ಆರ್‌ಆರ್‌ಆರ್' ತಂಡ ಇನ್ನು ಕೆಲವು ದಿನಗಳ ಕಾಲ 'ಆರ್‌ಆರ್‌ಆರ್' ಇನ್‌ಸ್ಟಾಗ್ರಾಂ ಆಲಿಯಾ ಭಟ್ ಕೈಯಲ್ಲಿರಲಿದೆ ಅವರು ಏನು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ ಕಾದು ನೋಡೋಣ ಎಂದಿದ್ದಾರೆ.

  'ಆರ್‌ಆರ್‌ಆರ್' ಸಿನಿಮಾದ ಪ್ರತ್ಯೇಕ ಸಾಮಾಜಿಕ ಜಾಲತಾಣ ಖಾತೆಗಲು ಸಕ್ರಿಯವಾಗಿವೆ. ಟ್ವಿಟ್ಟರ್‌ನಲ್ಲಿ 'ಆರ್‌ಆರ್‌ಆರ್' ಖಾತೆಯನ್ನು 4.26 ಲಕ್ಷ ಜನ ಫಾಲೊ ಮಾಡುತ್ತಿದ್ದಾರೆ. ಇನ್ನು ಇನ್‌ಸ್ಟಾಗ್ರಾಂನ ಪೇಜ್ ಅನ್ನು 2.30 ಲಕ್ಷ ಜನ ಫಾಲೊ ಮಾಡುತ್ತಿದ್ದಾರೆ. ಎರಡೂ ಪೇಜ್‌ನ ಹಿಂಬಾಲಕರನ್ನು ಹೆಚ್ಚಿಸುವ ಕಾರಣದಿಂದ ಆಲಿಯಾ ಭಟ್‌ಗೆ ಇನ್‌ಸ್ಟಾಗ್ರಾಂನ ಜವಾಬ್ದಾರಿ ವಹಿಸಿರುವ ಸಾಧ್ಯತೆಯೂ ಇದೆ.

  ಆಲಿಯಾ ಭಟ್‌ರದ್ದು ಇನ್‌ಸ್ಟಾಗ್ರಾಂ ಖಾತೆಯಿದೆ ಆದರೆ ಅವರು ಅತಿಯಾಗಿ ಅದರಲ್ಲಿ ಸಕ್ರಿಯರಾಗಿಲ್ಲ. ಆಗೊಮ್ಮೆ ಈಗೊಮ್ಮೆ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರೊಮೋಷನಲ್ ಪೋಸ್ಟ್‌ಗಳನ್ನು ಸಹ ಆಲಿಯಾ ಭಟ್ ಮಾಡುತ್ತಿರುತ್ತಾರೆ.

  ಪಡ್ಡೆಗಳ ನಿದ್ದೆಗೆಡಿಸಿ ವಿಚಿತ್ರ ಸ್ಟೇಟಸ್ ಹಾಕಿದ ವಿಕ್ರಾಂತ್ ರೋಣ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್

  'ಆರ್‌ಆರ್‌ಆರ್' ಸಿನಿಮಾವು ಅಕ್ಟೋಬರ್ 13 ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ಜೂ.ಎನ್‌ಟಿಆರ್, ರಾಮ್ ಚರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್, ಶ್ರೆಯಾ ಶಿರಿನ್ ನಟಿಸಿದ್ದಾರೆ. ರಾಜಮೌಳಿ ನಿರ್ದೇಶನ, ಕೀರಣವಾಣಿ ಸಂಗೀತ ಸಿನಿಮಾಕ್ಕೆ ಇದೆ.

  English summary
  Bollywood actress Alia Bhatt will handle RRR movie Instagram page for few days. She acted as Sita in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X