»   » ಏನಿದು ಕೃಷ್ಣಮೃಗ ಬೇಟೆ ಪ್ರಕರಣ? ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

ಏನಿದು ಕೃಷ್ಣಮೃಗ ಬೇಟೆ ಪ್ರಕರಣ? ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

Posted By:
Subscribe to Filmibeat Kannada

ಬಾಲಿವುಡ್ ನ ಜನಪ್ರಿಯ ನಟ ಸಲ್ಮಾನ್ ಖಾನ್ ಗೆ 'ಬ್ಯಾಡ್ ಬಾಯ್' ಇಮೇಜ್ ತಂದುಕೊಟ್ಟ ಕೆಲ ಪ್ರಕರಣಗಳಲ್ಲಿ ಇಪ್ಪತ್ತು ವರ್ಷಗಳ ಹಿಂದಿನ ಬ್ಲಾಕ್ ಬಕ್ ಕೇಸ್ (ಕೃಷ್ಣಮೃಗ ಬೇಟೆ ಪ್ರಕರಣ) ಕೂಡ ಒಂದು.

1998 ರಲ್ಲಿ ಚಿಂಕಾರ ಹಾಗೂ ಕೃಷ್ಣಮೃಗಗಳನ್ನು ಬೇಟೆ ಆಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಮಾನ್ ಖಾನ್ ದೋಷಿ ಎಂದು ಜೋಧ್ ಪುರ ನ್ಯಾಯಾಲಯ ಇಂದು ತೀರ್ಪು ನೀಡಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿಯಲ್ಲಿ ಸಲ್ಮಾನ್ ಖಾನ್ ಗೆ ನ್ಯಾಯಮೂರ್ತಿ ದೇವ್ ಕುಮಾರ್ ಖತ್ರಿ ಐದು ವರ್ಷ ಜೈಲು ಶಿಕ್ಷೆಯ ಜೊತೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ತಪ್ಪು ಯಾರೇ ಮಾಡಿದ್ರೂ, ಅವರಿಗೆ ಶಿಕ್ಷೆ ಖಂಡಿತ ಎಂಬುದಕ್ಕೆ ಇಂದಿನ ತೀರ್ಪು ಸಾಕ್ಷಿ.

ಅಷ್ಟಕ್ಕೂ, ಏನಿದು ಕೃಷ್ಣಮೃಗ ಬೇಟೆ ಪ್ರಕರಣ.? 1998 ರಲ್ಲಿ ನಡೆದದ್ದೇನು.? ಬ್ಲಾಕ್ ಬಕ್ ಕೇಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲ ಸಂಗತಿಗಳು ಇಲ್ಲಿವೆ. ಓದಿರಿ...

ಎಲ್ಲವೂ ನಡೆದಿದ್ದು ಹಮ್ ಸಾಥ್ ಸಾಥ್ ಹೇ 'ಶೂಟಿಂಗ್' ವೇಳೆ!

'ಹಮ್ ಸಾಥ್ ಸಾಥ್ ಹೇ'.. 1999 ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಸಿನಿಮಾ. ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ ಅಭಿನಯದ ಈ ಚಿತ್ರ ಅಂದು ಸೂಪರ್ ಹಿಟ್ ಆಗಿತ್ತು. ಇದೇ ಚಿತ್ರದ ಶೂಟಿಂಗ್ ನಡೆಯುವ ಸಂದರ್ಭದಲ್ಲಿ ವನ್ಯ ಮೃಗಗಳನ್ನ ಬೇಟೆಯಾಡಲಾಗಿತ್ತು. ಅವತ್ತು ಎಸಗಿದ ಇಂತಹ ಕೃತ್ಯದಿಂದ ಇಂದು ಸಲ್ಮಾನ್ ಸಂಕಷ್ಟ ಎದುರಿಸುವಂತಾಗಿದೆ.

ಕೃಷ್ಣಮೃಗ ಬೇಟೆ ಪ್ರಕರಣದ ಪ್ರಮುಖ ಘಟನಾವಳಿಗಳು

ಸೆಪ್ಟೆಂಬರ್ 26, 1998

'ಹಮ್ ಸಾಥ್ ಸಾಥ್ ಹೇ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ, ಜೋಧ್ ಪುರ ಬಳಿಯ ಮಥಾನಿಯಾದಲ್ಲಿರುವ ಭವಾದ್ ನಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಆರೋಪ ಸಲ್ಮಾನ್ ಖಾನ್ ವಿರುದ್ಧ ಕೇಳಿ ಬಂತು.

ಕೃಷ್ಣಮೃಗ ಬೇಟೆ ಪ್ರಕರಣ : ಸಲ್ಮಾನ್ ಖಾನ್ ಗೆ ಖುಲಾಸೆ

ಸೆಪ್ಟೆಂಬರ್ 28, 1998

ಗೋಢಾದಲ್ಲಿ ಎರಡು ಚಿಂಕಾರಗಳನ್ನು ಸಲ್ಮಾನ್ ಖಾನ್ ಬೇಟೆಯಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಕೊನೆಗೂ ಸಲ್ಲೂಗೆ ಜೈಲು... 'ಕೃಷ್ಣಮೃಗ'ದ ಮರಿಮಕ್ಕಳಿಗೆ ಸಿಕ್ಕಿತು ನ್ಯಾಯ!

ಅಕ್ಟೋಬರ್ 1-2, 1998

ಹಗಲು ಹೊತ್ತಿನಲ್ಲಿ 'ಹಮ್ ಸಾಥ್ ಸಾಥ್ ಹೇ' ಶೂಟಿಂಗ್ ನಲ್ಲಿ ಭಾಗವಹಿಸಿದರೆ, ರಾತ್ರಿ ಹೊತ್ತಿನಲ್ಲಿ ಸ್ನೇಹಿತರ ಜೊತೆಗೆ ಸಲ್ಮಾನ್ ಖಾನ್ ಹಂಟಿಂಗ್ ಸೆಷನ್ ನಡೆಸುತ್ತಿದ್ದರು. 1998 ರಲ್ಲಿ ಅಕ್ಟೋಬರ್ 1 ಹಾಗೂ 2 ರಂದು ರಾಜಸ್ಥಾನದ ಕಂಕಾನಿ ಗ್ರಾಮದಲ್ಲಿ ಎರಡು ಕೃಷ್ಣ ಮೃಗಗಳನ್ನು ಸಲ್ಮಾನ್ ಖಾನ್ ಬೇಟೆಯಾಡಿದ ಬಗ್ಗೆ ಬಿಷ್ಣೋಯಿ ಸಮುದಾಯ ಆರೋಪಿಸಿತು.

ದೂರು ನೀಡಿದ ಬಿಷ್ಣೋಯಿ ಸಮುದಾಯ

ರಾತ್ರಿ ಬಂದೂಕು ಸದ್ದು ಕೇಳಿಬಂದ ಕೂಡಲೆ ನಿದ್ರೆಯಿಂದ ಎಚ್ಚೆತ್ತ ಗ್ರಾಮಸ್ಥರು, ಓಡಿಬಂದು ನೋಡಿದಾಗ ಕೃಷ್ಣಮೃಗಗಳು ಸತ್ತು ಬಿದ್ದಿದ್ದವು. ಸಲ್ಮಾನ್ ಖಾನ್ ಕೈಯಲ್ಲಿ ಬಂದೂಕು ಇದ್ದದ್ದನ್ನ ಕೆಲವರು ಗಮನಿಸಿದರು. ತಕ್ಷಣ ಅಲ್ಲಿಂದ ತಪ್ಪಿಸಿಕೊಳ್ಳಲು ಸಲ್ಮಾನ್ ಹಾಗೂ ಸ್ನೇಹಿತರು ಪ್ರಯತ್ನ ಪಟ್ಟಾಗ ಜಿಪ್ಸಿಯನ್ನ ಗ್ರಾಮಸ್ಥರು ಅಟ್ಟಿಸಿಕೊಂಡು ಹೋದರು. ಬಳಿಕ ಬಿಷ್ಣೋಯಿ ಸಮುದಾಯ ಹಾಗೂ ಅರಣ್ಯ ಕಾವಲುಗಾರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಸಲ್ಮಾನ್ ಜೊತೆಗಿದ್ದ ನಾಲ್ವರು ತಾರೆಯರು

ಕಂಕಾನಿ ಗ್ರಾಮದಲ್ಲಿ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಜೊತೆಗೆ ಜಿಪ್ಸಿಯಲ್ಲಿ ಸೋನಾಲಿ ಬೇಂದ್ರೆ, ಸೈಫ್ ಅಲಿ ಖಾನ್, ಟಬು ಹಾಗೂ ನೀಲಂ ಕೂಡ ಇದ್ದರು. ಹೀಗಾಗಿ ಇವರೆಲ್ಲರ ವಿರುದ್ಧವೂ ಪ್ರಕರಣ ದಾಖಲಾಯಿತು. ಪ್ರಕರಣದ ಸಂಬಂಧ ಅಕ್ಟೋಬರ್ 12 ರಂದು ಸಲ್ಮಾನ್ ಖಾನ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ.

ಎರಡು ಪ್ರತ್ಯೇಕ ಪ್ರಕರಣ ದಾಖಲು

ಬೇಟೆಗೆ ಪರವಾನಗಿ ರದ್ದಾಗಿರುವ ಬಂದೂಕು ಬಳಕೆ ಮಾಡಿದ ಸಲ್ಮಾನ್ ಖಾನ್ ವಿರುದ್ಧ ಅಕ್ಟೋಬರ್ 1998 ರಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ 3/25, 3/27 ಅಡಿಯಲ್ಲಿ ಪ್ರಕರಣ ದಾಖಲಾಯಿತು. ಜೊತೆಗೆ ಚಿಂಕಾರ ಹಾಗೂ ಕೃಷ್ಣಮೃಗಗಳನ್ನು ಬೇಟೆಯಾಡಿದ್ದಕ್ಕಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿಯಲ್ಲಿ ಕೇಸ್ ಫೈಲ್ ಮಾಡಲಾಯಿತು.

ಸಲ್ಮಾನ್ ಖಾನ್ ದೋಷಿ

ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಕೆಳ ಹಂತದ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು 2006 ರಲ್ಲಿ ಸಾಬೀತಾಯಿತು. 1 ಹಾಗೂ ಐದು ವರ್ಷಗಳ ಶಿಕ್ಷೆಯನ್ನ ನ್ಯಾಯಾಲಯ ವಿಧಿಸಿತು. ಈ ತೀರ್ಪನ್ನ ಸೆಷನ್ಸ್ ಕೋರ್ಟ್ ಕೂಡ ಎತ್ತಿ ಹಿಡಿಯಿತು. ಒಂದು ವಾರದ ಸೆರೆವಾಸದ ಬಳಿಕ ಸಲ್ಮಾನ್ ಖಾನ್ ಜಾಮೀನು ಪಡೆದರು.

ಹೈಕೋರ್ಟ್ ತಡೆಯಾಜ್ಞೆ

ಮೇಲ್ಮನವಿ ಸಲ್ಲಿಸಿದ ಬಳಿಕ ಕೆಳ ಹಂತದ ನ್ಯಾಯಾಲಯಗಳಲ್ಲಿ ನೀಡಿದ ತೀರ್ಪಿಗೆ 2007 ರಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿತು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ಘೋಷಿಸಿತು. ಆರು ದಿನಗಳ ಕಾಲ ಕಾರಾಗೃಹದಲ್ಲಿದ್ದ ಸಲ್ಮಾನ್ ಖಾನ್, ನಂತರ ಜಾಮೀನಿನ ಮೇಲೆ ಬಿಡುಗಡೆ ಆದರು.

ಆರೋಪಗಳಿಂದ ಖುಲಾಸೆ

ಸಲ್ಮಾನ್ ಖಾನ್ ಮೇಲಿನ ಅರೋಪ ಸಾಬೀತು ಮಾಡಲು ಯಾವುದೇ ಸಾಕ್ಷ್ಯ ಇಲ್ಲದ ಕಾರಣ 'ಬೆನಿಫಿಟ್ ಆಫ್ ಡೌಟ್' ಮೇಲೆ ಅವರನ್ನು ರಾಜಸ್ಥಾನ ಹೈಕೋರ್ಟ್ 2016 ರಲ್ಲಿ ಖುಲಾಸೆಗೊಳಿಸಿತು.

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜಸ್ಥಾನ ಸರ್ಕಾರ

ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮಾರ್ಚ್‌ 28ರಂದು ಮುಕ್ತಾಯಗೊಳಿಸಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ಸಲ್ಮಾನ್ ಖಾನ್ ದೋಷಿ ಎಂದಿರುವ ನ್ಯಾಯಾಲಯ, ಐದು ವರ್ಷ ಶಿಕ್ಷೆ, 10 ಸಾವಿರ ದಂಡ ವಿಧಿಸಿದೆ.

English summary
Jodhpur court has convicted Bollywood Actor Salman Khan in 1998 Blackbuck poaching case, while Saif Ali Khan, Tabu, Sonali Bendre and Neelam walk free. Read this article to know the complete details of Blackbuck poaching case against Salman Khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X