TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ವೇಶ್ಯೆ' ಪಟ್ಟ ಹೊರಲು ತಯಾರು ಎಂದ್ಹೇಳಿ ವಿವಾದ ಸೃಷ್ಟಿಸಿದ ಕಂಗನಾ
'ಅತ್ಯುತ್ತಮ ನಟಿ' ಎಂಬ ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡ ನಟಿ ಕಂಗನಾ ರನೌತ್ ಮತ್ತು ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಅವರ ಸಂಬಂಧದ ಬಗ್ಗೆ ಕಾನೂನು ಸಮರ ನಡೆಯುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದೀಗ ಈ ಬಗ್ಗೆ ನಟಿ ಕಂಗನಾ ರನೌತ್ ಅವರು ಮನಬಿಚ್ಚಿ ಮಾತನಾಡಿದ್ದಾರೆ.[63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳು]
'ಸದ್ಯಕ್ಕೆ ನಡೆಯುತ್ತಿರುವ ವಿವಾದಗಳಿಗೆ ಸಂಬಂಧಿಸಿದಂತೆ ತಮ್ಮ ಮನದಾಳದ ಮಾತನ್ನು ಹೊರಹಾಕಿರುವ ನಟಿ ಕಂಗನಾ ರನೌತ್ ಅವರು ಈ ವಿಚಾರದಲ್ಲಿ ನನ್ನನ್ನು ವೇಶ್ಯೆ ಎಂದು ಕರೆದರೂ ನಾನು ಚಿಂತೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿ ಮಾಡಿದ್ದಾರೆ.[ಹೃತಿಕ್-ಕಂಗನಾ ಬಗ್ಗೆ ಹೊಸ ಬಾಂಬ್ ಸಿಡಿಸಿದ ಕಂಗನಾ ಮಾಜಿ ಗೆಳೆಯ]
ಹೌದು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನಟಿ ಕಂಗನಾ ಅವರು ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ರೀತಿಯ ಹೇಳಿಕೆ ನೀಡಿ ಮತ್ತೆ ಸುದ್ದಿ ಮಾಡಿದ್ದಾರೆ.['ಕ್ವೀನ್' ಕಂಗನಾ-ಹೃತಿಕ್ ಬಗ್ಗೆ ಹೊರಬಿದ್ದಿರುವ ಶಾಕಿಂಗ್ ನ್ಯೂಸ್]
"ಮಹಿಳೆಯೊಬ್ಬಳು ಲೈಂಗಿಕವಾಗಿ ಸಕ್ರಿಯಳಾಗಿದ್ದರೆ ಆಕೆಯನ್ನು ವೇಶ್ಯೆ ಎಂದು ಕರೆಯಲಾಗುತ್ತದೆ, ಆಕೆ ವೃತ್ತಿ ಜೀವನದಲ್ಲಿ ಭಾರಿ ಯಶಸ್ಸು ಸಾಧಿಸುತ್ತಿದ್ದರೆ ಆಕೆಯನ್ನು ಸೈಕೋಪಾತ್ (ಮನೋರೋಗಿ) ಎಂದು ಕರೆಯುತ್ತಾರೆ. ಆದ್ದರಿಂದ ನನ್ನನ್ನು ವೇಶ್ಯೆ ಎಂದಾಗಲಿ ಅಥವಾ ಸೈಕೋಪಾತ್ ಎಂದಾಗಲಿ ಯಾರಾದರೂ ಕರೆದರೆ ನನ್ನದೇನೂ ಅಭ್ಯಂತರ ಇಲ್ಲ" ಎಂದು ಕಂಗನಾ ಅವರು ಬಹಳ ವ್ಯಂಗ್ಯವಾಗಿ ತಮ್ಮ ಎದುರಾಳಿಗಳಿಗೆ ಬಾಣ ಹೂಡಿದ್ದಾರೆ.[ಹೃತಿಕ್-ಕಂಗನಾ ವಿವಾದದ ಬಗ್ಗೆ ಹೃತಿಕ್ ಮಾಜಿ ಪತ್ನಿ ಏನಂತಾರೆ?]
'ಹಳ್ಳಿಯಿಂದ ಆರಂಭವಾದ ನನ್ನ ಜೀವನ ಇಲ್ಲಿಯವರೆಗೂ ಅದ್ಭುತವಾಗಿ ಸಾಗಿದೆ. ನನ್ನ ವೃತ್ತಿ ಜೀವನದಲ್ಲೂ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಅಲ್ಲದೇ ಪ್ರಸ್ತುತ ನಾನು ಸರಿಯಾದ ದಾರಿಯಲ್ಲೇ ಸಾಗುತ್ತಿದ್ದೇನೆ ಎಂದು ಕೂಡ ನಾನು ನಂಬಿದ್ದೇನೆ. ಅದರಲ್ಲಿ ನನಗೆ ತೃಪ್ತಿ ಇದೆ. ನಾನು ಸದಾ ನಾನಾಗಿರಲು ಬಯಸುತ್ತೇನೆ ಹೊರತು, ಬೇರೆಯವಳಾಗಿ ಅಲ್ಲ' ಎಂದು ಕಂಗನಾ ದಿಟ್ಟವಾಗಿ ನುಡಿದಿದ್ದಾರೆ.[ಕಂಗನಾ-ಹೃತಿಕ್ ಅಫೇರ್ ಕೇಸ್ ನಲ್ಲಿ ಮಹತ್ತರ ತಿರುವು]
'ಈಗಲೂ ಒಬ್ಬ ಮಹಿಳೆಯನ್ನು ಒಂದು ಭೋಗದ ವಸ್ತುವಾಗಿ ನೋಡುತ್ತಾರೆ ಅನ್ನೋ ವಿಚಾರ ಆಶ್ಚರ್ಯವನ್ನುಂಟು ಮಾಡುತ್ತದೆ. ಈ ಹಿಂದೆ ನನಗೆ ಮುಜುಗರ ಉಂಟು ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಯಿತು. ಆದರೆ ನನಗೆ ನನ್ನ ಯಶಸ್ಸೇ ಎಲ್ಲಾ ವಿವಾದಗಳಿಗೆ ಸಿಹಿಯಾದ ಪ್ರತಿಕ್ರಿಯೆ. ಎಲ್ಲರಿಗೂ ಕೆಟ್ಟ ದಿನ ಬರುವಂತೆ ನನಗೂ ಬಂದಿದೆ, ಮುಂದೊಂದು ದಿನ ಒಳ್ಳೆ ದಿನಗಳು ಬಂದೇ ಬರುತ್ತದೆ' ಎಂದು 'ಕ್ವೀನ್' ನಟಿ ಕಂಗನಾ ಮನದಾಳದ ಮಾತುಗಳನ್ನು ನೇರವಾಗಿ ಹಂಚಿಕೊಂಡಿದ್ದಾರೆ.