»   » ಇಮ್ರಾನ್ ಹಶ್ಮಿ ಜೊತೆಯಾದ್ರು ಅಮಲಾ ನಾಗಾರ್ಜುನ

ಇಮ್ರಾನ್ ಹಶ್ಮಿ ಜೊತೆಯಾದ್ರು ಅಮಲಾ ನಾಗಾರ್ಜುನ

Posted By:
Subscribe to Filmibeat Kannada

ಮದುವೆಯಾದ್ಮೇಲೆ ಗಂಡ, ಮನೆ, ಮಕ್ಕಳು ಅನ್ನುವುದರಲ್ಲೇ ಬಿಜಿಯಾಗಿ, ಬಣ್ಣ ಹಚ್ಚುವುದನ್ನೇ ಮರೆತುಬಿಟ್ಟಿದ್ದ ಅಮಲಾ ನಾಗಾರ್ಜುನ, ಸೆಕೆಂಡ್ ಇನ್ನಿಂಗ್ಸ್ ಶುರುಮಾಡುವ ತವಕದಲ್ಲಿದ್ದಾರೆ. ಅಂದುಕೊಂಡಂತೆ ಎಲ್ಲವೂ ಆದರೆ ಅಮಲಾ ಸದ್ಯದಲ್ಲೇ ಬಾಲಿವುಡ್ ಬಿಗ್ ಸ್ಕ್ರೀನ್ ನಲ್ಲಿ ಮಿಂಚಲಿದ್ದಾರೆ.

ನಂಬಿದ್ರೆ ನಂಬಿ, ಅಮಲಾ ನಾಗಾರ್ಜುನ ಮರಳಿ ನಟನೆಗೆ ಇಳಿದಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಕೈಹಿಡಿದ ಮೇಲೆ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ಅಮಲಾ, ಬಾಲಿವುಡ್ ನ ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ.

ನಿರ್ದೇಶಕ ಮಹೇಶ್ ಭಟ್ ಅವರ ತಂದೆ-ತಾಯಿಯ ಲವ್ ಸ್ಟೋರಿ, 'ಹಮಾರಿ ಅಧೂರಿ ಕಹಾನಿ' ಆಗಿ ತೆರೆಗೆ ಬರುತ್ತಿರುವ ಸುದ್ದಿ ನಿಮಗೆಲ್ಲಾ ಗೊತ್ತಿರಬಹುದು. 'ಆಶಿಕಿ-2' ಖ್ಯಾತಿಯ ಮೋಹಿತ್ ಸೂರಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರವನ್ನು ಪೋಷಿಸಲಿದ್ದಾರೆ ಅಮಲಾ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

amala nagarjuna

ಹಾಗಂತ ಇಮ್ರಾನ್ ಹಶ್ಮಿ ಜೊತೆ ಅಮಲಾನ ಲಿಂಕ್ ಮಾಡಬೇಡಿ. ಕಿಸ್ಸರ್ ಬಾಯ್ ಜೊತೆ ಡ್ಯುಯೆಟ್ ಹಾಡೋಕೆ ವಿದ್ಯಾ ಬಾಲನ್ ಇದ್ದಾರೆ. ಇಬ್ಬರ ನಡುವೆ ಇಡೀ ಚಿತ್ರಕ್ಕೆ ಟ್ವಿಸ್ಟ್ ಕೊಡುವ ಪಾತ್ರದಲ್ಲಿ ಅಮಲಾ ಅಭಿನಯಿಸುವುದಕ್ಕೆ ಹ್ಹೂಂ ಅಂದಿದ್ದಾರೆ ಅಷ್ಟೇ.

ಎರಡು ವರ್ಷದ ಹಿಂದೆ 'ಲೈಫ್ ಈಸ್ ಬ್ಯುಟಿಫುಲ್' ಚಿತ್ರದ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡ ಅಮಲಾ, ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ 'ಮನಂ'ನಲ್ಲಿ ಹೀಗೆ ಬಂದು ಹಾಗೆ ಹೋಗಿದ್ದರು.

ಅಷ್ಟು ಬಿಟ್ಟರೆ ತೆರೆಹಿಂದೆಯೇ ಇದ್ದ ಅಮಲಾಗೆ ಬಾಲಿವುಡ್ ರತ್ನಗಂಬಳಿ ಹಾಸಿದೆ. ಆ ಮೂಲಕ ಮತ್ತೊಮ್ಮೆ ಅಮಲಾ ಅಮಲೇರಿಸುತ್ತಾರಾ? ನೋಡ್ಬೇಕು...(ಏಜೆನ್ಸೀಸ್)

English summary
Amala, wife of Akkineni Nagarjuna is all set to play a prominent role in Emraan Hashmi starer Hamari Adhuri Kahani directed by Mohit Suri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada