For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ಗೆ ಕೊವಿಡ್ ಭೀತಿ: ಅಮಿತಾಭ್-ಇಮ್ರಾನ್ ಚಿತ್ರ ಮುಂದೂಡಿಕೆ

  |

  ಕೊರೊನಾ ಲಾಕ್‌ಡೌನ್ ಆದ್ಮೇಲೆ ದಕ್ಷಿಣ ಭಾರತದ ಸ್ಟಾರ್ ನಟರ ಸಿನಿಮಾಗಳು ಒಂದೊಂದೆ ಚಿತ್ರಮಂದಿರಕ್ಕೆ ಬರ್ತಿವೆ. ಆದರೆ, ಬಾಲಿವುಡ್‌ನಲ್ಲಿ ಪರಿಸ್ಥಿತಿ ಇನ್ನು ನಿಯಂತ್ರಣಕ್ಕೆ ಬಂದಿಲ್ಲ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಕಡಿಮೆಯಾಗದ ಕಾರಣ ಚಿತ್ರರಂಗಕ್ಕೆ ರಿಲೀಫ್ ಸಿಕ್ಕಿಲ್ಲ.

  ಹೀಗಾಗಿ, ಬಿಡುಗಡೆ ದಿನಾಂಕ ಘೋಷಿಸಿಕೊಂಡಿದ್ದ ಚಿತ್ರಗಳು ಒಂದೊಂದೆ ಮುಂದೂಡಿಕೆ ಮಾಡುತ್ತಿವೆ. ಇದೀಗ, ಅಮಿತಾಭ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚೆಹ್ರೆ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ.

  ವಿಡಿಯೋ ವೈರಲ್: ಪಬ್ ನಲ್ಲಿ ಕುಡಿದು ಜಗಳವಾಡಿ ಒದೆ ತಿಂದ್ರಾ ಅಜಯ್ ದೇವಗನ್?ವಿಡಿಯೋ ವೈರಲ್: ಪಬ್ ನಲ್ಲಿ ಕುಡಿದು ಜಗಳವಾಡಿ ಒದೆ ತಿಂದ್ರಾ ಅಜಯ್ ದೇವಗನ್?

  ಈ ಹಿಂದೆ ನಿಗದಿಯಾದಂತೆ ಏಪ್ರಿಲ್ 9 ರಂದು ಚೆಹ್ರೆ ಸಿನಿಮಾ ಚಿತ್ರಮಂದಿರಕ್ಕೆ ಬರಬೇಕಿತ್ತು. ಇದೀಗ, 'ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿರುವ ಹಿನ್ನೆಲೆ ಹಾಗೂ ಸರ್ಕಾರ ಹೊಸ ಮಾರ್ಗಸೂಚಿಯ ಅನ್ವಯ ಚಿತ್ರದ ಬಿಡುಗಡೆ ಸದ್ಯಕ್ಕೆ ಸಾಧ್ಯವಿಲ್ಲ' ಎಂದು ಸ್ವತಃ ಚಿತ್ರತಂಡ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.

  ಮುಂದಿನ ದಿನಾಂಕವನ್ನು ಸದ್ಯದಲ್ಲೇ ತಿಳಿಸುತ್ತೇವೆ ಎಂದು ಚೆಹ್ರೆ ಚಿತ್ರತಂಡ ಮಾಹಿತಿ ನೀಡಿದೆ.

  ಮಾರ್ಚ್ 18 ರಂದು ಚೆಹ್ರೆ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಸಿನಿಮಾದಲ್ಲಿ ಅಮಿತಾಭ್ ಕ್ರಿಮಿನಲ್ ಲಾಯರ್ ಪಾತ್ರದಲ್ಲಿ ನಟಿಸಿದ್ದು, ಇಮ್ರಾನ್ ಹಶ್ಮಿ ಕ್ರಿಮಿನಲ್ ಆಗಿ ಅಭಿನಯಿಸಿದ್ದಾರೆ. ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಸಹ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

  ರಮ್ಮಿ ಜೆಫ್ರಿ ಈ ಚಿತ್ರ ನಿರ್ದೇಶಿಸಿದ್ದು, ಆನಂದ್ ಪಂಡಿತ್ ಬಂಡವಾಳ ಹಾಕಿದ್ದಾರೆ. ಸಿದ್ಧಾಂತ್ ಕಪೂರ್, ಕ್ರಿಸ್ಟಲ್ ಡಿಸೋಜ, ರಘುಬೀರ್ ಯಾದವ್ ಮತ್ತು ಅನ್ನೂ ಕಪೂರ್ ಸಹ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  'ಅಜಯ್ ದೇವಗನ್ ಬೆನ್ನಿಗೆ ಚೂರಿ ಹಾಕುತ್ತಿದೆ RRR ಸಿನಿಮಾ''ಅಜಯ್ ದೇವಗನ್ ಬೆನ್ನಿಗೆ ಚೂರಿ ಹಾಕುತ್ತಿದೆ RRR ಸಿನಿಮಾ'

  ಅಮೆರಿಕದಲ್ಲಿ ಒಂದು ದಿನ ಮುಂಚಿತವಾಗಿ ರಿಲೀಸಾಗ್ತಿದೆ ಯುವರತ್ನ ಸಿನಿಮಾ | Yuvarathnaa | Filmibeat Kannada

  ಚೆಹ್ರೆ ಚಿತ್ರಕ್ಕೂ ಮೊದಲು 'ಹಾತಿ ಮೇರಿ ಸಾತಿ' ಸಿನಿಮಾ ಹಾಗೂ 'ಬಂಟಿ ಔರ್ ಬಬ್ಲಿ 2' ಚಿತ್ರಗಳು ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ.

  English summary
  Due to rising Covid cases, Bollywood has started postponing the new releases. Haathi Mere Saathi, Bunty Aur Babli 2 and now Chehre.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X