»   » ಮತ್ತೆ ಅಮಿತಾಭ್ ಬಚ್ಚನ್ ಜೊತೆಗೆ ತಾಪ್ಸಿ ಪನ್ನು ನಟನೆ

ಮತ್ತೆ ಅಮಿತಾಭ್ ಬಚ್ಚನ್ ಜೊತೆಗೆ ತಾಪ್ಸಿ ಪನ್ನು ನಟನೆ

Posted By:
Subscribe to Filmibeat Kannada

ಸೌತ್ ಸಿನಿಮಾರಂಗದಲ್ಲಿ ಸ್ಟಾರ್ ನಟಿ ಆಗಿದ್ದ ತಾಪ್ಸಿ ಈಗಾಗಲೇ ಬಾಲಿವುಡ್ ಕೆಲವು ಸಿನಿಮಾ ಮಾಡಿದ್ದಾರೆ. ಹಿಂದಿಯಲ್ಲಿ ತಾಪ್ಸಿ ಮಾಡಿದ ಹಿಟ್ ಸಿನಿಮಾಗಳಲ್ಲಿ 'ಪಿಂಕ್' ಕೂಡ ಒಂದಾಗಿತ್ತು. ವಿಭಿನ್ನ ಕಥೆಯೊಂದಿಗೆ ಬಂದ ಈ ಸಿನಿಮಾದಲ್ಲಿ ತಾಪ್ಸಿ ಅಮೋಘವಾಗಿ ನಟಿಸಿದ್ದರು. ಇದರ ಜೊತೆಗೆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ದೊರಕಿತ್ತು.

'ಪಿಂಕ್' ಸಿನಿಮಾದಲ್ಲಿ ಅಭಿತಾಭ್ ಬಚ್ಚನ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಬಚ್ಚನ್ ಮಾಡಿರುವ ಸುಂದರ ಪಾತ್ರಗಳಲ್ಲಿ ಈ ಪಾತ್ರ ಕೂಡ ಒಂದಾಗಿತ್ತು. ಅಮಿತಾಭ್ ಮತ್ತು ತಾಪ್ಸಿ ಕಾಂಬಿನೇಶನ್ ನಲ್ಲಿ ಬಂದ ಈ ಸಿನಿಮಾ ಎಲ್ಲರ ಮೆಚ್ಚುಗೆಗಳಿಸಿತ್ತು, ಜೊತೆಗೆ ಸಿನಿಮಾ ನೂರು ಕೊಟಿ ಕ್ಲಬ್ ಸೇರಿತು. ಆದರೆ, ವಿಶೇಷ ಅಂದರೆ 'ಪಿಂಕ್' ಸಿನಿಮಾದ ನಂತರ ಈಗ ಮತ್ತೆ ಈ ಜೋಡಿ ಒಂದಾಗಿ ಇನ್ನೊಂದು ಸಿನಿಮಾ ಮಾಡುತ್ತಿದ್ದಾರಂತೆ.

Amitabh Bachchan and Tapsee Pannu to reunite for Badla movie

ತಾಪ್ಸಿ ಮತ್ತೆ ಬಚ್ಚನ್ ಅವರ ಜೊತೆಗೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಪಡೆದಿದ್ದಾರೆ. 'ಬಾದ್ಲ' ಎಂಬ ಹೆಸರಿನಲ್ಲಿ ಶುರು ಆಗಿರುವ ತಾಪ್ಸಿ ಅವರ ಹೊಸ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಕೂಡ ನಟಿಸುತ್ತಿದ್ದಾರಂತೆ. ಈ ಸಿನಿಮಾವನ್ನು ಸುಜಯ್ ಫೋಷ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಶುರು ಆಗಿದ್ದು, ಬಿಗ್ ಬಿ ಸಹ ಸದ್ಯದಲ್ಲಿಯೇ ಈ ಟೀಂ ಸೇರಿಕೊಳ್ಳಲಿದ್ದಾರಂತೆ. ಅಂದಹಾಗೆ, ಈ ಹಿಂದೆ ಪಿಂಕ್ ಸಿನಿಮಾ ಮಾಡಿದಾಗ ತಾಪ್ಸಿ ನಟನೆ ನೋಡಿ ಮೆಚ್ಚಿಗೆ ಸೂಚಿಸಿದ್ದ ಬಚ್ಚನ್ ಇದೀಗ ಮತ್ತೆ ತಾಪ್ಸಿ ಜೊತೆಗೆ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಅಮಿತಾಭ್ ಸದ್ಯ ತಮ್ಮ '102 ನಾಟ್ ಔಟ್' ಸಿನಿಮಾದಲ್ಲಿ ಬಿಜಿ ಇದ್ದಾರೆ. ಈ ಸಿನಿಮಾ ಮೇ 4 ಎಂದು ಬಿಡುಗಡೆಯಾಗುತ್ತಿದೆ.

English summary
After 'Pink' movie Actor Amitabh Bachchan and Tapsee Pannu to reunite for Badla movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X