For Quick Alerts
  ALLOW NOTIFICATIONS  
  For Daily Alerts

  ಮಾಗುತ್ತಲೇ ಸಾಗುತ್ತಿರುವ ಅಮಿತಾಬ್ ಬಚ್ಚನ್‌ಗೆ 80

  |

  ಇಂದು (ಸೆಪ್ಟೆಂಬರ್ 11) ಅಮಿತಾಬ್ ಬಚ್ಚನ್ ಹುಟ್ಟುಹಬ್ಬ. ಇಂದಿಗೆ ಅವರಿಗೆ 80 ವರ್ಷ ತುಂಬಿತು. ಇದು ವಿಶ್ರಾಂತಿಯ ವಯಸ್ಸು ಆದರೆ ಬಚ್ಚನ್‌ ದಿನಚರಿಯಲ್ಲಿ ವಿಶ್ರಾಂತಿಗೆ ಕೊನೆಯ ಪ್ರಾಶಸ್ತ್ಯ!

  1942 ರ ಅಕ್ಟೋಬರ್ 11 ರಂದು ಜನಿಸಿದ ಅಮಿತಾಬ್ ಬಚ್ಚನ್‌ ತಮ್ಮ ಯೌವ್ವನದ ದಿನಗಳಲ್ಲಿ ಸಿನಿಮಾ ನಟನೊಬ್ಬ ಹೇಗಿರಬಾರದೊ ಹಾಗಿದ್ದವರು! 60 ರ ದಶಕದಲ್ಲಿ ದಿಲೀಪ್ ಕುಮಾರ್, ರಾಜೇಶ್ ಖನ್ನಾ, ರಾಜ್ ಕಪೂರ್, ಆ ನಂತರ ಬಂದ ರಿಷಿ ಕಪೂರ್, ಶಮ್ಮಿ ಕಪೂರ್ ಅಂಥಹಾ ಸ್ಪುರದ್ರೂತಿ, ಬಿಳಿ ತೊಗಲಿನ, ಸುಂದರ ಮುಖಾರವಿಂದದ ನಾಯಕರೇ ಇರುವಾಗ, ಕುರುಚಲು ಕೂದಲಿನ, ನೀಳ ಕಾಲುಗಳ, ಗಂಭೀರವದನದ ಯುವಕನೊಬ್ಬ ನಾಯಕನಾಗುವುದು ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿರಲಿಲ್ಲ.

  ಆರಂಭದಲ್ಲಿ ಹಲವು ನಿರಾಕರಣೆಗಳನ್ನು, ಅಪಮಾನಗಳನ್ನು ಎದುರಿಸಿದರೂ ಹಠಬಿಡದೆ ನಟರಾದರು ಮತ್ತು ಐದು ದಶಕಕ್ಕಿಂತಲೂ ಹೆಚ್ಚು ಕಾಲ ಬಾಲಿವುಡ್‌ನ ಆಳಿದವರು, ಈಗಲೂ ಆಳುತ್ತಿರುವವರು ಅಮಿತಾಬ್ ಬಚ್ಚನ್.

  ಪ್ರಧಾನಿ ಮೋದಿ ಟ್ವೀಟ್

  ಪ್ರಧಾನಿ ಮೋದಿ ಟ್ವೀಟ್

  ಅಮಿತಾಬ್ ಬಚ್ಚನ್ ಹುಟ್ಟುಹಬ್ಬಕ್ಕೆ ಲಕ್ಷಾಂತರ ಮಂದಿ ಸಾಮಾಜಿಕ ಜಾಲತಾಣದಲ್ಲಿ ಶುಭಾಷಯಗಳನ್ನು ಕೋರಿದ್ದಾರೆ. ಪ್ರಧಾನಿ ಮೋದಿ, ಟ್ವೀಟ್ ಮಾಡಿ, ''ಅಮಿತಾಬ್ ಬಚ್ಚನ್ ಅವರಿಗೆ 80 ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ಬಚ್ಚನ್ ಅವರು, ಭಾರತದ ಚಲನಚಿತ್ರ ಇತಿಹಾಸದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು, ತಲೆಮಾರುಗಳಿಂದಲೂ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಆಕರ್ಷಿಸಿದ್ದಾರೆ ಮತ್ತು ರಂಜಿಸಿದ್ದಾರೆ. ಅವರು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲಿ'' ಎಂದಿದ್ದಾರೆ.

  ಶುಭ ಕೋರಿರುವ ವಿರಾಟ್ ಕೊಹ್ಲಿ

  ಶುಭ ಕೋರಿರುವ ವಿರಾಟ್ ಕೊಹ್ಲಿ

  ಕ್ರಿಕೆಟಿಗ ವಿರಾಟ್ ಕೊಹ್ಲಿ, ತಮ್ಮ ಮೆಚ್ಚಿನ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ್ದು, ''ನೀವು ಹಲವು ಪೀಳಿಗೆಯ ಜನರಿಗೆ ಸ್ಫೂರ್ತಿ. ಇನ್ನೂ ಹಲವು ವರ್ಷಗಳ ಸಂತೋಷ ಮತ್ತು ಉತ್ತಮ ಆರೋಗ್ಯ ನಿಮಗಿರಲಿ. ನಿಮಗೆ ಜನ್ಮದಿನದ ಶುಭಾಶಯಗಳು'' ಎಂದಿದ್ದಾರೆ. ವಿರಾಟ್ ಕೊಹ್ಲಿ ಮಾತ್ರವೇ ಅಲ್ಲದೆ ಇನ್ನೂ ಹಲವು ಕ್ರಿಕೆಟಿಗರು ಅಮಿತಾಬ್ ಬಚ್ಚನ್ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ್ದಾರೆ.

  ಹಲವು ರಾಜಕಾರಣಿಗಳು ಶುಭಾಷಯ ಕೋರಿದ್ದಾರೆ

  ಹಲವು ರಾಜಕಾರಣಿಗಳು ಶುಭಾಷಯ ಕೋರಿದ್ದಾರೆ

  ಹಲವು ರಾಜ್ಯಗಳ ಪ್ರಮುಖ ರಾಜಕಾರಣಿಗಳು ಸಹ ಅಮಿತಾಬ್ ಬಚ್ಚನ್ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ್ದಾರೆ. ಉತ್ತರ ಭಾರತದ ಹಲವು ಪ್ರಮುಖ ರಾಜಕಾರಣಿಗಳು ಬಚ್ಚನ್ ಹುಟ್ಟುಹಬ್ಬಕ್ಕೆ ಶುಭಾಷಯ ತಿಳಿಸಿದ್ದಾರೆ. ರಾಜಕಾರಣಿಗಳೊಟ್ಟಿಗೂ ಅಮಿತಾಬ್ ಅವರದ್ದು ಆತ್ಮೀಯ ಬಂಧವೇ ಇದೆ.

  ಅಪ್ಪನಿಗಾಗಿ ಅಭಿಶೇಕ್ ವಿಶೇಷ ಕಾರ್ಯಕ್ರಮ

  ಅಪ್ಪನಿಗಾಗಿ ಅಭಿಶೇಕ್ ವಿಶೇಷ ಕಾರ್ಯಕ್ರಮ

  ಅಮಿತಾಬ್ ಬಚ್ಚನ್‌ ಹುಟ್ಟುಹದ ವಿಶೇಷವಾಗಿ ಇಂದು (ಅಕ್ಟೋಬರ್ 11) ರಂದು ಅವರ ಪುತ್ರ ಅಭಿಶೇಕ್ ಬಚ್ಚನ್ ತಂದೆಗಾಗಿ ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಮಿತಾಬ್ ಬಚ್ಚನ್‌ರ ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್‌ಪತಿ'ಯಲ್ಲಿ ಇದೇ ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ಹಾಟ್‌ ಸೀಟ್‌ನ ಬದಲಿಗೆ ಅತಿಥಿಯ ಸೀಟ್‌ನಲ್ಲಿ ಕುಳಿತು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಆ ಎಪಿಸೋಡ್ ಇಂದು ರಾತ್ರಿ ಪ್ರಸಾರವಾಗಲಿದೆ. ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್‌ರ ಪತ್ನಿ ಜಯಾ ಬಚ್ಚನ್ ಸಹ ಭಾಗಿಯಾಗಿದ್ದಾರೆ.

  English summary
  Actor Amitabh Bachchan celebrating his 80th birthday on October 11, 2022. Many people in the movie industry wished him.
  Tuesday, October 11, 2022, 12:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X