For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ಪಡೆಯದೆ 'ಚೆಹರೆ' ಸಿನಿಮಾದಲ್ಲಿ ನಟಿಸಿದ ಅಮಿತಾಬ್ ಬಚ್ಚನ್

  |

  ನಟ ಅಮಿತಾಬ್ ಬಚ್ಚನ್ ಭಾರತದ ಅತ್ಯಂತ ಬೇಡಿಕೆಯ ಮತ್ತು ದುಬಾರಿ ನಟರಲ್ಲಿ ಒಬ್ಬರು. ವಯಸ್ಸು 78 ಆದರೂ ಅಮಿತಾಬ್ ಬಚ್ಚನ್‌ಗೆ ಬೇಡಿಕೆ ಕಡಿಮೆ ಆಗಿಲ್ಲ.

  ಬೇಡಿಕೆ ಹೆಚ್ಚಾದಷ್ಟು ನಟರ ಸಂಭಾವನೆ ಏರುವುದು ಸಾಮಾನ್ಯ. ಅಂತೆಯೇ ಬಚ್ಚನ್ ಸಂಭಾವನೆ ಸಹ ಕೆಲವು ಕೋಟಿಗಳೇ ಇದೆ. ವರ್ಷಕ್ಕೆ ಕನಿಷ್ಟ ನಾಲ್ಕು ಸಿನಿಮಾಗಳಲ್ಲಿಯಾದರೂ ಬಚ್ಚನ್ ನಟಿಸುತ್ತಾರೆ. ಆದರೆ ಬಚ್ಚನ್ ನಟಿಸಿರುವ ಹೊಸ ಸಿನಿಮಾಕ್ಕೆ ಒಂದು ರುಪಾಯಿ ಸಂಭಾವನೆ ಸಹ ಅವರು ಪಡೆದಿಲ್ಲ.

  ಅಮಿತಾಬ್ ಬಚ್ಚನ್ ನಟಿಸಿರುವ 'ಚೆಹರೆ' ಸಿನಿಮಾಕ್ಕೆ ಅವರು ಒಂದು ರುಪಾಯಿ ಸಂಭಾವನೆ ಸಹ ಪಡೆದಿಲ್ಲ. ಅಷ್ಟೇ ಅಲ್ಲ ಚಿತ್ರೀಕರಣ ಸೆಟ್‌ಗೆ ಬಂದು ಹೋಗುವ ಖರ್ಚುಗಳನ್ನು ಸಹ ಬಚ್ಚನ್ ಸ್ವತಃ ತಾವೇ ನೋಡಿಕೊಂಡಿದ್ದಾರೆ. ಅದರ ಹೊರೆಯನ್ನು ಸಹ ನಿರ್ಮಾಪಕರ ಮೇಲೆ ಹೇರಿಲ್ಲ ಈ ಹಿರಿಯ ನಟ.

  ಈ ಬಗ್ಗೆ ಮಾಹಿತಿ ನೀಡಿರುವ ಸಿನಿಮಾದ ನಿರ್ಮಾಪಕ ಆನಂದ್ ಪಂಡಿತ್, ''ಅಮಿತಾಬ್ ಬಚ್ಚನ್ ನಮ್ಮ ಸಿನಿಮಾದಲ್ಲಿ ನಟಿಸಲು ಸಂಭಾವನೆ ಪಡೆದಿಲ್ಲ. ಈ ಸಿನಿಮಾದಲ್ಲಿ ನಟಿಸಲು ನನಗೆ ಸಂಭಾವನೆ ಬೇಡ ಎಂದು ಅವರು ಮೊದಲೇ ಹೇಳಿದ್ದರು'' ಎಂದಿದ್ದಾರೆ.

  ಪ್ರಯಾಣದ ಖರ್ಚು ಸಹ ಪಡೆಯಲಿಲ್ಲ: ಆನಂದ್ ಪಂಡಿತ್

  ಪ್ರಯಾಣದ ಖರ್ಚು ಸಹ ಪಡೆಯಲಿಲ್ಲ: ಆನಂದ್ ಪಂಡಿತ್

  'ಚೆಹರೆ' ಸಿನಿಮಾದ ಕತೆ ಅಮಿತಾಬ್ ಬಚ್ಚನ್‌ಗೆ ಬಹಳ ಇಷ್ಟವಾಗಿದೆ ಹಾಗಾಗಿ ಬಚ್ಚನ್ ಈ ಸಿನಿಮಾದಲ್ಲಿ ಹಣ ಪಡೆಯದೆ ನಟಿಸಿದ್ದಾರೆ. ''ಲಂಡನ್‌ನಲ್ಲಿ ಚಿತ್ರೀಕರಣ ಇದ್ದಾಗ ಅಲ್ಲಿಗೆ ಬರುವ ಪ್ರಯಾಣದ ಖರ್ಚನ್ನು ಸಹ ಬಚ್ಚನ್ ಸ್ವತಃ ಅವರೇ ನೋಡಿಕೊಂಡರು. ಅದರ ಖರ್ಚನ್ನು ಸಹ ನನ್ನ ಮೇಲೆ ಹೇರಲಿಲ್ಲ'' ಎಂದು ಆನಂದ್ ಪಂಡಿತ್ ಹೇಳಿದ್ದಾರೆ.

  'ಬ್ಲ್ಯಾಕ್' ಸಿನಿಮಾಕ್ಕೂ ಸಂಭಾವನೆ ಪಡೆದಿರಲಿಲ್ಲ

  'ಬ್ಲ್ಯಾಕ್' ಸಿನಿಮಾಕ್ಕೂ ಸಂಭಾವನೆ ಪಡೆದಿರಲಿಲ್ಲ

  ಅಮಿತಾಬ್ ಬಚ್ಚನ್ ಸಂಭಾವನೆ ಪಡೆಯದೆ ನಟಿಸುತ್ತಿರುವುದು ಇದು ಮೊದಲೇನಲ್ಲ. ಈ ಮೊದಲು ಸಂಜಯ್ ಲೀಲಾ ಬನ್ಸಾಲಿಯ 'ಬ್ಲ್ಯಾಕ್' ಸಿನಿಮಾದಲ್ಲಿ ನಟಿಸಲು ಸಹ ಅವರು ಹಣ ಪಡೆದಿರಲಿಲ್ಲ. ಆ ಸಿನಿಮಾದ ಕತೆ ಬಚ್ಚನ್‌ಗೆ ಹೆಚ್ಚು ಇಷ್ಟವಾಗಿದ್ದ ಕಾರಣ ಹಾಗೂ ಸಂಜಯ್ ಲೀಲಾ ಬನ್ಸಾಲಿ ಮೇಲಿನ ಗೌರವದ ಕಾರಣದಿಂದ ಹಣ ಪಡೆಯದೆ ಅವರು ನಟಿಸಿದ್ದರು.

  ರಿಯಾ ಚಕ್ರವರ್ತಿ ಸಹ ಇದ್ದಾರೆ

  ರಿಯಾ ಚಕ್ರವರ್ತಿ ಸಹ ಇದ್ದಾರೆ

  'ಚೆಹರೆ' ಸಿನಿಮಾಕ್ಕೆ ಮರಳುವುದಾದರೆ ಸಿನಿಮಾವನ್ನು ರೂಮಿ ಜೆಫ್ರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಬಚ್ಚನ್ ಜೊತೆಗೆ ಇಮ್ರಾನ್ ಹಷ್ಮಿ, ಕ್ರಿಸ್ಟಲ್ ಡಿಸೋಜಾ, ದಿವಂಗತ ಸುಶಾಂತ್‌ ರಜಪೂತ್‌ನ ಮಾಜಿ ಗೆಳತಿ ರಿಯಾ ಚಕ್ರವರ್ತಿ, ಸಿದ್ಧಾರ್ಥ್ ಕಪೂರ್, ಅನ್ನು ಕಪೂರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವು ಆಗಸ್ಟ್ 27ರಂದು ಬಿಡುಗಡೆ ಆಗಲಿದೆ.

  ಭಿನ್ನ ಕತೆಯನ್ನು ಹೊಂದಿದೆ ಈ ಸಿನಿಮಾ

  ಭಿನ್ನ ಕತೆಯನ್ನು ಹೊಂದಿದೆ ಈ ಸಿನಿಮಾ

  'ಚೆಹರೆ' ಸಿನಿಮಾವು ಭಿನ್ನವಾದ ಕತೆಯನ್ನು ಹೊಂದಿದೆ. ಅಮಿತಾಬ್ ಬಚ್ಚನ್ ಹಾಗೂ ಅವರ ಕೆಲವು ಗೆಳೆಯರು ಸೇರಿಕೊಂಡು ಆಟವೊಂದನ್ನು ಆಡುತ್ತಾರೆ. ನಿಜ ಜೀವನಕ್ಕೆ ಸಂಬಂಧಿಸಿದ ಆಟವದು. ತಪ್ಪು-ಒಪ್ಪುಗಳನ್ನು ಗುರುತಿಸುವ ಆಟವದು. ಆ ಆಟದಲ್ಲಿ ಹಿಮ್ರಾನ್ ಹಷ್ಟಿ ಸ್ಪರ್ಧಿಯಾಗುತ್ತಾರೆ. ಇಮ್ರಾನ್ ಜೀವನದಲ್ಲಿ ಮಾಡಿರುವ ಸರಿ-ತಪ್ಪುಗಳನ್ನು ಗುರುತಿಸಿ ಅದಕ್ಕೆ ಶಿಕ್ಷೆ ನೀಡುವ ಆಟವದು. ಆ ಆಟದಿಂದ ಇಮ್ರಾನ್ ಹಷ್ಮಿ ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬುದು ಕತೆ.

  ಹಲವು ಸಿನಿಮಾಗಳು ಬಚ್ಚನ್ ಕೈಯಲ್ಲಿವೆ

  ಹಲವು ಸಿನಿಮಾಗಳು ಬಚ್ಚನ್ ಕೈಯಲ್ಲಿವೆ

  ಅಮಿತಾಬ್ ಬಚ್ಚನ್ ನಟನೆಯ 'ಬ್ರಹ್ಮಾಸ್ತ್ರ' ಹಾಗೂ 'ಜುಂಡ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದೀಗ ಅಜಯ್ ದೇವಗನ್ ನಿರ್ದೇಶನದ 'ಮೇ ಡೆ' ಸಿನಿಮಾದಲ್ಲಿ ಬಚ್ಚನ್ ನಟಿಸುತ್ತಿದ್ದಾರೆ. 'ಗುಡ್‌ ಬೈ' ಹೆಸರಿನ ಕೌಟುಂಬಿಕ ಕತೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿದ್ದು ಆ ಸಿನಿಮಾದಲ್ಲಿ ಬಚ್ಚನ್ ಪುತ್ರಿಯ ಪಾತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ನಂತರ ಪ್ರಭಾಸ್ ನಟನೆಯ ತೆಲುಗು ಸಿನಿಮಾದಲ್ಲಿ ಬಚ್ಚನ್ ನಟಿಸಲಿದ್ದಾರೆ ಇದೇ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಸಹ ನಾಯಕಿ ಪಾತ್ರದಲ್ಲಿ ನಟಿಸಲಿದ್ದಾರೆ. 'ಜುಯೆಲ್ ಆಫ್ ಇಂಡಿಯಾ' ಹಾಗೂ ತಮಿಳಿನ 'ವುಯೆರ್ದಾ ಮನಿದನ್' ಸಿನಿಮಾಗಳಲ್ಲಿಯೂ ಬಚ್ಚನ್ ನಟಿಸುತ್ತಿದ್ದಾರೆ.

  English summary
  Amitabh Bachchan did not take single rupee as remuneration for his upcoming movie Chehre. He liked the story very much so acted free for the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X