For Quick Alerts
  ALLOW NOTIFICATIONS  
  For Daily Alerts

  'IFFI 2017' ಪ್ರಶಸ್ತಿ ಪ್ರಕಟ : 'ವರ್ಷದ ವ್ಯಕ್ತಿತ್ವ ಪ್ರಶಸ್ತಿ'ಗೆ ಭಾಜನರಾದ ಬಚ್ಚನ್

  By Naveen
  |

  ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟ ಅಮಿತಾಬ್ ಬಚ್ಚನ್ ಮತ್ತೊಂದು ಅತ್ಯುನ್ನತ ಪ್ರಶಸ್ತಿ ಪಡೆದಿದ್ದಾರೆ. 'IFFI 2017' (International Film Festival of India) ಪ್ರಶಸ್ತಿ ನಿನ್ನೆ ಪ್ರಕಟವಾಗಿದ್ದು, ಬಚ್ಚನ್ 'ವರ್ಷದ ವ್ಯಕ್ತಿತ್ವ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

  48ನೇ 'IFFI 2017' ಕಾರ್ಯಕ್ರಮಕ್ಕೆ ಅದ್ದೂರಿ ತೆರೆ

  ನಾಲ್ಕು ದಶಕದಿಂದ ಚಿತ್ರರಂಗದಲ್ಲಿ ಅಮಿತಾಬ್ ಸಾಧನೆ ಅಪಾರ. ಅದೇ ರೀತಿ ಭಾರತೀಯ ಸಿನಿಮಾರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಇದೀಗ ಈ ಪ್ರಶಸ್ತಿಯನ್ನು ಅಮಿತಾಬ್ ಅವರಿಗೆ ನೀಡಲಾಗಿದೆ. 190ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಬಿಗ್ ಬಿ ಸತತ 40 ವರ್ಷಗಳಿಂದ ತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ.

  ಗೋವಾದಲ್ಲಿ ನಿನ್ನೆ ಸಂಜೆ ಅದ್ದೂರಿಯಾಗಿ 'IFFI 2017' ಸಮಾರೂಪ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಬಚ್ಚನ್ ಅವರಿಗೆ ಪ್ರಶಸ್ತಿ ಮೂಲಕ ಗೌರವ ಸಲ್ಲಿಸಲಾಗಿದೆ. ಅಮಿತಾಬ್ ಅವರಿಗೆ ಈ ಪ್ರಶಸ್ತಿಯನ್ನು ನಟ ಅಕ್ಷಯ್ ಕುಮಾರ್ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿತರಿಸಿದರು.

  ಉಳಿದಂತೆ, '48ನೇ IFFI' ಅತ್ಯುತ್ತಮ ನಟ ಪ್ರಶಸ್ತಿ ನಹುವೆಲ್ ಪೆರೆಜ್ ಬಿಸ್ಕಾರ್ಟ್ (Nahuel Perez Biscayart) ಪಾಲಾದರೆ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಾರ್ವತಿ ಮೆನನ್ ತಮ್ಮ 'ಟೇಕ್ ಆಫ್' ಚಿತ್ರಕ್ಕಾಗಿ ಪಡೆದಿದ್ದಾರೆ. ಇನ್ನು ಈ ಬಾರಿಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಒಟ್ಟು 82 ದೇಶದ 195 ಸಿನಿಮಾಗಳು ಪ್ರದರ್ಶನವಾಗಿತ್ತು. ಬಾಲಿವುಡ್ ನಟಿ ಶ್ರೀದೇವಿ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದರು. 8 ದಿನಗಳ ಕಾಲ ಫಿಲ್ಮ್ ಫೆಸ್ಟಿವಲ್ ನಡೆದಿತ್ತು.

  English summary
  Bollywood Actor Amitabh Bachchan got 'Indian Film Personality of the Year Award' at the closing ceremony of International Film Festival of India (IFFI). ಐ.ಎಫ್.ಎಫ್.ಐ 2017 ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ 'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ಪಡೆದಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X