»   » ಭಟ್ಟರ ಚಿತ್ರದಲ್ಲಿ ಮತ್ತೆ ಒಂದಾದ ಬಿಗ್ ಬಿ- ನಾನಾ?

ಭಟ್ಟರ ಚಿತ್ರದಲ್ಲಿ ಮತ್ತೆ ಒಂದಾದ ಬಿಗ್ ಬಿ- ನಾನಾ?

Posted By:
Subscribe to Filmibeat Kannada

ಡ್ರಾಮಾ ಚಿತ್ರದ ಬಳಿಕ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಎಲ್ಲಿ ಮರೆಯಾದರು ಎಂದು ಹುಡುಕುತ್ತಿದ್ದ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿಗಳೇ ಸಿಗುತ್ತಿದೆ. ಭಟ್ಟರ ಡೈರೆಕ್ಷನ್ ನಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು. ಸುದೀಪ್ 'ಬಿಗ್ ಬಾಸ್' ಹಿಂದೆ ಬಿದ್ದರೆ, ಭಟ್ಟರು 'ಬಿಗ್ ಬಿ' ಹುಡುಕಿಕೊಂಡು ಮುಂಬೈಗೆ ಹೊರಟರು.

ಬಾಲಿವುಡ್ ಗೆ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಪ್ರವೇಶ ಖಚಿತವಾಗುತ್ತಿದ್ದಂತೆ ಕಥೆ, ತಾರಾಗಣದ ಬಗ್ಗೆ ಕುತೂಹಲ ಹೆಚ್ಚಾಗತೊಡಗಿದೆ. ಹದಿಹರೆಯದ ಮನಸ್ಸಿಗೆ ಮುದ ನೀಡುವ ಚಿತ್ರ ಕಥೆ ರೆಡಿ ಮಾಡಿಕೊಂಡಿರುವ ಭಟ್ಟರು, ರೋಮ್ಯಾನ್ಸ್, ಸೆಂಟಿಮೆಂಟ್ ಮಿಕ್ಸ್ ಮಾಡಿರುವ ಒಳ್ಳೆ ಕಥೆ ನೀಡುತ್ತಾರಂತೆ.

Amitabh Bachchan and Nana Patekar in Yogaraj Bhat movie

ಸದ್ಯಕ್ಕೆ ಹಿಂದಿ ಚಿತ್ರರಂಗದ ಹೊಸ ಮುಖಗಳಿಗೆ ಹುಡುಕಾಟ ನಡೆಸಿದ್ದಾರೆ. ಈ ನಡುವೆ ಅಮಿತಾಬ್ ಬಚ್ಚನ್ ಅವರಿಗೆ ಪ್ರಧಾನ ಪಾತ್ರ( ಭಟ್ಟರ ಪಂಚರಂಗಿಯ ಅನಂತ್ ನಾಗ್ ಪಾತ್ರದಂತೆ) ನೀಡುವ ಸಾಧ್ಯತೆ ಬಗ್ಗೆ ಸುದ್ದಿ ಹರಡಿತು. ಭಟ್ಟರು ಕೂಡಾ ಬಿಗ್ ಬಿ ಒಳ್ಳೆ ಪಾತ್ರ ಸೃಷ್ಟಿಸಿರುವ ಬಗ್ಗೆ ಹೇಳಿಕೊಂಡಿದ್ದರು.

ಆದರೆ, ಕಥೆ ಕೇಳಿದ ಬಿಗ್ ಬಿ ಕೂಡಾ ಥ್ರಿಲ್ ಆಗಿದ್ದಾರಂತೆ. ಅವರು ಓಕೆ ಎಂದರೆ ಅಮಿತಾಬ್ ಗೆ ಆಕ್ಷನ್ ಕಟ್ ಹೇಳುವುದೊಂದು ಬಾಕಿ ಇರುತ್ತದೆ. ಆಗಸ್ಟ್ ನಲ್ಲಿ ಚಿತ್ರೀಕರಣವಂತೆ. ಕನ್ನಡ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಚಿತ್ರ ಏಕಕಾಲಕ್ಕೆ ತೆರೆಕಾಣಲಿದೆಯಂತೆ.

ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಬಿಗ್ ಬಿ ಜೊತೆಗೆ ಡೈಲಾಗ್ ಕಿಂಗ್ ನಾನಾ ಪಾಟೇಕರ್ ಅವರನ್ನು ತಾರಾಗಣದಲ್ಲಿ ಸೇರಿಸಿಕೊಳ್ಳಲಾಗಿದೆಯಂತೆ. 1999ರಲ್ಲಿ ಮೆಹುಲ್ ಕುಮಾರ್ ಅವರ ಕೊಹ್ರಾಂ ಚಿತ್ರದಲ್ಲಿ ಬಿಗ್ ಬಿ ಹಾಗೂ ನಾನಾ ಪಾಟೇಕರ್ ಒಟ್ಟಿಗೆ ನಟಿಸಿದ್ದರು. ಅದರೆ, ಚಿತ್ರ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿರಲಿಲ್ಲ.

ಈಗ ಮತ್ತೊಮ್ಮೆ ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ನೋಡುವ ಅವಕಾಶವನ್ನು ಭಟ್ಟರು ಸೃಷ್ಟಿಸುತ್ತಿದ್ದಾರೆ. ನಾನಾ ಪಾಟೇಕರ್ ಅವರಿಗೆ ಕಥೆ ಹೇಳಿದ್ದೇನೆ. ಬನ್ನಿ ಮಾತಾಡೋಣ ಎಂದಿದ್ದಾರೆ. ಕಥೆಯಲ್ಲಿ ಇನ್ನಷ್ಟು ಬದಲಾವಣೆ ಮಾಡುವುದಿದೆ ಎಲ್ಲವೂ ಕೆಲವು ದಿನಗಳಲ್ಲಿ ಫೈನಲ್ ಆಗುವ ಸಾಧ್ಯತೆಯಿದೆ ಎಂದು ಭಟ್ಟರು ಹೇಳಿದ್ದಾರೆ.

English summary
Yogaraj Bhatt's new film which he has plans to do in Hindi is making a lot of news even before its launch. First there was news that Amitabh Bachchan would be a part of the film. Now, there is news that Nana Patekar might do a pivotal role in the film
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada