»   » ದಿಗಂತ್ ಚಿತ್ರಕ್ಕೆ ಅಮಿತಾಬ್ ಬಚ್ಚನ್ ರಿಂದ ಪ್ರಚಾರ.!

ದಿಗಂತ್ ಚಿತ್ರಕ್ಕೆ ಅಮಿತಾಬ್ ಬಚ್ಚನ್ ರಿಂದ ಪ್ರಚಾರ.!

Posted By:
Subscribe to Filmibeat Kannada

ಅದೃಷ್ಟ ಬಂದ್ರೆ ಹೀಗೆ ಬರಬೇಕು ನೋಡಿ. ದೂದ್ ಪೇಡಾ ದಿಗಂತ್ ಬಾಲಿವುಡ್ ಕನಸು ಇದೀಗ ನನಸಾಗುತ್ತಿದೆ. ವರ್ಷಗಳಿಂದ ಬಿಟೌನ್ ಅಂಗಳದಲ್ಲಿ ಬೆವರಿಳಿಸುತ್ತಿರುವ ದಿಗಂತ್ ಅಭಿನಯದ ಮೊದಲ ಹಿಂದಿ ಸಿನಿಮಾ 'ವೆಡ್ಡಿಂಗ್ ಪುಲಾವ್' ರಿಲೀಸ್ ಗೆ ರೆಡಿಯಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ 'ವೆಡ್ಡಿಂಗ್ ಪುಲಾವ್' ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. 'ವೆಡ್ಡಿಂಗ್ ಪುಲಾವ್' ಚಿತ್ರದ ಫಸ್ಟ್ ಲುಕ್ ಗೆ ಸಿನಿ ಪ್ರಿಯರು ಕ್ಲೀನ್ ಬೌಲ್ಡ್ ಆಗಿದ್ದಾರೆ.

diganth-amitabh bachchan

ಇಂಟ್ರೆಸ್ಟಿಂಗ್ ಅಂದ್ರೆ, 'ವೆಡ್ಡಿಂಗ್ ಪುಲಾವ್' ಟ್ರೈಲರ್ ನೋಡಿ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಹಾಡಿ ಹೊಗಳಿದ್ದಾರೆ.

ಈ ಬಗ್ಗೆ ಅಮಿತಾಬ್ ಬಚ್ಚನ್, ''ವೆಡ್ಡಿಂಗ್ ಪುಲಾವ್ ಸಖತ್ ಫ್ರೆಶ್ ಆಗಿದೆ. ಹೊಸ ಪ್ರತಿಭೆಗಳ ಸಿನಿಮಾ ನೋಡಿ ಎಲ್ಲರೂ ಪ್ರೋತ್ಸಾಹ ನೀಡಬೇಕು'' ಅಂತ ಟ್ವೀಟ್ ಮಾಡಿದ್ದಾರೆ. ಜೊತೆಗೆ 'ವೆಡ್ಡಿಂಗ್ ಪುಲಾವ್' ಟ್ರೈಲರ್ ಲಿಂಕ್ ಕೂಡ ಶೇರ್ ಮಾಡುವ ಮೂಲಕ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಿದ್ದಾರೆ. ['ವೆಡ್ಡಿಂಗ್ ಪುಲಾವ್' ತಿನ್ನಿಸೋಕೆ ಬಂದ್ರು ದಿಗಂತ್]

ಕನ್ನಡ ನಟನೊಬ್ಬನ ಬಾಲಿವುಡ್ ಮೊದಲ ಹೆಜ್ಜೆಗೆ ಅಮಿತಾಬ್ ಬಚ್ಚನ್ ಅಂತಹ ದೊಡ್ಡ ನಟ ಹುರಿದುಂಬಿಸುತ್ತಿದ್ದಾರೆ ಅಂದ್ರೆ ದಿಗಂತ್ ಗೆ ಲಕ್ ಚೆನ್ನಾಗಿದೆ ಅಂತ ಅರ್ಥ.

English summary
Bollywood Actor Amitabh Bachchan has taken his twitter account to promote Hindi Movie 'Wedding Pullav'. There by Amitabh Bachchan has promoted Kannada Actor Diganth's Bollywood Debut movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada