For Quick Alerts
  ALLOW NOTIFICATIONS  
  For Daily Alerts

  ನಟನೆ ಬೇಡವೆಂದು ಉದ್ಯಮದ ಕಡೆ ಹೊರಳಿದ ಬಚ್ಚನ್ ಕುಟುಂಬದ ಕುಡಿ

  |

  ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಐದು ಮಂದಿ ನಟ-ನಟಿಯರಿದ್ದಾರೆ. ಬಾಲಿವುಡ್‌ನ ಬಹು ಗೌರವಾನ್ವಿತ ಕುಟುಂಬ ಬಚ್ಚನ್ ಕುಟುಂಬ.

  ಕಪೂರ್, ಚೋಪ್ರಾ, ಭಟ್ ಕುಟುಂಬ ಹೀಗೆ ತಲೆ-ತಲೆಮಾರುಗಳಿಂದ ನಟನೆಯನ್ನೇ ವೃತ್ತಿ ಮಾಡಿಕೊಂಡು ಬಂದಿರುವ ಕುಟುಂಬಗಳು ಬಾಲಿವುಡ್‌ನಲ್ಲಿ ಕೆಲವಿವೆ. ಬಚ್ಚನ್ ಕುಟುಂಬ ಪ್ರಸ್ತುತ ಎರಡನೇ ತಲೆಮಾರಿನಲ್ಲಿದ್ದು, ಬಚ್ಚನ್ ಅವರ ಮಗ-ಸೊಸೆ ನಟನಾ ವೃತ್ತಿ ಮುಂದುವರೆಸುತ್ತಿದ್ದಾರೆ. ಆದರೆ ಬಚ್ಚನ್ ರ ಮೊಕ್ಕಳು ನಟನೆಗೆ ಸಿನಿಮಾ ಉದ್ಯಮಕ್ಕೆ ಬರುವುದು ಅನುಮಾನ.

  ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್?

  ಸಿನಿಮಾ ರಂಗಕ್ಕೆ ಖಂಡಿತ ಬರುತ್ತಾರೆ ಎನ್ನಲಾಗುತ್ತಿದ್ದ ಬಚ್ಚನ್ ರ ಮೊಮ್ಮಗಳು ನವ್ಯಾ ನವೇಲಿ ನಂದಾ, ತಾತನ ವೃತ್ತಿ ಬೇಡವೆಂದು ಅಪ್ಪನ ವೃತ್ತಿಗೆ ಹೊರಳಿದ್ದಾರೆ.

  ಹೌದು, ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ, ನಟಿ ಮಾದರಿಯ ಲುಕ್ಸ್ ಹೊಂದಿರುವ ನವ್ಯಾ, ನಟಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಆಕೆ ಅಪ್ಪ ನಿಖಿಲ್ ನಂದಾ ಜೊತೆಗೆ ಉದ್ಯಮ ನೋಡಿಕೊಳ್ಳತೊಡಗಿದ್ದಾರೆ. ಸಿನಿಮಾ ರಂಗಕ್ಕೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ನವ್ಯಾ.

  ನವ್ಯಾ ನಂದ, ಅಮಿತಾಬ್ ಅವರ ಮಗಳು ಶ್ವೇತಾರ ಪುತ್ರಿ. ನವ್ಯಾರ ತಂದೆ ನಿಖಿಲ್ ಭಾರತದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರು. ಮ್ಯಾಗಜಿನ್ ಒಂದಕ್ಕೆ ಸಂದರ್ಶನ ನೀಡಿರುವ ನವ್ಯಾ, 'ನಂದಾ ಕುಟುಂಬದ ನಾಲ್ಕನೇ ತಲೆಮಾರಿನ ಮೊದಲ ಹೆಣ್ಣುಮಗಳು ನಾನು ಕುಟುಂಬದ ಉದ್ಯಮವನ್ನು ಮುನ್ನಡೆಸುವುದು ಬಹಳ ಹೆಮ್ಮೆ ಎನಿಸುತ್ತಿದೆ' ಎಂದಿದ್ದಾರೆ.

  ಧನುಷ್ ಮಾಡಬೇಕಿದ್ದ ಖ್ಯಾತ ಕ್ರೀಡಾಪಟುವಿನ ಪಾತ್ರದಲ್ಲಿ ಅಮೀರ್ ಖಾನ್

  ವೈರಲ್ ಆಗೋಯ್ತು ರಾಬರ್ಟ್ ಚಿತ್ರದ ಡಿ ಬಾಸ್ ಡೈಲಾಗ್ | Filmibeat Kannada

  ಶಾರುಖ್ ಖಾನ್ ರ ಮಗ ಆರ್ಯನ್ ಖಾನ್ ರ ಆತ್ಮೀಯ ಗೆಳತಿಯೂ ಆಗಿದ್ದಾರೆ ನವ್ಯಾ. ಆರ್ಯನ್ ಹಾಗೂ ನವ್ಯಾರ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು.

  English summary
  Amitabh Bachchan's daughter in law Navya Nanda says she don't want to pursue acting career. She will start helping his father in business.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X