For Quick Alerts
  ALLOW NOTIFICATIONS  
  For Daily Alerts

  ಹುತಾತ್ಮ ಯೋಧರ ಕುಟುಂಬದ ನೆರವಿಗೆ ಬಂದ ಬಚ್ಚನ್

  |

  ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಕುಟುಂಬಕ್ಕೆ ನೆರವಾಗಲು ಸರ್ಕಾರದ ಜೊತೆಗೆ ವಿವಿಧ ಕ್ಷೇತ್ರದ ಗಣ್ಯರು ಕೂಡ ಬರುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಯೋಧರ ಕುಟುಂಬಗಳ ಸಹಾಯಕ್ಕೆ ಮುಂದಾಗಿದ್ದಾರೆ.

  ದಾಳಿಯಲ್ಲಿ ಹತರಾದ ಭಾರತದ ಸೈನಿಕರ ಕುಟುಂಬಗಳಿಗೆ ತಲಾ 5 ಲಕ್ಷ ಹಣ ನೀಡುವುದಾಗಿ ಅವರ ಪಿ ಆರ್ ಒ ತಿಳಿಸಿದ್ದಾರೆ‌. ಯೋಧರ ಕುಟುಂಬಕ್ಕೆ ಹಣ ನೀಡಲಿದ್ದು, ಯಾವ ರೀತಿ ಅದನ್ನು ಸರಿಯಾಗಿ ತಲುಪಿಸಬೇಕು ಎಂಬ ಚರ್ಚೆ ಮಾಡುತ್ತಿದ್ದಾರಂತೆ. ಸರ್ಕಾರ ಇದಕ್ಕಾಗಿ ಒಂದು ವ್ಯವಸ್ಥೆ ಮಾಡಿದರೆ ಆ ಮೂಲಕ ತಮ್ಮ ಹಣವನ್ನು ತಲುಪಿಸುವ ನಿರ್ಧಾರಕ್ಕೆ ಬಂದಿದ್ದಾರಂತೆ. ಯೋಧರ ವಿಷಯ ತಿಳಿದ ದಿನ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಯೋಧರ ದುಃಖದಲ್ಲಿ ಭಾಗಿಯಾಗಿದ್ದರು.

  ಹುತಾತ್ಮ ಯೋಧ ಗುರು ಕುಟುಂಬಕ್ಕೆ ಧನ ಸಹಾಯ ಮಾಡಿದ 'ಬೆಲ್ ಬಾಟಂ' ತಂಡ

  ಬಚ್ಚನ್ ಮಾತ್ರವಲ್ಲದೆ ಭಾರತದ ಕ್ರಿಕೆಟ್ ಆಟಗಾರರು ಸಹ ಯೋಧರ ಕುಟುಂಬದ ಸಹಾಯಕ್ಕೆ ಮುಂದೆ ಬಂದಿದ್ದಾರೆ. ಕನ್ನಡದ 'ಬೆಲ್ ಬಾಟಂ' ಹಾಗೂ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರಗಳು ಯೋಧರ ಕುಟುಂಬಕ್ಕೆ ಧನ ಸಹಾಯ ಮಾಡುವುದಾಗಿ ಹೇಳಿವೆ.

  'ಯೋಧ ಗುರು' ಕುಟುಂಬಕ್ಕೆ 'ಕೆಮಿಸ್ಟ್ರಿ ಕರಿಯಪ್ಪ' ಚಿತ್ರತಂಡ ನೆರವು

  ಘಟನೆಯ ವಿವರ

  ಫೆಬ್ರವರಿ 14 ರಂದು ಜಮ್ಮು ಕಾಶ್ಮಿರದ ಪುಲ್ವಾಮಾ ಬಳಿ ಭಾರತ ಸೈನಿಕರ ಮೇಲೆ ಜೈಷ್‌-ಏ ಮೊಹ್ಮದ್‌ ಉಗ್ರ ಸಂಘಟನೆ ದಾಳಿ ಮಾಡಿತ್ತು. ಇದರಲ್ಲಿ ಭಾರತದ 49 ಯೋಧರು ಹುತಾತ್ಮರಾದರು.

  English summary
  Bollywood actor Amitabh Bachchan to donate 5 lakh to each CRPF martyrs family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X