For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ದಿಗ್ಗಜರಿಂದ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್‌ಗೆ ಗೌರವ

  |

  ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಅವರಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಇದೀಗ ಸಿನಿಮಾ ಸಂಬಂಧಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಯೊಂದು ಅಮಿತಾಬ್ ಅವರನ್ನು ಹುಡುಕಿಕೊಂಡು ಬಂದಿದೆ.

  ಹಾಲಿವುಡ್‌ನ ಪ್ರತಿಷ್ಠಿತ ಸಿನಿಮಾ ಸಂಬಂಧಿ ಪ್ರಶಸ್ತಿಗಳಲ್ಲಿ ಒಂದಾದ ಎಫ್‌ಐಎಎಫ್‌ (ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಅಚೀವರ್ಸ್) ಯು ಈ ಬಾರಿ ಸಿನಿಮಾ ಸಾಧಕ ವಿಭಾಗದಲ್ಲಿ ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಅನ್ನು ಆಯ್ಕೆ ಮಾಡಲಾಗಿದೆ.

  90 ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿ ಬಂಗ್ಲೆ ಅಡ ಇಟ್ಟು ಆರ್ಥಿಕ ದಿವಾಳಿಯಾಗಿದ್ದ ಅಮಿತಾಬ್

  ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅಮಿತಾಬ್ ಬಚ್ಚನ್ ಅವರಿಗೆ ವಿಶ್ವವಿಖ್ಯಾತ ಸಿನಿಮಾ ನಿರ್ದೇಶಕರಾದ ಕ್ರಿಸ್ಟೋಫರ್ ನೋಲನ್ ಹಾಗೂ ಮಾರ್ಟಿನ್ ಸ್ಕಾರ್ಸೆಸೆ ಅವರುಗಳು ನೀಡಲಿದ್ದಾರೆ.

  'ಸಿನಿಮಾದ ಘನತೆಯನ್ನು ಎತ್ತಿಹಿಡಿಯಬೇಕಾದುದು ಸಾರ್ವಕಾಲಿಕ ಅಗತ್ಯ. ಭಾರತೀಯ ಸಿನಿಮಾ ಘನತೆಯನ್ನು ಉಳಿಸುವಲ್ಲಿ ಅಮಿತಾಬ್ ಬಚ್ಚನ್ ಪಾತ್ರ ಬಹುದೊಡ್ಡದು. ಐದು ದಶಕದ ನಟನಾವೃತ್ತಿಯಲ್ಲಿ ನಟನಾಗಿ ಅಧ್ಭುತವಾದ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತದಲ್ಲಿ ಸಿನಿಮಾ, ಉಳಿಯಲು ಬೆಳೆಯಲು ಅವರು ಸಾಕಷ್ಟು ಯೋಗದಾನ ನೀಡಿದ್ದಾರೆ. ಈ ವರ್ಷ ನಾವು ಅಮಿತಾಬ್‌ಗಿಂತಲೂ ಒಳ್ಳೆಯ ಸಾಧಕರನ್ನು ಆಯ್ಕೆ ಮಾಡಲು ಸಾಧ್ಯವಿರಲಿಲ್ಲ' ಎಂದಿದ್ದಾರೆ ಮಾರ್ಟಿನ್ ಸ್ಕಾರ್ಸೆಸೆ ಹೇಳಿದ್ದಾರೆ.

  ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಮಾತನಾಡಿ, 'ವಿಶ್ವದಾದ್ಯಂತ ಇರುವ ಸಿನಿಮಾ ಪ್ರತಿನಿಧಿಗಳು ಒಟ್ಟಿಗೆ ಸೇರಿ 'ನಾವು ಸಿನಿಮಾದ ಘನತೆಯನ್ನು ರಕ್ಷಿಸುತ್ತೇವೆ' ಎಂದು ಹೇಳುವುದು ಬಹಳ ಮುಖ್ಯವಾಗಿದೆ. 2021 ರ ಗೌರವವನ್ನು ಪಡೆದುಕೊಳ್ಳುತ್ತಿರುವ ಅಮಿತಾಬ್ ಬಚ್ಚನ್ ಅವರಿಗೆ ನನ್ನ ಅಭಿನಂದನೆಗಳು. ಭಾರತದಲ್ಲಿ ಸಿನಿಮಾ ಉಳಿದು, ಬೆಳೆಯಲು ಅವರ ಸೇವೆ ಪ್ರಮುಖವಾದುದು' ಎಂದಿದ್ದಾರೆ.

  ತೈಲಬೆಲೆ ಏರಿಕೆ ಬಗ್ಗೆ ಅಮಿತಾಬ್-ಅಕ್ಷಯ್ ಮೌನ; ಚಿತ್ರೀಕರಣಕ್ಕೆ ಅವಕಾಶ ನೀಡಲ್ಲವೆಂದು ಕಾಂಗ್ರೆಸ್ ಬೆದರಿಕೆ

  ಅಮಿತಾಬ್ ಬಚ್ಚನ್ ಅವರಿಗೆ ಈ ಪ್ರಶಸ್ತಿಯನ್ನು ವರ್ಚ್ಯುಯಲ್ ಮಾದರಿಯಲ್ಲಿ ಆನ್‌ಲೈನ್ ಕಾರ್ಯಕ್ರಮದಲ್ಲಿ ಈ ಇಬ್ಬರು ಖ್ಯಾತ ನಿರ್ದೇಶಕರು ನೀಡಲಿದ್ದಾರೆ.

  'ಟ್ಯಾಕ್ಸಿ ಡ್ರೈವರ್, ರೇಜಿಂಗ್ ಬುಲ್, ಗುಡ್ ಫೆಲ್ಲಾಸ್, ದಿ ಏವಿಯೇಟರ್, ಶಟರ್ ಐಲೆಂಡ್, ದಿ ಡಿಪಾರ್ಟೆಡ್, ವುಲ್ಫ್‌ ಆಫ್ ವಾಲ್‌ಸ್ಟ್ರೀಟ್, ದಿ ಐರೀಶ್ ಮ್ಯಾನ್' ಇನ್ನೂ ಹಲವಾರು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಮಾರ್ಟಿನ್ ಸ್ಕಾರ್ಸೆಸೆ.

  ರಾಬರ್ಟ್ ಸಿನಿಮಾ‌ ರಿಲೀಸ್ ದಿನ‌ ಅಭಿಮಾನಿಗಳ ಸಂಭ್ರಮಾಚರಣೆ ಹೇಗಿತ್ತು | Filmibeat Kannada

  ಇನ್ನು ಕ್ರಿಸ್ಟೋಫರ್ ನೋಲನ್, 'ಮುಮೆಂಟೊ', 'ಡಾರ್ಟ್ ನೈಟ್' , ಟೆನೆಟ್, ಇನ್‌ಸೆಪ್ಶನ್, ಇಂಟರ್‌ಸ್ಟೆಲ್ಲರ್ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

  English summary
  Bollywood actor Amitabh Bachchan To Receive Prestigious Award From Christopher Nolan And Martin Scorsese.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X