For Quick Alerts
  ALLOW NOTIFICATIONS  
  For Daily Alerts

  ಮತ್ತೆ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

  |

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚಿಗಷ್ಟೆ ಕಣ್ಣಿನ ಸರ್ಜರಿಗಾಗಿ ಆಸ್ಪತ್ರೆ ಸೇರಿದ್ದ ಅಮಿತಾಬ್ ಇದೀಗ 2ನೇ ಎರಡನೇ ಕಣ್ಣಿನ ಸರ್ಜರಿಗಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಇಂದು (ಮಾರ್ಚ್ 15) ಅಮಿತಾಬ್ ಕಣ್ಣಿನ ಶಸ್ತ್ರಚಿಕಿತ್ಸೆ ನಡೆದಿದ್ದು, ಸರ್ಜರಿ ಯಶಸ್ವಿಯಾಗಿದೆ ಎಂದು ಸ್ವತಃ ಅಮಿತಾಬ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆಕೊಂಡಿರುವ ಬಿಗ್ ಬಿ, 'ನನ್ನ ಎರಡನೇ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಆರೋಗ್ಯದಲ್ಲೂ ಚೇತರಿಕೆ ಕಾಣುತ್ತಿದೆ' ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

  ಹರೆಯದಲ್ಲಿ ಲೈಂಗಿಕತೆ ಮತ್ತು ಗರ್ಭಧಾರಣೆ: ಅಮಿತಾಬ್ ಬಚ್ಚನ್ ಮೊಮ್ಮಗಳು ಹೇಳಿದ್ದು ಹೀಗೆಹರೆಯದಲ್ಲಿ ಲೈಂಗಿಕತೆ ಮತ್ತು ಗರ್ಭಧಾರಣೆ: ಅಮಿತಾಬ್ ಬಚ್ಚನ್ ಮೊಮ್ಮಗಳು ಹೇಳಿದ್ದು ಹೀಗೆ

  ಮೊದಲ ಕಣ್ಣಿನ ಶಸ್ತ್ರಚಿಕಿತ್ಸೆ ಬಳಿಕ ಅಮಿತಾಬ್ ಭಾವನಾತ್ಮಕವಾಗಿ ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದ್ದರು. ನಿಧಾನವಾಗಿ ಚೇತರಿಸಿಕೊಳ್ಳುವುದಾಗಿ ಹೇಳುವ ಜೊತೆಗೆ ಶೀಘ್ರದಲ್ಲೇ ಮತ್ತೊಂದು ಕಣ್ಣಿನ ಚಿಕಿತ್ಸೆ ಬಗ್ಗೆಯೂ ಸುಳಿವು ನೀಡಿದ್ದರು.

  ಎರಡನೇ ಕಣ್ಣಿನ ಚಿಕಿತ್ಸೆ ಬಗ್ಗೆ ಭಾನುವಾರ ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅಮಿತಾಬ್, ಚಿಕಿತ್ಸೆ ನೀಡಿದ ವೈದ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ಜೀವನವೇ ಬದಲಾದಂತ ಅನುಭವ ಎಂದು ಅಮಿತಾಬ್ ಹೇಳಿದ್ದಾರೆ.

  ಯಾರಿಗೂ ಗೊತ್ತಾಗದಂತೆ ಅಭಿಮಾನಿಗಳ ಮಧ್ಯೆ ಕುಳಿತು ರಾಬರ್ಟ್ ನೋಡಿದ ದರ್ಶನ್ | Filmibeat Kannada

  ಅಮಿತಾಬ್ ಅವರಿಗೆ ಪ್ರತಿಪದಗಳು ಮೂರು ಅಕ್ಷರಗಳಂತೆ ಕಾಣುತ್ತಿದ್ದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ಹೇಳಿದ್ದರು. ಅಮಿತಾಬ್ ಮುಂದಿನ ಸಿನಿಮಾ ಪ್ರಾರಂಭವಾಗುವ ಮೊದಲೇ ಸರ್ಜರಿ ಮುಗಿಸಿಕೊಳ್ಳಬೇಕು ಎಂದಿದ್ದರು. ಸದ್ಯ ಎರಡು ಕಣ್ಣಿನ ಚಿಕಿತ್ಸೆ ಮುಗಿದ್ದು, ಕೆಲವು ದಿನಗಳು ವಿಶ್ರಾಂತಿ ಪಡೆದು ಮತ್ತೆ ಚಿತ್ರೀಕರಣಕ್ಕೆ ಹೊರಡಲಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಂತೆ ಅಮಿತಾಬ್ ನಿರ್ದೇಶಕ ವಿಕಾಸ್ ಬಾಹ್ಲ್ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ.

  English summary
  Amitabh Bachchan undergoes 2nd eye surgery. He says life changing experienc.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X