For Quick Alerts
  ALLOW NOTIFICATIONS  
  For Daily Alerts

  ಮೊಮ್ಮಕ್ಕಳಿಗೆ ಪತ್ರ ಬರೆದ ಬಿಗ್ ಬಿ, ಇದು ಎಲ್ಲಾ ಹೆಣ್ಣುಮಕ್ಕಳಿಗೆ ಅನ್ವಯ

  By ಸೋನು ಗೌಡ
  |

  ಬಾಲಿವುಡ್ ಚಿತ್ರರಂಗದ ದಿಗ್ಗಜ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಇದೀಗ ವಿಭಿನ್ನ ರೀತಿಯಲ್ಲಿ ಸುದ್ದಿ ಮಾಡಿ, ಟ್ವಿಟ್ಟರ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ.

  ಶಿಕ್ಷಕರ ದಿನವಾದ ಸೆಪ್ಟೆಂಬರ್ 5ರಂದು ಹಿಂದಿ ಚಿತ್ರರಂಗದ ಲೆಜೆಂಡ್ ನಟ ಅಮಿತಾಭ್ ಬಚ್ಚನ್ ಅವರು, ತಮ್ಮ ಮುದ್ದು ಮೊಮ್ಮಕ್ಕಳಿಗೆ ವಿಭಿನ್ನವಾಗಿ ಪತ್ರ ಬರೆದಿದ್ದಾರೆ. ಈ ಪತ್ರ ಇದೀಗ ಎಲ್ಲರ ಭಾವನೆಗಳನ್ನು ಕಲಕಿದೆ.[ಡ್ಯಾನ್ಸ್ ಮಾಡೋ ಭರದಲ್ಲಿ ಬಟ್ಟೆ ಜಾರಿದ್ದು ತಿಳಿಯಲೇ ಇಲ್ಲ 'ಈ' ನಟಿಗೆ]

  ಬಿಗ್ ಬಿ ಅವರ ಮೊಮ್ಮಕ್ಕಳಾದ ನವ್ಯ ನವೇಲಿ ಮತ್ತು ಆರಾಧ್ಯ ಬಚ್ಚನ್ ಅವರಿಗೆ ಟ್ವಿಟ್ಟರ್ ನಲ್ಲಿ ಬರೆದಿರುವ ಈ ಪತ್ರ ಖಂಡಿತವಾಗಲೂ ಹೆಣ್ಣು ಹೆತ್ತವರನ್ನು ಕಾಡದಿರಲ್ಲ.[ಐಶ್ವರ್ಯ ನೇರಳೆ ಬಣ್ಣದ ಲಿಪ್ ಸ್ಟಿಕ್ ಬಗ್ಗೆ ಬಿಗ್ ಬಿ ಏನಂದ್ರು?]

  ಹೆಣ್ಣು ಮಕ್ಕಳ ಮೇಲೆ ವಿಶೇಷ ಕಾಳಜಿ ಹೊಂದಿರುವ ಬಿಗ್ ಬಿ ಅವರು, ತಮ್ಮ ಇಬ್ಬರು ಮೊಮ್ಮಕ್ಕಳಿಗೆ ಪತ್ರ ಬರೆದು ಜೀವನದ ಮೌಲ್ಯಗಳ ಪಾಠವನ್ನು ಹೇಳಿಕೊಟ್ಟಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಬಹಿರಂಗ ಪತ್ರವನ್ನು ಓದಲು ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ...

  ಪ್ರೀತಿಯ ಮೊಮ್ಮಕ್ಕಳಿಗೆ ಪತ್ರ

  ಪ್ರೀತಿಯ ಮೊಮ್ಮಕ್ಕಳಿಗೆ ಪತ್ರ

  "ನನ್ನ ಪ್ರೀತಿಯ ಆರಾಧ್ಯ ಮತ್ತು ನವ್ಯ, ನೀವಿಬ್ಬರು ನಿಮ್ಮ ಮುತ್ತಾತರ ಹೆಸರಿನ ದೊಡ್ಡ ಪರಂಪರೆಯನ್ನು ನಿಮ್ಮ ಹೆಗಲಿನಲ್ಲಿ ಹೊತ್ತುಕೊಂಡು ನಡೆಯುತ್ತಿದ್ದೀರಿ. ಮಗಳೇ ಆರಾಧ್ಯ ನಿನ್ನ ಹೆಸರ ಮುಂದೆ ಡಾ.ಹರಿವಂಶ ರಾಯ್ ಬಚ್ಚನ್ ಮತ್ತು ನವ್ಯ ನಿನ್ನ ಹೆಸರ ಹಿಂದೆ ಹೆಚ್.ಪಿ.ನಂದಾ ಅವರ ಪರಂಪರೆ ಇದೆ. ಈ ಇಬ್ಬರೂ ಮುತ್ತಾತಂದಿರು ನಿಮಗೆ ಹೆಸರು-ಕೀರ್ತಿ-ಗೌರವ ತಂದು ಕೊಟ್ಟಿದ್ದಾರೆ. ನೀವಿಬ್ಬರೂ ಬಚ್ಚನ್ ಅಥವಾ ನಂದಾ ಆಗಿರಬಹುದು. ಆದರೆ ಮುಂದೊಂದು ದಿನ ನೀವು ಮಹಿಳೆಯಾಗುವವರು".-ಬಿಗ್ ಬಿ.[KBC ಟ್ಯಾಕ್ಸ್ ವಿವಾದ: ಬಿಗ್ ಬಿ ಕೇಸ್ ರೀ-ಓಪನ್ ಗೆ ಸುಪ್ರೀಂ ಆದೇಶ]

  'ಬುದ್ಧಿವಂತಿಕೆಯಿಂದ ಮುನ್ನಡೆಯಿರಿ'

  'ಬುದ್ಧಿವಂತಿಕೆಯಿಂದ ಮುನ್ನಡೆಯಿರಿ'

  "ನೀವಿಬ್ಬರೂ ಹುಡುಗಿಯರಾಗಿರುವುದರಿಂದ ಸಮಾಜದಲ್ಲಿರುವ ಜನರು, ಅವರ ಆಲೋಚನೆಗಳನ್ನು ಮತ್ತು ಅವರದೇ ಆದ ಚೌಕಟ್ಟುಗಳನ್ನು ನಿಮ್ಮ ಮೇಲೆ ಹೇರುತ್ತಾರೆ. ನೀವು ಯಾವ ರೀತಿ ಬಟ್ಟೆ ಹಾಕಬೇಕು, ಯಾರ ಜೊತೆ ಹೇಗಿರಬೇಕು, ಎಲ್ಲಿಗೆ ಹೋಗಬೇಕು-ಎಲ್ಲಿಗೆ ಹೋಗಬಾರದು, ಅನ್ಯರ ಜೊತೆ ನಿಮ್ಮ ವರ್ತನೆ ಹೇಗಿರಬೇಕು, ಇತ್ಯಾದಿ ಎಲ್ಲಾ ನಿಮ್ಮ ಮೇಲೆ ಹೇರುತ್ತಾರೆ. ಆದ್ದರಿಂದ ನೀವು ಅವರ ತೀರ್ಮಾನದ ನೆರಳಿನಲ್ಲಿ ಬದುಕಬೇಡಿ. ನಿಮ್ಮ ಬುದ್ಧಿವಂತಿಕೆಯಿಂದ ನೀವು ಮುನ್ನಡೆಯಿರಿ". ಬಿಗ್ ಬಿ.[ಆರೋಗ್ಯ ಸೀಕ್ರೆಟ್ ಬಿಚ್ಚಿಟ್ಟು ಅಭಿಮಾನಿಗಳಿಗೆ ಶಾಕ್ ಕೊಟ್ಟ ಬಿಗ್ ಬಿ]

  'ಸ್ಕರ್ಟ್ ಉದ್ದ ನೋಡಿ ಗುಣ ಅಳೆಯಲು ಬಿಡಬೇಡಿ'

  'ಸ್ಕರ್ಟ್ ಉದ್ದ ನೋಡಿ ಗುಣ ಅಳೆಯಲು ಬಿಡಬೇಡಿ'

  "ನೀವುಗಳು ಧರಿಸುವ ಸ್ಕರ್ಟ್ ನ ಉದ್ದ ನೋಡಿ, ನಿಮ್ಮ ಗುಣ-ನಡತೆಯನ್ನು ಅಳೆಯಲು ಬಿಡಬೇಡಿ. ನೀವು ಯಾರ ಜೊತೆ ಸ್ನೇಹ ಬೆಳೆಸಬೇಕು ಎಂಬುದನ್ನು ನಿರ್ಧರಿಸಲು ಪರರ ಆಯ್ಕೆಗೆ ಬಿಡಬೇಡಿ. ನಿಮ್ಮ ಮೇಲೆ ಬೇರೆಯವರು ಅಧಿಕಾರ ಚಲಾಯಿಸಲು ಬಿಡಬೇಡಿ. ನಿಮಗೆ ಮದುವೆಯಾಗಬೇಕು ಅಂತ ಅನಿಸಿದರೆ ಮಾತ್ರ ಮದುವೆಯಾಗಿ. ಬೇರೆ ಯಾವುದೇ ಕಾರಣಕ್ಕೆ ಮದುವೆ ಎಂಬ ಬಂಧನಕ್ಕೆ ಒಳಗಾಗದಿರಿ".-ಬಿಗ್ ಬಿ.

  'ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡಿ'

  'ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡಿ'

  "ಜನರು ತಮಗೆ ತೋಚಿದಂತೆ ಮಾತನಾಡಬಹುದು, ಕೆಲವೊಂದು ಕಠೋರ ವಿಷಯಗಳನ್ನು ಹೇಳಬಹುದು. ಆದರೆ ಅವರ ಮಾತುಗಳಿಗೆ ನೀವು ಯಾವತ್ತೂ ತಲೆ ಕೆಡಿಸಿಕೊಳ್ಳಬೇಡಿ. ಯಾಕೆಂದರೆ ಏನಾದ್ರೂ ಸಮಸ್ಯೆಯಾದರೆ, ಕೊನೆಯಲ್ಲಿ ಪರಿಸ್ಥಿತಿಯನ್ನು ಎದುರಿಸಬೇಕಾದವರು ನೀವು ಮಾತ್ರ. ಆದ್ದರಿಂದ ಯಾರಿಗೂ ನಿಮ್ಮ ಜೀವನದಲ್ಲಿ ಬೇರೆಯವರು ನಿರ್ಧಾರ ತೆಗೆದುಕೊಳ್ಳಲು ಬಿಡಬೇಡಿ".-ಬಿಗ್ ಬಿ.

  ಸರ್ ನೇಮ್ ಕಷ್ಟದಿಂದ ಪಾರು ಮಾಡೋಲ್ಲ

  ಸರ್ ನೇಮ್ ಕಷ್ಟದಿಂದ ಪಾರು ಮಾಡೋಲ್ಲ

  "ನವ್ಯಾ ನಿನಗೆ ಘನತೆ-ಗೌರವ ನೀಡುತ್ತಿರುವ ಈ ಸರ್ ನೇಮ್ ಗಳು ನಿನ್ನನ್ನು ಖಂಡಿತ ಕಷ್ಟದಿಂದ ಪಾರು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನೀನೊಬ್ಬಳು ಹೆಣ್ಣು ಮಗಳು. ಆರಾಧ್ಯ ನೀನು ಈ ಪತ್ರವನ್ನು ಓದಿ ಅರ್ಥ ಮಾಡಿಕೊಳ್ಳುವ ಹೊತ್ತಿಗೆ ನಾನು ನಿನ್ನೊಂದಿಗೆ ಇಲ್ಲದಿರಬಹುದು. ಆದರೆ ನಾನು ಇವತ್ತು ಹೇಳಿದ ಈ ಮಾತು, ನೀನು ಲೋಕಜ್ಞಾನ ತಿಳಿದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಸಮಂಜಸ ಆಗಿರುತ್ತದೆ".-ಬಿಗ್ ಬಿ.

  'ಮಹಿಳೆ ಆಗಿರೋದು ತುಂಬಾ ಕಷ್ಟಕರ'

  'ಮಹಿಳೆ ಆಗಿರೋದು ತುಂಬಾ ಕಷ್ಟಕರ'

  "ಇಂದಿನ ಜಗತ್ತಿನಲ್ಲಿ ಮಹಿಳೆಯರು ಜೀವಿಸೋದು ಬಹಳ ಕಷ್ಟಕರ ಎನಿಸಬಹುದು. ಆದರೆ ನಿಮ್ಮಂತಹ ಮಹಿಳೆಯರೇ ಜಗತ್ತಿನ ಸಂಗತಿಗಳನ್ನು ಬದಲಾಯಿಸಬಹುದು ಅಂತ ನಾನು ಭಾವಿಸುತ್ತೇನೆ. ಅದು ಹೇಳಿದಷ್ಟು ಸುಲಭ ಅಲ್ಲ. ನಿಮ್ಮ ಚೌಕಟ್ಟನ್ನು ಅಳವಡಿಸಿಕೊಂಡು, ನಿಮ್ಮ ಆಯ್ಕೆಯ ಮೂಲಕ ಜನರ ತೀರ್ಮಾನವನ್ನು ಮೀರಿ ಬೆಳೆಯಬೇಕು. ಅಂದ ಮಾತ್ರಕ್ಕೆ ನೀವು ಮಹಿಳಾ ಸಮಾಜಕ್ಕೆ ಮಾದರಿಯಾಗಿ ಬದುಕಬಹುದು."-ಬಿಗ್ ಬಿ.

  'ಅಮಿತಾಭ್ ಬಚ್ಚನ್ ಗಿಂತ ತಾತಾನಾಗಿ ಗುರುತಿಸಿಕೊಳ್ಳಲು ಇಷ್ಟ'

  'ಅಮಿತಾಭ್ ಬಚ್ಚನ್ ಗಿಂತ ತಾತಾನಾಗಿ ಗುರುತಿಸಿಕೊಳ್ಳಲು ಇಷ್ಟ'

  "ನೀವು ಮಾದರಿಯಾಗುವ ಕೆಲಸ ಮಾಡಿದರೆ, ನಾನು ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ನೀವು ಮಾಡಬಹುದು. ನನ್ನ ಮೊಮ್ಮಕ್ಕಳು ನೀವು ಎಂದು ಗುರುತಿಸಿಕೊಳ್ಳುವುದಕ್ಕಿಂತ, ನಿಮ್ಮ ತಾತಾ ನಾನು ಅಮಿತಾಭ್ ಬಚ್ಚನ್ ಎಂದು ಗುರುತಿಸಿಕೊಳ್ಳಲು ನನಗೆ ತುಂಬಾ ಇಷ್ಟ ಮತ್ತು ಅದು ಗೌರವವನ್ನು ತಂದು ಕೊಡುತ್ತದೆ. ತುಂಬು ಪ್ರೀತಿಯಿಂದ ನಿಮ್ಮ ಅಜ್ಜ'-ಬಿಗ್ ಬಿ.

  English summary
  The Bollywood Megastar Amitabh Bachchan, whose wise words never fail to impress us, shared a hearttouching letter for his granddaughters Aaradhya Bachchan and Navya Naveli Nanda on Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X