»   » ಐಶ್ವರ್ಯ ನೇರಳೆ ಬಣ್ಣದ ಲಿಪ್ ಸ್ಟಿಕ್ ಬಗ್ಗೆ ಬಿಗ್ ಬಿ ಏನಂದ್ರು?

ಐಶ್ವರ್ಯ ನೇರಳೆ ಬಣ್ಣದ ಲಿಪ್ ಸ್ಟಿಕ್ ಬಗ್ಗೆ ಬಿಗ್ ಬಿ ಏನಂದ್ರು?

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಟಿ ಐಶ್ವರ್ಯ ರೈ ಅವರು 'ಕಾನ್' ಸಿನಿಮೋತ್ಸವದಲ್ಲಿ ನೇರಳೆ ಬಣ್ಣದ ಲಿಪ್ ಸ್ಟಿಕ್ ಹಚ್ಚಿ ಭಾರಿ ಸುದ್ದಿಯಾಗಿದ್ದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಐಶ್ ಅವರ ಪತಿ ಅಭಿಷೇಕ್ ಬಚ್ಚನ್ ಅವರು ಕೂಡ 'ಐಶ್ ಹೇಗಿದ್ದರೂ ಚೆಂದ' ಎಂದು ಕಾಮೆಂಟ್ ಬೇರೆ ಮಾಡಿದ್ದರು.

ಮಾತ್ರವಲ್ಲದೇ ನಟಿ ಸೋನಂ ಕಪೂರ್ ಅವರು 'ಐಶ್ ಸುದ್ದಿ ಮಾಡಲೆಂದೇ ನೇರಳೆ ಬಣ್ಣದ ಲಿಪ್ ಸ್ಟಿಕ್ ಹಚ್ಚಿದ್ದರು' ಎಂದ್ಹೇಳಿ ವಿಭಿನ್ನ ಕಾಮೆಂಟ್ ಮಾಡಿದ್ದರು. ಎಲ್ಲರೂ ಒಂದೊಂದು ರೀತಿ ಹೇಳಿದರೂ ಐಶ್ ಅವರ ಮಾವ ಬಿಗ್ ಬಿ ಅವರು ತಮ್ಮ ಸೊಸೆಯ ಬಗ್ಗೆ ಏನೂ ಹೇಳಿರಲಿಲ್ಲ.[ಐಶ್ವರ್ಯ ತುಟಿಗೆ ಎಲ್ಲರೂ ಗೇಲಿ ಮಾಡಿದ್ರು, ಆದ್ರೆ ಅಭಿಷೇಕ್ ಏನಂದ್ರು?]

Amitabh's Response To Aishwarya Rai's Purple Lips At Cannes

ಆದರೆ ಇದೀಗ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಐಶ್ವರ್ಯ ರೈ ಅವರ ನೇರಳೆ ಬಣ್ಣದ ಲಿಪ್ ಸ್ಟಿಕ್ ಬಗ್ಗೆ ಮೌನ ಮುರಿದಿದ್ದಾರೆ. ಸೊಸೆ ಐಶ್ವರ್ಯ ರೈ ಅವರಿಗೆ ಬೆಂಬಲ ಸೂಚಿಸಿ ಮಾತನಾಡಿದ್ದಾರೆ.[ಟ್ವಿಟ್ಟರ್ ನಲ್ಲಿ ನಗೆಪಾಟಲಿಗೀಡಾಗುತ್ತಿದೆ ಐಶ್ವರ್ಯ ರೈ ತುಟಿ]

Amitabh's Response To Aishwarya Rai's Purple Lips At Cannes

'ನೇರಳೆ ಬಣ್ಣದ ಲಿಪ್ ಸ್ಟಿಕ್ ಹಾಕಿರೋದ್ರಲ್ಲಿ ತಪ್ಪೇನಿದೆ, ತಮಗೆ ಅನಿಸಿದ್ದನ್ನು ಹೇಳುವ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಸಾಮಾಜಿಕ ಮಾಧ್ಯಮ ನಮಗೆ ನೀಡಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳು ಇರುವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಲು'.[ಛೇ ಮುದ್ದು ಪತ್ನಿ ಐಶ್ವರ್ಯ ರೈಗೆ ಅಭಿಷೇಕ್ ಹೀಗೆ ಮಾಡಬಾರದಿತ್ತು]

Amitabh's Response To Aishwarya Rai's Purple Lips At Cannes

ಇದರಿಂದ ಯಾರ್ಯಾರು ನಮ್ಮ ಬಗ್ಗೆ ಏನೇನೂ ಮಾತನಾಡುತ್ತಾರೆ ಅನ್ನೋದರ ಬಗ್ಗೆ ನಮಗೆ ತಿಳಿಯುತ್ತದೆ' ಎಂದು ಬಿಗ್ ಬಿ ಅಮಿತಾಭ್ ಬಚ್ಚನ್ ನುಡಿದಿದ್ದಾರೆ.

English summary
Bollywood Actress Aishwarya Rai Bachchan was highly criticised for her purple lips at Cannes 2016. But her father in law Amitabh Bachchan gave an awesome reply. Amitabh Bachchan told ''No, I didn't see it, but what is wrong with that?.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X