»   » ಐಶು, ದೀಪಿಕಾ, ಪ್ರಿಯಾಂಕಾ ಜೊತೆಗಿನ ಸ್ಪರ್ಧೆ ಬಗ್ಗೆ ಆಮಿ ಜಾಕ್ಸನ್ ಹೇಳಿದ್ದೇನು?

ಐಶು, ದೀಪಿಕಾ, ಪ್ರಿಯಾಂಕಾ ಜೊತೆಗಿನ ಸ್ಪರ್ಧೆ ಬಗ್ಗೆ ಆಮಿ ಜಾಕ್ಸನ್ ಹೇಳಿದ್ದೇನು?

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ರವರೇ ಬಿಗ್‌ ತಾರೆಯರು. ಆದರೀಗ ಅವರಷ್ಟೇ ದೊಡ್ಡ ಮಟ್ಟದಲ್ಲಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ಹೆಸರು ಗಳಿಸುವ ಸ್ಪರ್ಧೆಯಲ್ಲಿದ್ದಾರೆ ಎಂಬ ಮಾತುಗಳು ಬಿಟೌನ್‌ನಲ್ಲಿ ಹರಿದಾಡುತ್ತಿವೆ.

'ಹಿಂದಿ ಚಿತ್ರರಂಗದ ಈ ಮೂವರು ತಾರೆಯರೊಂದಿಗೆ ನಿಮ್ಮನ್ನು ಸಿನಿ ಪ್ರಿಯರು ಕಂಪೇರ್ ಮಾಡುತ್ತಿದ್ದಾರಲ್ಲಾ.. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು' ಎಂಬ ಪ್ರಶ್ನೆ ಇತ್ತೀಚೆಗೆ ಆಮಿ ಜಾಕ್ಸನ್ ಗೆ ತೂರಿಬಂದಿತ್ತು. ಅದಕ್ಕೆ ಈ ಬ್ರಿಟಿಷ್ ಬ್ಯೂಟಿ ಏನು ಹೇಳಿದ್ದಾರೆ ಗೊತ್ತಾ?...

ಇದು ಸ್ಪರ್ಧೆಯಲ್ಲ

ಆಮಿ ಜಾಕ್ಸನ್, 'ನಾನು ಕೇವಲ ನನ್ನ ಆಕ್ಟಿಂಗ್ ಬಗ್ಗೆ ಗಮನಹರಿಸುತ್ತಿದ್ದೇನೆ. ಅಭಿನಯ ನನ್ನ ಪ್ಯಾಷನ್. ನನಗೆ ಅಭಿನಯ ಅನ್ನೋದು ಸ್ಪರ್ಧೆ ಅಂತ ಎಂದೂ ಅನಿಸಿಲ್ಲ. ದೀಪಿಕಾ ಜೊತೆ ಆಗಲಿ, ಪ್ರಿಯಾಂಕ ಚೋಪ್ರಾ ಜೊತೆ ಆಗಲಿ ನಾನು ಸ್ಪರ್ಧೆಗೆ ಇಳಿದಿಲ್ಲ' ಎಂದಿದ್ದಾರೆ.

ಅವರೆಲ್ಲ ನನಗೆ ಸ್ಫೂರ್ತಿ

ನಟನೆ ಹಾಗೂ ಹಾಟ್ ಬ್ಯೂಟಿ ಇಂದಲೇ ಪಡ್ಡೆ ಹುಡುಗರ ಕಣ್ಮನ ಸೆಳೆಯುವ ಬ್ರಿಟಿಷ್ ಬ್ಯೂಟಿ, 'ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಎಲ್ಲರೂ ನನಗೆ ಸ್ಫೂರ್ತಿ. ಅವರನ್ನು ಆದೇ ಭಾವನೆಯಿಂದಲೇ ಯಾವಾಗಲು ನೋಡುತ್ತೇನೆ. ಪ್ರಿಯಾಂಕ ರವರು, ದೀಪಿಕಾ ಮತ್ತು ನನಗಿಂತ ಹೆಚ್ಚು ದೀರ್ಘಕಾಲದಿಂದಲೂ ಇಂಡಸ್ಟ್ರಿಯಲ್ಲಿದ್ದಾರೆ. ನಾನು ಹೆಚ್ಚು ಗೌರವಿಸುವ ಮತ್ತು ಹೆಮ್ಮೆಪಡುವ ನಟಿಯರಲ್ಲಿ ಐಶ್ವರ್ಯ ರೈ ಸಹ ಒಬ್ಬರು' ಎಂದು ಆಮಿ ಜಾಕ್ಸನ್ ಉತ್ತರಿಸಿದ್ದಾರೆ.

ಕನಸು ನನಸಾಗಲು ಪ್ರೇರಣೆ

'ಬಾಲಿವುಡ್ ನ ಈ ಬಿಗ್ ತಾರೆಯರ ಅಭಿನಯವು ನನ್ನನ್ನು ಒತ್ತಡಕ್ಕೆ ಸಿಲುಕಿಸುವುದಕ್ಕಿಂತಲೂ ಹೆಚ್ಚಾಗಿ.. ನನ್ನ ಕನಸುಗಳು ಮತ್ತು ಗುರಿಗಳನ್ನು ಮುಟ್ಟಲು ಹೆಚ್ಚು ವರ್ಕ್‌ ಮಾಡಲು ಪ್ರೇರಣೆ ನೀಡುತ್ತದೆ. ಅವರಷ್ಟೆ ಹೆಸರು ಗಳಿಸುವ ಆಸೆಯು ಇದೆ' - ಆಮಿ ಜಾಕ್ಸನ್, ನಟಿ

ಆಮಿ ಜಾಕ್ಸನ್ ಬಾಲಿವುಡ್ ಚಿತ್ರಗಳು

ಆಮಿ ಜಾಕ್ಸನ್ ಬಾಲಿವುಡ್ ನ 'ಎಕ್ ದೀವಾನ ಥ', 'ಸಿಂಗ್ ಈಸ್ ಬ್ಲಿಂಗ್' ಮತ್ತು ಇತರೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದು, ಯಶಸ್ವಿಯಾದ ಬಗ್ಗೆ ಹೆಚ್ಚು ಸೌಂಡ್ ಮಾಡಿಲ್ಲ. ಆದರೆ ಆಮಿ ಬಹುಭಾಷಾ ನಟಿಯಾಗಿದ್ದು, ದಕ್ಷಿಣ ಭಾರತದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

Bollywood Celebrities Education

ಆಮಿ ಜಾಕ್ಸನ್ ಬ್ಯುಸಿ ಆಗಿರುವ ಚಿತ್ರಗಳು

ಸದ್ಯದಲ್ಲಿ ತಮಿಳು, ತೆಲುಗು, ಹಿಂದಿಯಲ್ಲಿ ಮೂಡಿಬರುತ್ತಿರುವ '2.0' ಚಿತ್ರದಲ್ಲಿ ಮತ್ತು ಸ್ಯಾಂಡಲ್ ವುಡ್ ನ 'ದಿ ವಿಲನ್' ಚಿತ್ರದಲ್ಲಿ ಆಮಿ ಜಾಕ್ಸನ್ ಬ್ಯುಸಿ ಆಗಿದ್ದಾರೆ.

English summary
British Model and Actress Amy Jackson Talks About Competing With Aishwarya Rai, Deepika Padukone & Priyanka Chopra!.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada