For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ವೇಳೆ ಅಪಘಾತ: ಅಪಾಯದಿಂದ ಪಾರಾದ ಅನನ್ಯ ಪಾಂಡೆ

  By Bharath Kumar
  |

  'ಸ್ಟೂಡೆಂಟ್ ಆಫ್ ದಿ ಇಯರ್-2' ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡ್ತಿರುವ ನಟಿ ಅನನ್ಯ ಪಾಂಡೆ ಅಪಘಾತಕ್ಕೆ ಒಳಗಾಗಿ, ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ.

  ಡೆಹ್ರಾಡೂನ್ ಬಳಿ 'ಸ್ಟೂಡೆಂಟ್ ಆಫ್ ದಿ ಇಯರ್-2' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ''ಸನ್ನಿವೇಶವೊಂದರಲ್ಲಿ ಅನನ್ಯ ಪಾಂಡೆ ಕಾರು ಚಾಲನೆ ಮಾಡಬೇಕಿತ್ತು. ಅವರಿಗೆ ಡ್ರೈವಿಂಗ್ ಉತ್ತಮವಾಗಿ ಬರ್ತಿತ್ತು. ಆದ್ರೆ, ಈ ಮಧ್ಯೆ ಅದೇನ್ ಆಯ್ತೋ ಗೊತ್ತಿಲ್ಲ, ಕಾರಿನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದರು'' ಎಂದು ಮೂಲಗಳ ತಿಳಿಸಿವೆ.

  ''ಅದೃಷ್ಟವಶಾತ್ ಅನನ್ಯ ಪಾಂಡೆಗೆ ಯಾವುದೇ ಗಾಯಗಳು ಆಗಿಲ್ಲ. ಇನ್ನು ಚಿತ್ರತಂಡ ಕೂಡ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನ ಕೈಗೊಂಡಿದ್ದ ಹಿನ್ನೆಲೆ ಈ ಅಪಘಾತ ಗಂಭೀರವಾಗಿಲ್ಲ'' ಚಿತ್ರತಂಡ ಹೇಳಿದೆ.

  ಈ ವೇಳೆ ಚಿತ್ರದ ನಟ ಟೈಗರ್ ಶ್ರಾಫ್, ನಟಿ ತಾರಾ ಸುತಾರಿಯ, ನಿರ್ದೇಶಕ ಪುನೀತ್ ಮಲ್ಹೋತ್ರ ಎಲ್ಲರೂ ಸೆಟ್ ನಲ್ಲೇ ಇದ್ದರು. ಒಂದು ಕ್ಷಣ ಎಲ್ಲರೂ ದಿಗ್ಬ್ರಮೆಗೆ ಒಳಗಾದರೂ, ಅನನ್ಯ ಸುರಕ್ಷಿತವಾಗಿದ್ದಾರೆ ಎಂಬ ವಿಷ್ಯ ತಿಳಿದ ಬಳಿಕ ನಿಟ್ಟುಸಿರು ಬಿಡುವಂತಾಯಿತು.

  ಅಂದ್ಹಾಗೆ, ಅನನ್ಯ ಪಾಂಡೆ ಬಾಲಿವುಡ್ ಖ್ಯಾತ ನಟ ಚಂಕಿ ಪಾಂಡೆ ಅವರ ಮಗಳು. 'ಸ್ಟೂಡೆಂಟ್ ಆಫ್ ದಿ ಇಯರ್-2' ಚಿತ್ರದ ಮೂಲಕ ನಟಿಯಾಗಿ ಬಿಟೌನ್ ಎಂಟ್ರಿ ಕೊಡ್ತಿದ್ದಾರೆ. ಮೊದಲ ಚಿತ್ರದಲ್ಲೇ ಇಂತಹ ಅನುಭವವಾಗಿರುವುದು ನಿಜಕ್ಕೂ ಆಶ್ಚರ್ಯ ಮತ್ತು ಅದೃಷ್ಟವೇ ಸರಿ.

  English summary
  Ananya Pandey, who is all set to make her silver screen debut later this year with Student Of The Year 2, recently had an accident on the sets in Dehradun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X