For Quick Alerts
  ALLOW NOTIFICATIONS  
  For Daily Alerts

  ಶಸ್ತ್ರಚಿಕಿತ್ಸೆ ಇಲ್ಲದೆ ಗಂಭೀರ ಖಾಯಿಲೆಯಿಂದ ಗುಣಮುಖವಾದ ಅನಿಲ್ ಕಪೂರ್: ಹೇಗೆ?

  |

  ನಟ ಅನಿಲ್ ಕಪೂರ್ ಗೆ ಈಗ 63 ವರ್ಷ ವಯಸ್ಸು. ಆದರೆ ಈಗಲೂ ಯುವಕರಂತೆ ಓಡುತ್ತಾರೆ, ಸ್ಕಿಪ್ಪಿಂಗ್ ಮಾಡುತ್ತಾರೆ, ದೇಹವನ್ನೂ ಸಹ ಸದೃಢವಾಗಿಟ್ಟುಕೊಂಡಿದ್ದಾರೆ.

  ಆದರೆ ಅನಿಲ್ ಕಪೂರ್ ಕಳೆದ ಹತ್ತು ವರ್ಷದಿಂದ ಕಾಲಿನ ಹಿಮ್ಮಡಿಗೆ ಸಂಬಂಧಿಸಿದ 'ಅಚಿಲ್ಲೆಸ್ ಟೆಂಡನ್' ಎಂಬ ಖಾಯಿಲೆಯಿಂದ ಬಳಲುತ್ತಿದ್ದರು.

  ನಟಿ ಶ್ರೀದೇವಿಗಾಗಿ ಕಿತ್ತಾಡಿಕೊಂಡಿದ್ದರು ಅನಿಲ್ ಕಪೂರ್ ಮತ್ತು ಬೋನಿ ಕಪೂರ್ ಸಹೋದರರು

  ಹೌದು, ಹಿಮ್ಮಡಿಗೆ ಸಂಬಂಧಿಸಿದ ಈ ಖಾಯಿಲೆಯಿಂದ ಅನಿಲ್ ಕಪೂರ್‌ಗೆ ನಡೆಯುವುದೇ ಕಷ್ಟವಾಗಿತ್ತು, ಅವರು ಕುಂಟಲು ಪ್ರಾರಂಭಿಸಿದ್ದರು. ವಿದೇಶದ ಹಲವು ವೈದ್ಯರ ಬಳಿ ತೋರಿಸಿದ ಅನಿಲ್‌ಗೆ ಎಲ್ಲರಿಂದ ಬಂದಿದ್ದು ಒಂದೇ ಸಲಹೆ, ಶಸ್ತ್ರಚಿಕಿತ್ಸೆ'.

  ಶಸ್ತ್ರಚಿಕಿತ್ಸೆ ಇಲ್ಲದೆ ಗುಣಮುಖವಾದ ಅನಿಲ್ ಕಪೂರ್

  ಶಸ್ತ್ರಚಿಕಿತ್ಸೆ ಇಲ್ಲದೆ ಗುಣಮುಖವಾದ ಅನಿಲ್ ಕಪೂರ್

  ಆದರೆ ಅನಿಲ್ ಕಪೂರ್ ಯಾರ ಮಾತನ್ನೂ ಕೇಳಲಿಲ್ಲ, ಬದಲಿಗೆ ಆಪ್ತ ವೈದ್ಯ ಡಾ.ಮುಲ್ಲರ್ ಅವರನ್ನು ಸಂಪರ್ಕಿಸಿದಾಗ, ಶಸ್ತ್ರಚಿಕಿತ್ಸೆ ಇಲ್ಲದೆ ಕೇವಲ ವ್ಯಾಯಾಮ ಹಾಗೂ ಫಿಸಿಯೋಥೆರಪಿಗೆ ಒಳಪಡುವಂತೆ ಮುಲ್ಲರ್ ಸಲಹೆ ನೀಡಿದರು.

  ಕುಂಟುತ್ತಿದ್ದ ಅನಿಲ್ ಕಪೂರ್, ಓಡಲು ಪ್ರಾರಂಭಿಸಿದ್ದಾರೆ

  ಕುಂಟುತ್ತಿದ್ದ ಅನಿಲ್ ಕಪೂರ್, ಓಡಲು ಪ್ರಾರಂಭಿಸಿದ್ದಾರೆ

  ಅಂತೆಯೇ, ಮುಲ್ಲರ್ ಸಲಹೆಗಳನ್ನು ಪಾಲಿಸಿದ ಅನಿಲ್ ಕಪೂರ್, ಕುಂಟುವುದರಿಂದ ನಡೆಯಲು ಪ್ರಾರಂಭಿಸಿದರು, ನಂತರ ಓಡಲು ಪ್ರಾರಂಭಿಸಿದರು. ಈಗ ಸತತವಾಗಿ ಸ್ಕಿಪ್ಪಿಂಗ್ ಸಹ ಮಾಡುತ್ತಾರೆ. ಇದೆಲ್ಲವನ್ನೂ ಸ್ವತಃ ಅನಿಲ್ ಕಪೂರ್ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

  'ಈ' ಕಾರಣಕ್ಕಾಗಿ ಅನಿಲ್ ಕಪೂರ್ ಜೊತೆ ನಟಿಸುವುದನ್ನು ನಿಲ್ಲಿಸಿದ್ದ ಮಾಧುರಿ

  ಲಾಕ್‌ಡೌನ್ ಅವಧಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ

  ಲಾಕ್‌ಡೌನ್ ಅವಧಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ

  ಲಾಕ್‌ಡೌನ್ ಅವಧಿಯಲ್ಲಿ ಅನಿಲ್ ಕಪೂರ್ ಪೂರ್ಣವಾಗಿ ತಮ್ಮ ಆರೋಗ್ಯದ ಮೇಲೆಯೇ ಗಮನ ಕೇಂದ್ರೀಕರಿಸಿದ್ದರು. ಮುಲ್ಲರ್ ಹೇಳಿದ್ದ ಎಲ್ಲ ಸಲಹೆಗಳನ್ನು ಪಾಲಿಸಿದ ಅನಿಲ್, ಲಾಕ್‌ಡೌನ್ ಅವಧಿಯಲ್ಲಿ ಸಾಕಷ್ಟು ಡಯಟ್ ಹಾಗೂ ವ್ಯಾಯಾಮಗಳನ್ನು ಮಾಡಿದರು.

  ಅಂಬರೀಷ್ ಮನೆ ಪಕ್ಕ ಫ್ಲಾಟ್ ತಗೋಬೇಕು ಅಂತ ತುಂಬಾ ಆಸೆ ಪಟ್ಟಿದ್ದ ಚಿರು : PrashanthSambargi | Chiranjeevi Sarja
  ಅನಿಲ್ ಕಪೂರ್ ಮೊದಲ ಸಿನಿಮಾ ಪಲ್ಲವಿ-ಅನುಪಲ್ಲವಿ

  ಅನಿಲ್ ಕಪೂರ್ ಮೊದಲ ಸಿನಿಮಾ ಪಲ್ಲವಿ-ಅನುಪಲ್ಲವಿ

  ನಟ ಅನಿಲ್ ಕಪೂರ್ ಈಗಲೂ ಬಾಲಿವುಡ್‌ನ ಬ್ಯುಸಿ ನಟರಲ್ಲಿ ಒಬ್ಬರು, ಅವರ ಮೊದಲ ಸಿನಿಮಾ ಕನ್ನಡದ ಪಲ್ಲವಿ ಅನುಪಲ್ಲವಿ. ತಕ್ತ್, ಪಾಗಲ್ ಪನ್ತಿ ಸೇರಿ ಹಲವು ಸಿನಿಮಾಗಳಲ್ಲಿ ನಟ ಅನಿಲ್ ಕಪೂರ್ ಬ್ಯುಸಿಯಾಗಿದ್ದಾರೆ.

  English summary
  Actor Anil Kapoor overcome Achilles Tendon problem without surgery. He suffering from disease from past 10 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X