For Quick Alerts
  ALLOW NOTIFICATIONS  
  For Daily Alerts

  ವರುಣ್-ನೀತೂ ಕಪೂರ್‌ಗೆ ಕೊರೊನಾ, ಅನಿಲ್ ಕಪೂರ್ ಸೇಫ್!

  |

  ಬಾಲಿವುಡ್ ನಟ ವರುಣ್ ಧವನ್ ಮತ್ತು ನಟಿ ನೀತೂ ಕಪೂರ್‌ಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಇಬ್ಬರು ಕಲಾವಿದರಿಗೆ ಕೊರೊನಾ ಸೋಂಕು ಖಚಿತವಾಗುತ್ತಿದ್ದಂತೆ ಇತರೆ ಕಲಾವಿದರು ಹಾಗೂ ತಂತ್ರಜ್ಞರಿಗೆ ಆತಂಕ ಎದುರಾಗಿತ್ತು.

  ಸಹ ನಟರಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅನಿಲ್ ಕಪೂರ್, ಕಿಯಾರಾ ಅಡ್ವಾಣಿಗೆ ಸೋಂಕಿನ ಭಯ ಕಾಡಿತ್ತು. ಇದೀಗ, ಅನಿಲ್ ಕಪೂರ್‌ಗೆ ಕೊರೊನಾ ನೆಗಿಟಿವ್ ಬಂದಿದೆ ಎಂದು ತಿಳಿದು ಬಂದಿದೆ.

  ಈ ಕುರಿತು ಸ್ವತಃ ಅನಿಲ್ ಕಪೂರ್ ಅವರೇ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದು. ''ವದಂತಿಗಳಿಗೆ ಕಿವಿಕೊಡುವ ಅಗತ್ಯವಿಲ್ಲ, ನನಗೆ ಕೊವಿಡ್‌ಗೆ ನೆಗಿಟಿವ್ ಬಂದಿದೆ. ನನ್ನ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದಗಳು'' ಎಂದು ಅನಿಲ್ ಕಪೂರ್ ಟ್ವೀಟ್ ಮಾಡಿದ್ದಾರೆ.

  ವರುಣ್ ಧವನ್, ನೀತು ಕಪೂರ್ ಕೊರೊನಾ ಪಾಸಿಟಿವ್: ಚಿತ್ರೀಕರಣ ಬಂದ್

  ಅಪ್ಪನಿಗೆ ಕೊರೊನಾ ಎಂದು ಸುದ್ದಿಗಳು ಹರಿದಾಡಿದ ಹಿನ್ನೆಲೆ ಸೋನಂ ಕಪೂರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ''ಸುಳ್ಳು ಸುದ್ದಿಗಳು ಅಪಾಯಕಾರಿ. ನಮ್ಮ ತಂದೆ ಬಳಿ ಮಾತನಾಡುವುದಕ್ಕೂ ಮುಂಚೆ ನಾನು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೋಡಿ ಅಚ್ಚರಿಯಾಯಿತು. ದಯವಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಿ'' ಎಂದು ಟ್ವೀಟ್ ಮಾಡಿದ್ದಾರೆ.

  ಅವನು ಹೀರೊ ನಾನು ವಿಲನ್ ಅಂತ ಹೇಳಿದ್ದೆ ಅದು ನಿಜ ಆಗೋಯ್ತು | Filmibeat Kannada

  ಅಂದ್ಹಾಗೆ, ವರುಣ್ ಧವನ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಹಾಗೂ ನೀತೂ ಕಪೂರ್ 'ಜುಗ್ ಜುಗ್ ಜಿಯೋ' ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಇದೀಗ, ಚಿತ್ರೀಕರಣ ಸ್ಥಗಿತಗೊಂಡಿದೆ. ಕಲಾವಿದರೆಲ್ಲ ಚಂಢೀಘಡ್‌ದಿಂದ ಮುಂಬೈಗೆ ವಾಪಸ್ ಆಗಿದ್ದಾರೆ.

  English summary
  Bollywood actor Anil Kapoor confirms, he tested negative For Coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X