twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್‌ಗೆ ಖಿನ್ನತೆಯೇ ಇರಲಿಲ್ಲ: ಮೌನ ಮುರಿದ ಮಾಜಿ ಪ್ರೇಯಸಿ

    |

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಖಿನ್ನತೆಯಿಂದ ಬಳಲುತ್ತಿದ್ದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸುಶಾಂತ್ ಖಿನ್ನತೆಗೆ ಒಳಗಾಗಿದ್ದೇ ಸುಳ್ಳು. ಅವರಿಗೆ ಯಾವುದರ ಬಗ್ಗೆಯೂ ಬೇಸರ, ಹತಾಶೆ ಇರಲಿಲ್ಲ. ಅವರ ಬಗ್ಗೆ ಕಟ್ಟುಕಥೆ ಸೃಷ್ಟಿಸಲಾಗಿದೆ. ಅವರಿಗೆ ಬಲವಂತವಾಗಿ ಖಿನ್ನತೆ ನಿಗ್ರಹ ಔಷಧಗಳನ್ನು ಕೊಡಲಾಗಿದೆ. ಹಂತಹಂತವಾಗಿ ಅವರನ್ನು ಈ ರೀತಿ ಬಿಂಬಿಸಲಾಗಿದೆ ಎಂದು ಹೇಳಲಾಗುತ್ತಿದೆ.

    ಸುಶಾಂತ್ ಅವರ ವೃತ್ತಿ ಬದುಕು ಹಾಗೂ ಆಲೋಚನೆಗಳ ಕುರಿತು ಅವರ ಕುಟುಂಬದವರಿಗಿಂತಲೂ ಹೆಚ್ಚು ತಿಳಿದಿರುವುದು ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅವರಿಗೆ. 'ಪವಿತ್ರ ರಿಷ್ತಾ'ದಿಂದ ಆರಂಭವಾಗಿದ್ದ ಇಬ್ಬರ ಸಂಬಂಧ ಸುಮಾರು ಏಳು ವರ್ಷಗಳವರೆಗೆ ಇತ್ತು. ಬಳಿಕ ಅಂಕಿತಾರಿಂದ ಸುಶಾಂತ್ ದೂರವಾಗಿದ್ದರು. ಈ ಸುಶಾಂತ್ ಸಾವಿನ ಕುರಿತು ಕೊನೆಗೂ ಅಂಕಿತಾ ಮೌನ ಮುರಿದಿದ್ದಾರೆ. ಮುಂದೆ ಓದಿ...

    ಅಂಕಿತಾ ಮೊದಲ ಮಾತು

    ಅಂಕಿತಾ ಮೊದಲ ಮಾತು

    ಇತ್ತೀಚೆಗಷ್ಟೇ 'ಸತ್ಯ ಗೆಲ್ಲಲಿದೆ' ಎಂಬ ಟ್ವೀಟ್ ಮೂಲಕ ಅಂಕಿತಾ ಕುತೂಹಲ ಮೂಡಿಸಿದ್ದರು. ಸುಶಾಂತ್ ಸಾವಿನ ಹಿಂದೆ ಬೇರೆಯೇನೋ ಇದೆ ಎಂದು ಅವರ ಅಭಿಮಾನಿಗಳು ಮತ್ತು ಕುಟುಂಬದವರಷ್ಟೇ ಅಲ್ಲ, ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಅವರಲ್ಲಿಯೂ ಅನುಮಾನಗಳಿವೆ ಎನ್ನುವುದನ್ನು ತಿಳಿಸಿತ್ತು. ಈಗ ಅಂಕಿತಾ ಅದರ ಬಗ್ಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

    ಸುಶಾಂತ್ ಸಿಂಗ್‌ ಜೀವಕ್ಕೆ ಅಪಾಯವಿದೆ ಎಂದು ಮೊದಲೇ ಕೊಟ್ಟಿದ್ದರು ದೂರು!ಸುಶಾಂತ್ ಸಿಂಗ್‌ ಜೀವಕ್ಕೆ ಅಪಾಯವಿದೆ ಎಂದು ಮೊದಲೇ ಕೊಟ್ಟಿದ್ದರು ದೂರು!

    ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿ ಅಲ್ಲವೇ ಅಲ್ಲ. ನಾವು ಜತೆಗಿದ್ದಾಗ ಸುಶಾಂತ್ ಜೀವನದಲ್ಲಿ ಇನ್ನೂ ಕೆಟ್ಟ ಪರಿಸ್ಥಿತಿಯನ್ನು ನಾವು ನೋಡಿದ್ದೇವೆ. ಆತ ಯಾವಾಗಲೂ ಖುಷಿಯಿಂದ ಇರುತ್ತಿದ್ದ. ಬಂದಿದ್ದನ್ನು ಸಮಚಿತ್ತದಿಂದ ಸ್ವೀಕರಿಸುತ್ತಿದ್ದ. ಅವನು ಖಿನ್ನತೆ ಒಳಗಾಗಿರಲಿಲ್ಲ ಎಂದು ಅಂಕಿತಾ ಹೇಳಿದ್ದಾರೆ.

    ಐದು ವರ್ಷದ ಯೋಜನೆ

    ಐದು ವರ್ಷದ ಯೋಜನೆ

    ತನ್ನ ಕನಸುಗಳ ಬಗ್ಗೆ ಬರೆದುಕೊಳ್ಳುವ ಸುಶಾಂತ್‌ನಂತಹ ಮತ್ತೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ. ಆತನ ಬಳಿ ಡೈರಿ ಒಂದಿತ್ತು. ಅದರಲ್ಲಿ ಐದು ವರ್ಷದ ಯೋಜನೆಯನ್ನು ಬರೆದುಕೊಂಡಿದ್ದ. ತಾನೇನು ಮಾಡಬೇಕು, ತಾನು ಹೇಗೆ ಕಾಣಿಸುತ್ತೇನೆ ಇತ್ಯಾದಿ. ಅಷ್ಟೇ ಅಲ್ಲ, ಸರಿಯಾಗಿ ಐದು ವರ್ಷದ ಬಳಿಕ ಅವುಗಳನ್ನು ಸಾಧಿಸಿದ್ದ ಕೂಡ.

    ಖಿನ್ನತೆ ಪದವೇ ತಪ್ಪು

    ಖಿನ್ನತೆ ಪದವೇ ತಪ್ಪು

    ಹೀಗಿರುವಾಗ ಈಗ 'ಖಿನ್ನತೆ'ಯಂತಹ ವಿಚಾರಗಳನ್ನು ಆತನ ಹೆಸರಿನ ಜತೆ ಪದೇ ಪದೇ ಬಳಸಲಾಗುತ್ತಿದೆ. ಇದು ಹೃದಯಕ್ಕೆ ನೋವುಂಟುಮಾಡುತ್ತದೆ. ಆತನಲ್ಲಿ ಬೇಸರ, ಉದ್ವೇಗಗಳಿರಬಹುದು. ಹೌದು. ಅದು ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಆದರೆ ಖಿನ್ನತೆ ಎನ್ನುವುದು ತೀರಾ ದೊಡ್ಡ ಪದ. ಒಬ್ಬ ವ್ಯಕ್ತಿಯನ್ನು 'ಬೈಪೋಲಾರ್' ಎಂದು ಕರೆಯುವುದು ದೊಡ್ಡ ಸಂಗತಿ. ಅದು ತಪ್ಪು.

    ಒಳ್ಳೆಯವರೋ, ಕೆಟ್ಟವರೋ ಇಲ್ಲಿ ಬೇಡ: ಸುಶಾಂತ್ ಕೇಸ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ಒಳ್ಳೆಯವರೋ, ಕೆಟ್ಟವರೋ ಇಲ್ಲಿ ಬೇಡ: ಸುಶಾಂತ್ ಕೇಸ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

    ಸುಶಾಂತ್ ಬಗ್ಗೆ ಯಾರಿಗೆ ಗೊತ್ತು?

    ಸುಶಾಂತ್ ಬಗ್ಗೆ ಯಾರಿಗೆ ಗೊತ್ತು?

    ನಾನು ತಿಳಿದಿರುವ ಸುಶಾಂತ್- ಆತ ಸಣ್ಣ ಪಟ್ಟಣದಿಂದ ಬಂದವನು. ತನ್ನ ಸ್ವಂತ ಬಲದಿಂದ ತನ್ನನ್ನು ತಾನು ಬೆಳೆಸಿಕೊಂಡನು. ಆತ ನನಗೆ ಅನೇಕ ವಿಚಾರಗಳನ್ನು ಕಲಿಸಿಕೊಟ್ಟಿದ್ದಾನೆ. ನನಗೆ ನಟನೆ ಕಲಿಸಿದ್ದಾನೆ. ನಿಜವಾದ ಸುಶಾಂತ್ ಏನು ಎನ್ನುವುದು ಯಾರಿಗಾದರೂ ಗೊತ್ತಾ? ಸುಶಾಂತ್ ಎಷ್ಟು ಖಿನ್ನತೆಗೆ ಒಳಗಾಗಿದ್ದ ಎಂದು ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಅವುಗಳನ್ನೆಲ್ಲ ಓದಿದಾಗ ತೀವ್ರ ನೋವಾಗುತ್ತದೆ.

    ಬದುಕಿನ ಬಗ್ಗೆ ಪ್ರೀತಿ ಇತ್ತು

    ಬದುಕಿನ ಬಗ್ಗೆ ಪ್ರೀತಿ ಇತ್ತು

    ಸುಶಾಂತ್ ಈ ತೀರ್ಮಾನ ತೆಗೆದುಕೊಳ್ಳಲು ಹಣಕಾಸಿನ ವಿಚಾರ ಕಾರಣವೇ? ಎಂಬ ಪ್ರಶ್ನೆಗೆ, 'ಸುಶಾಂತ್‌ಗೆ ಹಣ ತೀರಾ ಸಣ್ಣ ಸಂಗತಿಯಾಗಿತ್ತು. ಆತನ ಪ್ಯಾಷನ್ ಬಹಳ ದೊಡ್ಡದಿತ್ತು. ಒಂದು ವೇಳೆ ಎಲ್ಲವೂ ಮುಗಿದು ಹೋದರೂ ನಾನು ನನ್ನದೇ ಸಾಮ್ರಾಜ್ಯವನ್ನು ಮತ್ತೆ ಕಟ್ಟುತ್ತೇನೆ. ಮತ್ತೆ ಕಷ್ಟಪಟ್ಟು ಕೆಲಸ ಮಾಡುತ್ತೇನೆ ಎನ್ನುತ್ತಿದ್ದ. ಆತ ಕೆಲಸದ ಬಗ್ಗೆ ಪ್ಯಾಷನೇಟ್ ಆಗಿದ್ದ. ಆದರೆ ಅದಕ್ಕಿಂತಲೂ ಜೀವನದ ಬಗ್ಗೆ ಪ್ಯಾಷನೇಟ್ ಆಗಿದ್ದ. ಎಲ್ಲವೂ ಪ್ಯಾಷನ್‌ನಿಂದ ಮಾಡುತ್ತಿದ್ದ. ಶಿಯಾಮಕ್‌ನಲ್ಲಿ ಆತನ ಮೊದಲ ಹಿನ್ನೆಲೆ ನೃತ್ಯಪಟುವಾಗಿದ್ದವನು.

    ಲ್ಯಾಪ್ ಟಾಪ್, ಚಿನ್ನ, ಹಣ ಎಲ್ಲವನ್ನೂ ರಿಯಾ ದೋಚಿಕೊಂಡು ಹೋಗಿದ್ದಾರೆ: ಸುಶಾಂತ್ ಕುಟುಂಬ ಸ್ನೇಹಿತನ ಆರೋಪಲ್ಯಾಪ್ ಟಾಪ್, ಚಿನ್ನ, ಹಣ ಎಲ್ಲವನ್ನೂ ರಿಯಾ ದೋಚಿಕೊಂಡು ಹೋಗಿದ್ದಾರೆ: ಸುಶಾಂತ್ ಕುಟುಂಬ ಸ್ನೇಹಿತನ ಆರೋಪ

    ಧೋನಿ ಪ್ರೇರಣೆಯಾಗಿದ್ದರು

    ಧೋನಿ ಪ್ರೇರಣೆಯಾಗಿದ್ದರು

    ಸುಶಾಂತ್ ಯಾವಾಗಲೂ ಒಂದು ಮಾತು ಹೇಳುತ್ತಿದ್ದ, ಸೋಲು ಮತ್ತು ಗೆಲುವುಗಳ ನಡುವೆ ಒಂದು ಗೆರೆ ಇರುತ್ತದೆ. ವೈಫಲ್ಯ ಬಂದಾಗಲೂ ಧೋನಿ ಶಾಂತರಾಗಿರುತ್ತಿದ್ದು, ಯಾವುದಾದರೂ ಒಳ್ಳೆಯದೇ ಇದ್ದಾಗಲೂ ಅವರು ಶಾಂತರಾಗಿರುತ್ತಿದ್ದರು. ಸೋತರೆ ಮತ್ತೆ ಪುಟಿದು ಎದ್ದು ಬರುವುದಾಗಿ ಆತ ಹೇಳುತ್ತಿದ್ದ. ಸಣ್ಣ ಸಣ್ಣ ಸಂಗತಿಗಳಲ್ಲಿಯೂ ಖುಷಿ ನೋಡುತ್ತಿದ್ದ. ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದ್ದ, ನಕ್ಷತ್ರಗಳನ್ನು ನೋಡುತ್ತಿದ್ದ. ಅದೇ ಆತನ ಖುಷಿಯಾಗಿತ್ತು. ಆದರೆ ಅದರಿಂದಾಗಿ ಆತ ಸಾಯಲು ಸಾಧ್ಯವೇ ಇಲ್ಲ.

    ಆತನೊಬ್ಬ ಹೀರೋ, ಸ್ಫೂರ್ತಿ

    ಆತನೊಬ್ಬ ಹೀರೋ, ಸ್ಫೂರ್ತಿ

    ಒಂದು ವೇಳೆ ಯಾವುದೇ ಕೆಲಸಗಳು ಇಲ್ಲದೆ ಖಾಲಿ ಬಿದ್ದರೆ ಕೃಷಿ ಮಾಡುತ್ತೇನೆ, ಕಿರು ಚಿತ್ರಗಳನ್ನು ಮಾಡಿಕೊಂಡು ಇರುತ್ತೇನೆ ಎನ್ನುತ್ತಿದ್ದ. ನಾನು ಮತ್ತೊಮ್ಮೆ ಹೇಳುತ್ತೇನೆ, ಸುಶಾಂತ್ ಖಿನ್ನತೆಗೆ ಒಳಗಾಗಿರಲಿಲ್ಲ. ನನಗೆ ಪರಿಸ್ಥಿತಿ ಏನಿತ್ತು ಎನ್ನುವುದು ಗೊತ್ತಿಲ್ಲ. ಆದರೆ ಮತ್ತೆ ಮತ್ತೆ ಹೇಳುತ್ತಲೇ ಇರುತ್ತೇನೆ, ಸುಶಾಂತ್ ಒಬ್ಬ ಖಿನ್ನತೆಯ ಮನುಷ್ಯ ಎಂದು ಜನರು ನೆನಪಿಸಿಕೊಳ್ಳುವುದನ್ನು ನಾನು ಬಯಸುವುದಿಲ್ಲ. ಆತನೊಬ್ಬ ಹೀರೋ, ಸ್ಫೂರ್ತಿ ಎಂದು ಅಂಕಿತಾ ಭಾವುಕರಾಗಿ ಹೇಳಿದ್ದಾರೆ.

    English summary
    Ex-girlfriend of Sushant Singh Rajput, Ankita Lokhande finally breaks her silence on the demised actor and refuses the claim of his depression.
    Friday, July 31, 2020, 9:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X