For Quick Alerts
  ALLOW NOTIFICATIONS  
  For Daily Alerts

  ಬಿಹಾರ ಚುನಾವಣೆ: ಬಿಜೆಪಿ ಮೇಲೆ ಹಾಡು ಕದ್ದ ಆರೋಪ

  |

  ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಜೋರಾಗಿ ನಡೆದಿದೆ. ಎಲ್ಲಾ ಪ್ರಮುಖ ಪಕ್ಷಗಳು ಗೆಲ್ಲಲು ಸಕಲ ಪ್ರಯತ್ನಗಳನ್ನು ಮಾಡುತ್ತಿವೆ. ಪ್ರಚಾರವೂ ಜೋರಾಗಿಯೇ ನಡೆದಿದೆ.

  ಚುನಾವಣೆ ಪ್ರಚಾರದಲ್ಲಿ ಸಾಮಾನ್ಯವಾಗಿ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. ಚುನಾವಣೆ ಸಮಯಕ್ಕೆ ಸರಿಯಾಗಿ ಆಯಾ ಪಕ್ಷಗಳು ಚುನಾವಣೆ ಕುರಿತು, ಪಕ್ಷದ ಕುರಿತು ಹಾಡುಗಳನ್ನು ಬಿಡುಗಡೆ ಮಾಡುವುದು ಸಾಮಾನ್ಯ. ಪ್ರಚಾರದ ವೇಳೆಯಲ್ಲಿ ಇವನ್ನು ಬಳಸಿಕೊಳ್ಳಲಾಗುತ್ತದೆ.

  ಬಿಜೆಪಿ ಸಹ ಬಿಹಾರ ಚುನಾವಣೆಗೆ ರ್ಯಾಪ್ ಮಾದರಿ ಹಾಡೊಂದನ್ನು ಬಿಡುಗಡೆ ಮಾಡಿದೆ. ಹಾಡು ಚೆನ್ನಾಗಿದೆ, ಆಕರ್ಷಕವಾಗಿದೆ. ಆದರೆ ಇದು ಕದ್ದಿರುವ ಹಾಡಾಗಿದೆ. ಹೀಗೆಂದು ಹಾಡಿನ ಹಕ್ಕುಸ್ವಾಮ್ವ ಹೊಂದಿರುವವರು ಆರೋಪಿಸಿದ್ದಾರೆ.

  ಅನುಭವ್ ಸಿನ್ಹಾ ಆರೋಪ ಮಾಡಿದ್ದಾರೆ

  ಅನುಭವ್ ಸಿನ್ಹಾ ಆರೋಪ ಮಾಡಿದ್ದಾರೆ

  ಬಾಲಿವುಡ್‌ನ ಸೃಜನಾತ್ಮಕ ನಿರ್ದೇಶಕರುಗಳಲ್ಲೊಬ್ಬರಾದ ಅನುಭವ್ ಸಿನ್ಹಾ ಈ ಆರೋಪ ಮಾಡಿದ್ದಾರೆ. ಬಿಹಾರ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಹಾಡು, 'ಬಿಹಾರ್‌ ಮೆ ಈ ಬಾ' ಹಾಡು ಕದ್ದ ಹಾಡಾಗಿದೆ. ಅದರ ಮೂಲ ಹಾಡಿನ ಹಕ್ಕುಸ್ವಾಮ್ಯ ನನ್ನ ಬಳಿ ಇದೆ ಎಂದಿದ್ದಾರೆ.

  ಅನುಭವ್ ಸಿನ್ಹಾ ನಿರ್ದೇಶಿಸಿ, ಡಾ.ಸಾಗರ್ ಬರೆದಿರುವ ಹಾಡು

  ಅನುಭವ್ ಸಿನ್ಹಾ ನಿರ್ದೇಶಿಸಿ, ಡಾ.ಸಾಗರ್ ಬರೆದಿರುವ ಹಾಡು

  ಅನುಭವ್ ಸಿನ್ಹಾ ನಿರ್ದೇಶಿಸಿರುವ, ಡಾ.ಸಾಗರ್ ಬರೆದಿರುವ, ಮನೋಜ್ ಬಾಜಪೇಯಿ ಹಾಡಿರುವ 'ಬಂಬೈ ಮೆ ಕಾ ಬಾ' ಎನ್ನುವ ಬೋಜಪುರಿ ಹಾಡಿನ ರಾಗ, ಸಂಗೀತವನ್ನು ಯಥಾವತ್ತು ಎತ್ತಿಕೊಂಡಿರುವ ಬಿಜೆಪಿ ಸಾಹಿತ್ಯವನ್ನು ಬದಲಾಯಿಸಿ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಬಿಡುಗಡೆ ಮಾಡಿದೆ.

  ನನ್ನ ಹಾಡನ್ನು ಬಿಜೆಪಿ ಯಥಾವತ್ತು ಎತ್ತಿಕೊಂಡಿದೆ: ಸಿನ್ಹಾ

  ನನ್ನ ಹಾಡನ್ನು ಬಿಜೆಪಿ ಯಥಾವತ್ತು ಎತ್ತಿಕೊಂಡಿದೆ: ಸಿನ್ಹಾ

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಿರ್ದೇಶಕ ಅನುಭವ್ ಸಿನ್ಹಾ, 'ನನ್ನ ಹಾಡನ್ನು ಯಥಾವತ್ತು ಬಿಜೆಪಿ ಎತ್ತಿಕೊಂಡಿದೆ. ಆದರೆ ಹೀಗೆ ಮಾಡುವ ಮುನ್ನಾ ಯಾರೂ ನನ್ನನ್ನು ಸೌಜನ್ಯಕ್ಕಾದರೂ ಒಪ್ಪಿಗೆ ಕೇಳಲಿಲ್ಲ, ಇಡೀಯ ದೇಶವನ್ನೇ ಆಳುತ್ತಿರುವ ಬಿಜೆಪಿಗೆ ಇದೊಂದು ಸಣ್ಣ ವಿಷಯ ಎನಿಸಿರಬಹುದು' ಎಂದಿದ್ದಾರೆ ಸಿನ್ಹಾ.

  ನಾವು ಇಷ್ಟು ಜನ ಬರ್ತಾರೆ ಅಂತ ನೀರಿಕ್ಷೆ ಮಾಡಿರ್ಲಿಲ್ಲ ಎಂದ ಶಿವಾರ್ಜುನ ನಿರ್ಮಾಪಕ | Filmibeat Kannada
  ಬಿಜೆಪಿ ಭಕ್ತರು ಟ್ರೋಲ್ ಮಾಡದಿದ್ದರೆ ಸಾಕು: ಸಿನ್ಹಾ

  ಬಿಜೆಪಿ ಭಕ್ತರು ಟ್ರೋಲ್ ಮಾಡದಿದ್ದರೆ ಸಾಕು: ಸಿನ್ಹಾ

  ಮುಂದುವರೆದು, ನಾನು ಬಿಜೆಪಿ ವಿರುದ್ಧ ಹೋರಾಡುವಷ್ಟು ದೊಡ್ಡವನಲ್ಲ, ಈ ವಿಷಯವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುವಷ್ಟು ಹಣವೂ ನನ್ನ ಬಳಿ ಇಲ್ಲ. ಹಾಗಾಗಿ ಅಸಹಾಯಕತೆಯಿಂದ, ಬಿಜೆಪಿಯು ನನ್ನ ಹಾಡನ್ನು ಬಳಸಿಕೊಳ್ಳಲು ಬಿಡುತ್ತೇನೆ. ಆದರೆ ಈ ಪೋಸ್ಟ್ ಹಾಕಿದ್ದಕ್ಕೆ ಬಿಜೆಪಿ ಕಾಲಾಳುಗಳು ನನ್ನ ವಿರುದ್ಧ ಟ್ರೋಲ್ ಮಾಡದೇ ಇದ್ದರೆ ಸಾಕು ಅದೇ ನನ್ನ ಮನವಿ' ಎಂದಿದ್ದಾರೆ ಸಿನ್ಹಾ.

  English summary
  Bollywood movie director Anubhav Sinha accused BJP copied his rap song 'bambai me ka ba' and used it for Bihar elections.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X