For Quick Alerts
  ALLOW NOTIFICATIONS  
  For Daily Alerts

  ಎಲ್ಲರಿಗಿಂತ ವಿಭಿನ್ನವಾಗಿ ಕೇರಳಗೆ ನೆರವಾದ ಅನುಷ್ಕಾ-ಕೊಹ್ಲಿ ದಂಪತಿ

  By Bharath Kumar
  |

  ಕೇರಳ ರಾಜ್ಯಕ್ಕೆ ದೇಶದ ಬಹುತೇಕ ಗಣ್ಯರು, ಜನ ಸಾಮನ್ಯರು ನೆರವು ನೀಡಿದ್ದಾರೆ. ಅದರಲ್ಲೂ ಸಿನಿಮಾ ತಾರೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಹಸ್ತ ಚಾಚಿರುವುದು ವಿಶೇಷ. ದಕ್ಷಿಣ ಚಿತ್ರರಂಗದಲ್ಲಿ ತಮಿಳು, ತೆಲುಗು, ಕನ್ನಡ ಕಲಾವಿದರು ಧನ ಸಹಾಯದ ಜೊತೆಗೆ ಅಗತ್ಯವಸ್ತುಗಳನ್ನ ಪೂರೈಸಿ ಮಾನವೀಯತೆ ಮೆರೆದಿದ್ದಾರೆ.

  ಆರಂಭದಲ್ಲಿ ಬಾಲಿವುಡ್ ನಟರು ಕೇರಳ ಪ್ರವಾಹಕ್ಕೆ ಯಾರೂ ಕೂಡ ಪ್ರತಿಕ್ರಿಯಿಸಿರಲಿಲ್ಲ. ಕೇವಲ ಟ್ವಿಟ್ಟರ್ ನಲ್ಲಿ ಸಾಂತ್ವನ ಹೇಳಿ ಸುಮ್ಮನಾಗಿದ್ದರು. ನಂತರ ಎಚ್ಚೆತ್ತುಕೊಂಡ ಬಿಟೌನ್ ಮಂದಿ ಹಣದ ರೂಪದಲ್ಲಿ ನೆರವಾದರು. ಅಮಿತಾಬ್ ಬಚ್ಚನ್, ಸುಶಾಂತ್ ಸಿಂಗ್ ರಜಪೂತ್, ಪೂನಂ ಪಾಂಡೆ, ಸನ್ನಿ ಲಿಯೋನ್ ಸೇರಿದಂತೆ ಹಲವರು ಧನ ಸಹಾಯ ಮಾಡಿದರು.

  ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.!ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.!

  ಈ ಮಧ್ಯೆ ಬಾಲಿವುಡ್ ಟಾಪ್ ನಟಿ ಅನುಷ್ಕಾ ಶರ್ಮಾ ಯಾವುದೇ ನೆರವು ನೀಡಿರಲಿಲ್ಲ. ಇದು ಸಹಜವಾಗಿ ಅಭಿಮಾನಿಗಳಿಗೆ ಕೋಪ ತರಿಸಿತ್ತು. ಅನುಷ್ಕಾ ಮತ್ತು ಕೊಹ್ಲಿ ವಿರುದ್ಧ ಟೀಕೆ ಕೂಡ ಮಾಡಿದರು. ಆದ್ರೆ, ಎಲ್ಲರಿಗಿಂತ ವಿಭಿನ್ನವಾಗಿ ಈ ಜೋಡಿ ಕೇರಳಗೆ ನೆರವು ನೀಡಿರುವುದು ಈಗ ಬೆಳಕಿಗೆ ಬಂದಿದೆ. ಅದು ಹೇಗೆ.? ಮುಂದೆ ಓದಿ.....

  ಅನುಷ್ಕಾ ಮತ್ತು ಕೊಹ್ಲಿ ತಂಡ ಕೆಲಸ ಮಾಡಿದೆ

  ಅನುಷ್ಕಾ ಮತ್ತು ಕೊಹ್ಲಿ ತಂಡ ಕೆಲಸ ಮಾಡಿದೆ

  ಪ್ರವಾಹದಿಂದ ಸಂಕಷ್ಟದಲ್ಲಿ ಕೇರಳ ಜನತೆಗೆ ಅನುಷ್ಕಾ ಮತ್ತು ಕೊಹ್ಲಿ ಆರಂಭದಲ್ಲೇ ಸಹಾಯ ಮಾಡಿದ್ದಾರೆ. ಕೇರಳದ ಜನತೆಗೆ ಸಹಾಯ ಮಾಡಲು ಅನುಷ್ಕಾ ಮತ್ತು ಕೊಹ್ಲಿ ಅವರ ತಂಡವೊಂದು ಕೆಲಸ ಮಾಡಿದೆಯಂತೆ. ಕೇರಳಗೆ ಬೇಕಾದ ಅಗತ್ಯ ವಸ್ತುಗಳನ್ನ, ದವಸ ದಾನ್ಯಗಳನ್ನ ಸಂಗ್ರಹಿಸಿ ಕೇರಳಿಗರಿಗೆ ತಲುಪಿಸಿದೆಯಂತೆ.

  ಕೇರಳ ಸಂತ್ರಸ್ಥರಿಗೆ ದೊಡ್ಡ ಸಹಾಯ ಮಾಡಿದ ಅಮಿತಾಬ್ ಬಚ್ಚನ್ಕೇರಳ ಸಂತ್ರಸ್ಥರಿಗೆ ದೊಡ್ಡ ಸಹಾಯ ಮಾಡಿದ ಅಮಿತಾಬ್ ಬಚ್ಚನ್

  ಟ್ರಕ್ ನಲ್ಲಿ ಆಹಾರ ಮತ್ತು ಔಷಧ ಕಳುಹಿಸಿದ್ದರು

  ಟ್ರಕ್ ನಲ್ಲಿ ಆಹಾರ ಮತ್ತು ಔಷಧ ಕಳುಹಿಸಿದ್ದರು

  ಅನುಷ್ಕಾ ಮತ್ತು ಕೊಹ್ಲಿಯ ಅಭಿಮಾನಿ ತಂಡ ಬಿಟ್ಟು, ವೈಯಕ್ತಿಕವಾಗಿ ವಿರುಷ್ಕಾ ಜೋಡಿ ಟ್ರಕ್ ನಲ್ಲಿ ಆಹಾರ ಮತ್ತು ಔಷಧಗಳನ್ನ ಪೂರೈಸಿದ್ದಾರೆ ಎಂದು ತಿಳಿದುಬಂದಿದೆ.

  ಎನ್.ಜಿ.ಓ ಜೊತೆ ಒಪ್ಪಂದ

  ಎನ್.ಜಿ.ಓ ಜೊತೆ ಒಪ್ಪಂದ

  ಅಷ್ಟೇ ಅಲ್ಲದೇ, ಕೇರಳಗೆ ಸಹಾಯ ಮಾಡಲು ಅನುಷ್ಕಾ ಮತ್ತು ಕೊಹ್ಲಿ ಎನ್.ಜಿ.ಓ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಗಾಯಾಳುಗಳಿಗೆ ವೈದ್ಯಕೀಯ ಉಪಚಾರ ನೀಡಲು ಈ ಎನ್.ಜಿ.ಓ ಸಂಸ್ಥೆಗಳು ಕಾರ್ಯನಿರ್ವಹಿಸಲಿದ್ದು, ಇದರ ಜೊತೆ ಅನುಷ್ಕಾ ಮತ್ತು ಕೊಹ್ಲಿ ದಂಪತಿ ಕೈಜೋಡಿಸಿದ್ದಾರೆ ಎನ್ನಲಾಗಿದೆ.

  ಕೇರಳ ಜನರ ಪರಿಹಾರಕ್ಕೆ ಸುಶಾಂತ್ ನೀಡಿದ ಹಣ ಎಷ್ಟು?ಕೇರಳ ಜನರ ಪರಿಹಾರಕ್ಕೆ ಸುಶಾಂತ್ ನೀಡಿದ ಹಣ ಎಷ್ಟು?

  ವನ್ಯಜೀವಿಗಳಿಗೆ ನೆರವಾದ ಅನುಷ್ಕಾ

  ವನ್ಯಜೀವಿಗಳಿಗೆ ನೆರವಾದ ಅನುಷ್ಕಾ

  ಕೇರಳದಲ್ಲಿ ಸಮಸ್ಯೆ ಎದುರಿಸಿದ ಪೈಕಿ, ಪ್ರಾಣಿ ಪಕ್ಷಿಗಳು ಕೂಡ ಇವೆ. ಹೀಗಾಗಿ, ನಟಿ ಅನುಷ್ಕಾ ಅವರು ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವುಗಳಿಗೆ ನೆರವಾಗುವಂತಹ ಕೆಲಸ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣೆ ಮಾಡಲು ಕೆಲವು ಎನ್.ಜಿ.ಓ ಸಂಸ್ಥೆಯೊಂದಿಗೆ ಸಾಥ್ ನೀಡಿದ್ದಾರೆ.

  ಕೇರಳ ಜನತೆಯ ನೆರವಿಗೆ ಬಂದ ನಟಿ ಪೂನಂ ಪಾಂಡೆಕೇರಳ ಜನತೆಯ ನೆರವಿಗೆ ಬಂದ ನಟಿ ಪೂನಂ ಪಾಂಡೆ

  ಟೀಮ್ ಇಂಡಿಯಾದಿಂದಲೂ ನೆರವು

  ಟೀಮ್ ಇಂಡಿಯಾದಿಂದಲೂ ನೆರವು

  ಅನುಷ್ಕಾ ಮತ್ತು ಕೊಹ್ಲಿ ಅವರ ವೈಯಕ್ತಿಕ ನೆರವಿನೊಂದಿಗೆ ಟೀಮ್ ಇಂಡಿಯಾ ಕಡೆಯಿಂದ ಕೇರಳಗೆ ನೆರವು ಒದಗಿಸಲಾಗಿದೆ. ಮೂರನೇ ಟೆಸ್ಟ್ ನಲ್ಲಿ ಗೆದ್ದ ಭಾರತದ ತಂಡ, ಸಂಭಾವನೆಯಲ್ಲಿ ಒಂದಿಷ್ಟು ಹಣವನ್ನ ಕೇರಳ ಸಂತ್ರಸ್ಥರಿಗೆ ನೀಡಿದ್ದಾರೆ.

  English summary
  Cricket and Bollywood’s power couple Anushka Sharma and Virat Kohli donate for victims. The couple has come together not only to help the flood victims of Kerala but also the strays.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X