Just In
Don't Miss!
- News
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಸಾಧ್ಯತೆ
- Sports
ಭಾರತ vs ಆಸ್ಟ್ರೇಲಿಯಾ: ವೃತ್ತಿ ಜೀವನದಲ್ಲಿ ಅತ್ಯಂತ ನಿಧಾನದ ಅರ್ಧ ಶತಕ ಸಿಡಿಸಿದ ಪೂಜಾರ
- Automobiles
ಡೀಲರ್ ಬಳಿ ತಲುಪಿದ ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್
- Lifestyle
ಶುದ್ಧ ದೇಸಿ ತುಪ್ಪದಲ್ಲಿದೆ ಸೌಂದರ್ಯವರ್ಧಕ ಗುಣಗಳು...
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಖಾಸಗಿತನಕ್ಕೆ ಧಕ್ಕೆ: ಮಾಧ್ಯಮಗಳ ಮೇಲೆ ಅನುಷ್ಕಾ ಶರ್ಮಾ ಕಿಡಿ
ಸೆಲೆಬ್ರಿಟಿಗಳಿಗೆ ಖಾಸಗಿತನ ಎಂಬುದು ಬಹಳ ಕಡಿಮೆ, ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳಿಗಂತೂ ಖಾಸಗಿತನ ಎಂಬುದು ಬಹುತೇಕ ಇಲ್ಲವೇ ಇಲ್ಲ ಎನ್ನುವಂತಾಗಿದೆ.
ಮಾಧ್ಯಮಗಳ ಕ್ಯಾಮೆರಾಮನ್‌ಗಳು ಸದಾ ಸೆಲೆಬ್ರಿಟಿಗಳ ಮನೆಗಳ ಮುಂದೆ ಇದ್ದೇ ಇರುತ್ತಾರೆ. ಅವರು ಎಲ್ಲಿ ಹೋದರೂ ಹಿಂಬಾಲಿಸುತ್ತಾರೆ. ಹಲವು ಬಾಲಿವುಡ್ ಪತ್ರಿಕೆಗಳು ಹಲವು ಶಿಫ್ಟ್‌ಗಳಲ್ಲಿ ಸೆಲೆಬ್ರಿಟಿಗಳ ಮನೆಯ ಮುಂದೆ ಕ್ಯಾಮೆರಾಮನ್‌ಗಳನ್ನು ಕೆಲಸಕ್ಕೆ ಹಾಕಿರುತ್ತಾರೆ. ಸೆಲೆಬ್ರಿಟಿಗಳು ವಿದೇಶಕ್ಕೆ ಹೋದರೂ ಹಿಂಬಾಲಿಸುವವರಿದ್ದಾರೆ.
ಪ್ರಸ್ತುತ ಅನುಷ್ಕಾ ಶರ್ಮಾ ಬಾಲಿವುಡ್‌ನ ಟಾಪ್ ಸೆಲೆಬ್ರಿಟಿ, ಅಮ್ಮನಾಗುತ್ತಿರುವ ಅನುಷ್ಕಾ ರ ಸಣ್ಣ ಕದಲಿಕೆಗಳೂ ಸುದ್ದಿಯಾಗುತ್ತಿವೆ. ಅವರ ಮನೆಯ ಮುಂದೆ ಕ್ಯಾಮೆರಾಮನ್‌ಗಳ ದಂಡೇ ಇರುತ್ತದೆ. ಎಲ್ಲಿ ಹೋದರೂ ಕ್ಯಾಮೆರಾ ಕ್ಲಿಕ್ಕಿಸಲಾಗುತ್ತದೆ. ವಿಡಿಯೋ ಮಾಡಲಾಗುತ್ತದೆ. ಇದರಿಂದ ಬೇಸತ್ತುಹೋಗಿದ್ದಾರೆ ನಟಿ ಅನುಷ್ಕಾ ಶರ್ಮಾ.
ನಿನ್ನೆಯಷ್ಟೆ ಅನುಷ್ಕಾ ಶರ್ಮಾ ಹಾಗೂ ಪತಿ ವಿರಾಟ್ ಕೊಹ್ಲಿ ತಮ್ಮ ಮನೆಯ ಬಾಲ್ಕನಿಯಲ್ಲಿ ಕೂತು ಜೊತೆಯಾಗಿ ಊಟ ಮಾಡುತ್ತಿದ್ದರು. ಇದನ್ನು ಯಾವುದೋ ಒಂದು ಪತ್ರಿಕೆಯು ಪ್ರಕಟ ಮಾಡಿದೆ. ಇದು ಅನುಷ್ಕಾ ಶರ್ಮಾ ಅವರನ್ನು ಕೆರಳಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಟ್ಟು ಹೊರಹಾಕಿದ್ದಾರೆ.

ಸಾಕು ಇದನ್ನು ನಿಲ್ಲಿಸಿ: ಅನುಷ್ಕಾ ಶರ್ಮಾ
'ಮನವಿಗಳನ್ನು ಮಾಡಿದ ಬಳಿಕವೂ ಒಬ್ಬ ಫೊಟೊಗ್ರಾಫರ್ ಮತ್ತು ಒಂದು ಪ್ರಕಟಣಾ ಸಂಸ್ಥೆ ನಮ್ಮ ಖಾಸಗಿತನವನ್ನು ಉಲ್ಲಂಘಿಸುತ್ತಿದ್ದಾರೆ. ದಯವಿಟ್ಟು ಇದನ್ನು ಇಲ್ಲಿಗೇ ನಿಲ್ಲಿಸಿಬಿಡಿ' ಎಂದಿದ್ದಾರೆ ಅನುಷ್ಕಾ ಶರ್ಮಾ.

ಚಿತ್ರ-ವಿಡಿಯೋ ಹಂಚಿಕೊಳ್ಳುವ ಅನುಷ್ಕಾ ಶರ್ಮಾ
ಗರ್ಭಿಣಿ ಅನುಷ್ಕಾ ಶರ್ಮಾ ತಮ್ಮ ಸಾಕಷ್ಟು ಚಿತ್ರಗಳು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದಾಗ್ಯೂ ಅವರು ಎಲ್ಲಿ ಹೋದರೂ ಅವರನ್ನು ಹಿಂಬಾಲಿಸಿ ಅವರ ಖಾಸಗಿ ಕ್ಷಣಗಳನ್ನು ಸಹ ಕ್ಲಿಕ್ಕಿಸಿ ಮುದ್ರಿಸಲಾಗುತ್ತಿದೆ. ಇದು ಅನುಷ್ಕಾ ರಿಗೆ ಬೇಸರ ತಂದಿದೆ.

ಆಸ್ಟ್ರೇಲಿಯಾದಿಂದ ವಾಪಸ್ಸಾಗಿರುವ ವಿರಾಟ್ ಕೊಹ್ಲಿ
ನಟಿ ಅನುಷ್ಕಾ ಶರ್ಮಾ ಇದೇ ತಿಂಗಳಾಂತ್ಯದಲ್ಲಿ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ ಆಸ್ಟ್ರೇಲಿಯಾ ಪ್ರವಾಸದಿಂದ ರಜೆ ಪಡೆದು ಪತ್ನಿಯೊಂದಿಗೆ ಕಾಲ ಕಳೆಯಲು ಭಾರತಕ್ಕೆ ವಾಪಸ್ಸಾಗಿದ್ದಾರೆ. ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ನೀಡಲಿದ್ದಾರೆ ಅನುಷ್ಕಾ.

ಹಲವಾರು ಸೆಲೆಬ್ರಿಟಿಗಳಿಂದ ವಿರೋಧ
ಈ ಹಿಂದೆ ಸಹ ಹಲವಾರು ಮಂದಿ ಬಾಲಿವುಡ್ ಸೆಲೆಬ್ರಿಟಿಗಳು 'ಪಾಪಾರಾಟ್ಜಿ'ಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ಸೆಲೆಬ್ರಿಟಿಗಳು ಕ್ಯಾಮೆರಾಮನ್‌ಗಳ ಬಗ್ಗೆ ಜಗಳವನ್ನೂ ಆಡಿದ್ದರು. ರಣಬೀರ್-ಕತ್ರೀನಾ ರ ಬೀಚ್ ಫೊಟೊ ವೈರಲ್ ಆದಾಗ ಈ ಕುರಿತು ದೊಡ್ಡ ಚರ್ಚೆಯೇ ಏರ್ಪಟ್ಟಿತ್ತು.