5 ದಿನದಲ್ಲಿ ಅನುಷ್ಕಾ-ಕೊಹ್ಲಿ ದಂಪತಿ ಸಂಗ್ರಹಿಸಿದ ದೇಣಿಗೆ ಎಷ್ಟು?

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಉದ್ದೇಶದಿಂದ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ್ದರು.

ಐದು ದಿನದಲ್ಲಿ 5 ಕೋಟಿ ಹಣ ಸಂಗ್ರಹವಾಗಿದೆ ಎಂಬ ವಿಷಯ ಬಹಿರಂಗವಾಗಿದೆ. ಈ ಕುರಿತು ಖುದ್ದು ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದು, '5 ದಿನಕ್ಕೆ 5.22 ಕೋಟಿ ಸಂಗ್ರಹವಾಗಿದೆ, ನೆರವು ನೀಡಿದ ಎಲ್ಲರಿಗೂ ಧನ್ಯವಾದಗಳು' ಎಂದು ತಿಳಿಸಿದ್ದಾರೆ.

ಶುಕ್ರವಾರದಂದು (ಮೇ 7) ಅನುಷ್ಕಾ-ಕೊಹ್ಲಿ ದಂಪತಿ ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ನಿಧಿ ಸಂಗ್ರಹಿಸುವ ಅಭಿಯಾನ ಆರಂಭಿಸಿದ್ದರು. ಮೊದಲ 24 ಗಂಟೆಯಲ್ಲಿ ಸುಮಾರು 3 ಕೋಟಿ ಹಣ ಸಂಗ್ರಹವಾಗಿತ್ತು. ಈಗ ಐದನೇ ದಿನಕ್ಕೆ ಐದು ಕೋಟಿ ಆಗಿದೆ. ಅಭಿಯಾನ ಆರಂಭಿಸಿದ ವಿರುಷ್ಕಾ ದಂಪತಿ ತಮ್ಮ ಕಡೆಯಿಂದ 2 ಕೋಟಿ ಹಣವನ್ನು ಕೋವಿಡ್ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ್ದರು.

Anushka Sharma Covid-19 fund raising campaign earns 5 crores

ಅನುಷ್ಕಾ ಮತ್ತು ಕೊಹ್ಲಿ ಆರಂಭಿಸಿರುವ ಈ ಅಭಿಯಾನದಲ್ಲಿ ಸಂಗ್ರಹವಾದ ಹಣದಿಂದ ದೇಶಾದ್ಯಂತದ ಆಸ್ಪತ್ರೆಗಳಿಗೆ ಆಮ್ಲಜನಕ ಸಾಂದ್ರಕಗಳು ಮತ್ತು ಸಸ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದಾರೆ.

ಆಸ್ಪತ್ರೆಗಳು ಮತ್ತು ಕೋವಿಡ್-19 ಕೇಂದ್ರಗಳಲ್ಲಿ ಪ್ರಮುಖ ವೈದ್ಯಕೀಯ ಉಪಕರಣಗಳು ಮತ್ತು ವ್ಯಾಕ್ಸಿನೇಷನ್ ಸೌಲಭ್ಯಗಳನ್ನು ಪೂರೈಸುವ ಉದ್ದೇಶದಿಂದ ನಿಧಿಸಂಗ್ರಹಣೆ ಮಾಡಲಾಗುತ್ತಿದೆ ಎಂದು ಅನುಷ್ಕಾ ದಂಪತಿ ಈ ಮೊದಲೇ ತಿಳಿಸಿದ್ದರು.

ಮತ್ತೊಂದೆಡೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರು ಒಟ್ಟು ಆಸ್ತಿ ಮೌಲ್ಯ 900 ಕೋಟಿವರೆಗೂ ಇದೆ. ಆದರೆ, ಇಬ್ಬರು ಸೇರಿ 2 ಕೋಟಿ ದೇಣಿಗೆ ನೀಡಿದ್ದಾರೆ. ಜೊತೆಗೆ ಜನರನ್ನು ದೇಣಿಗೆ ನೀಡಿ ಎಂದು ಕೇಳುತ್ತಿದ್ದಾರೆ ಎಂದು ಟೀಕೆಯೂ ವ್ಯಕ್ತವಾಗಿದೆ.

Recommended Video

ಸರಿಗಮಪ ಖ್ಯಾತಿಯ ಪೊಲೀಸ್ ಕಾನ್ಸ್ಟೇಬಲ್ ಸುಬ್ರಹ್ಮಣ್ಯ ಪತ್ನಿ ಕೊರೊನಾದಿಂದ ಸಾವು | Filmibeat Kannada

More from Filmibeat

English summary
Cricketer Virat Kohli and Anushka Sharma Covid-19 fund raising campaign earns 5.22 crores in 5 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X