»   » 'ಫೋರ್ಬ್ಸ್ ಅಂಡರ್-30 ಏಷ್ಯಾ' ಪಟ್ಟಿಯಲ್ಲಿ ಸ್ಥಾನ ಪಡೆದ ಅನುಷ್ಕಾ ಶರ್ಮಾ

'ಫೋರ್ಬ್ಸ್ ಅಂಡರ್-30 ಏಷ್ಯಾ' ಪಟ್ಟಿಯಲ್ಲಿ ಸ್ಥಾನ ಪಡೆದ ಅನುಷ್ಕಾ ಶರ್ಮಾ

Posted By:
Subscribe to Filmibeat Kannada

'ಪ್ರತಿಷ್ಠಿತ ಫೋರ್ಬ್ಸ್‌ 30 ಅಂಡರ್‌ 30 ಏಷ್ಯಾ 2018' ಪಟ್ಟಿಯಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಸ್ಥಾನ ಪಡೆದಿದ್ದಾರೆ. ಏಷ್ಯಾ ಖಂಡದ ರಾಷ್ಟ್ರಗಳ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ 30 ವಯಸ್ಸಿಗಿಂತ ಕೆಳಗಿರುವ ಸಾಧಕರನ್ನು ಗುರುತಿಸುವ ಈ ಪಟ್ಟಿಯಲ್ಲಿ 29 ವಯಸ್ಸಿನ ಅನುಷ್ಕಾ ಗುರುತಿಸಿಕೊಂಡಿದ್ದಾರೆ.

ಸದ್ಯ, ಬಾಲಿವುಡ್ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯಾಗಿರುವ ಅನುಷ್ಕಾ ಶರ್ಮಾ ಕಳೆದ ವರ್ಷ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ಜೊತೆ ಸಪ್ತಪದಿ ತುಳಿದಿದ್ದರು.

'ಈ ಸಲ ಕಪ್ ನಮ್ದೆ' ಅನ್ನೋದಕ್ಕೆ ಇದೊಂದು ಕಾರಣ ಸಾಕು.!

Anushka Sharma in Forbes Aisa 30 Under 30 list

2007 ರಲ್ಲಿ ರೂಪದರ್ಶಿಯಾಗಿ ವೃತ್ತಿ ಆರಂಭಿಸಿದ್ದ ಅನುಷ್ಕಾ ಶರ್ಮಾ, 'ರಬ್ ನೇ ಬನಾ ದಿ ಜೋಡಿ' ಚಿತ್ರದಲ್ಲಿ ಶಾರೂಖ್ ಖಾನ್ ಗೆ ನಾಯಕಿಯಾಗುವ ಮೂಲಕ ಬಾಲಿವುಡ್ ಗೆ ಲಗ್ಗೆಯಿಟ್ಟರು. 2015 ರಲ್ಲಿ 'ಎನ್.ಎಚ್ 10' ಚಿತ್ರವನ್ನ ನಿರ್ಮಾಣ ಮಾಡುವುದರ ಮೂಲಕ ಪ್ರೊಡಕ್ಷನ್ ಸಂಸ್ಥೆ ಹುಟ್ಟಿಹಾಕಿದರು.

'ಫೋರ್ಬ್ಸ್‌ 30 ಅಂಡರ್‌ 30' ಪಟ್ಟಿಯಲ್ಲಿ ಅನುಷ್ಕಾ ಶರ್ಮಾ ಸೇರಿದಂತೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು, ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂಧಾನ, ಪೋಲೊ ಆಟಗಾರ ಪದ್ಮನಾಭ್ ಸಿಂಗ್‌ ಸೇರಿದಂತೆ ಇನ್ನು ಹಲವರು ಸ್ಥಾನ ಪಡೆದುಕೊಂಡಿದ್ದಾರೆ.

English summary
Anushka Sharma has become the only Bollywood star to feature in the Forbes Aisa 30 Under 30 list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X