For Quick Alerts
  ALLOW NOTIFICATIONS  
  For Daily Alerts

  ಕುಂಬ್ಳೆ - ಕೊಹ್ಲಿ ಕಿತ್ತಾಟಕ್ಕೆ ಕಾರಣವಾಗಿದ್ದು 'ಅನುಷ್ಕಾ ಶರ್ಮ' ಅಂತೆ.!

  By Naveen
  |

  ನಟಿ ಅನುಷ್ಕಾ ಶರ್ಮ ಮತ್ತು ವಿರಾಟ್ ಕೊಹ್ಲಿ ನಡುವೆ ಕುಚ್ ಕುಚ್ ನಡೆಯುತ್ತಿದೆ ಎನ್ನುವುದು ಒಂಥರಾ ಓಪನ್ ಸೀಕ್ರೆಟ್ ಇದ್ದಂತೆ. ಕೊಹ್ಲಿ - ಅನುಷ್ಕಾ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗೀಗಾ ಅಂತೂ ಎಲ್ಲಿ ಹೋದ್ರೂ... ಬಂದ್ರೂ... ಇಬ್ಬರು ಒಟ್ಟಿಗೆ ಇರುತ್ತಾರೆ. ಇದೇ ಈಗ ದೊಡ್ಡ ಎಡವಟ್ಟಿಗೆ ಕಾರಣವಾಗಿದೆ ಎಂಬ ಗುಸು ಗುಸು ಬಿಟೌನ್ ನಲ್ಲಿ ಹರಿದಾಡುತ್ತಿದೆ.

  ಎಕ್ಸ್ ಕ್ಲೂಸಿವ್ ಫೋಟೋ ; ಒಂದಾದ ಜೋಡಿ ಹಕ್ಕಿ ವಿರಾಟ್-ಅನುಷ್ಕಾ!

  ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ನಡುವಿನ ಮುನಿಸಿಗೆ ನಟಿ ಅನುಷ್ಕಾ ಶರ್ಮ ಕಾರಣ ಎಂಬ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಮುಂದೆ ಓದಿ...

  ಚಾಂಪಿಯನ್ಸ್ ಟ್ರೋಫಿ ಸಂದರ್ಭ

  ಚಾಂಪಿಯನ್ಸ್ ಟ್ರೋಫಿ ಸಂದರ್ಭ

  ಇತ್ತೀಚಿಗೆ ಲಂಡನ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಗೆ ವಿರಾಟ್ ತಮ್ಮ ಜೊತೆ ಅನುಷ್ಕಾ ಅವರನ್ನು ಕರೆದುಕೊಂಡು ಹೋಗಲು ತಯಾರಿ ನಡೆಸಿದ್ದರಂತೆ. ಅದರೆ ಇದಕ್ಕೆ ಕುಂಬ್ಳೆ ಸಮ್ಮತಿ ಸೂಚಿಸಿರಲಿಲ್ಲವಂತೆ.

  ಬಿಸಿಸಿಐ ನಿಯಮ

  ಬಿಸಿಸಿಐ ನಿಯಮ

  ಬಿಸಿಸಿಐ ನಿಯಮದ ಪ್ರಕಾರ ಆಟಗಾರರು ತಮ್ಮ ಪತ್ನಿಯನ್ನು ಮಾತ್ರ ತಮ್ಮ ಜೊತೆ ಕರೆದುಕೊಂಡು ಹೋಗಬಹುದು. ಪತ್ನಿಯನ್ನು ಹೊರತುಪಡಿಸಿ ಪ್ರೇಯಸಿ ಅಥವಾ ಗರ್ಲ್ ಫ್ರೆಂಡ್ ಕರೆದುಕೊಂಡು ಹೋಗುವಂತಿಲ್ಲ.

  ನಿಯಮ ಪಾಲಿಸಿದ ಕುಂಬ್ಳೆ

  ನಿಯಮ ಪಾಲಿಸಿದ ಕುಂಬ್ಳೆ

  ಕೊಹ್ಲಿ ಆಸೆಗೆ ಭಾರತ ತಂಡದ ಕೋಚ್ ಆಗಿದ್ದ ಕುಂಬ್ಳೆ ತಣ್ಣೀರು ಎರಚಿದರು. ಕೊಹ್ಲಿಗೆ ಈಗ ಓಕೆ ಎಂದರೆ ಮುಂದೆ ಎಲ್ಲ ಆಟಗಾರರು ಅದೇ ರೀತಿ ಮಾಡುತ್ತಾರೆ. ಅಲ್ಲದೆ ಈ ರೀತಿ ಮಾಡುವುದರಿಂದ ಆಟದ ಬಗ್ಗೆ ಆಸಕ್ತಿ ಕಡಿಮೆಯಾಗಬಹುದು ಎಂದು ಕುಂಬ್ಳೆ ಕೊಹ್ಲಿ ಮಾತಿಗೆ ನಿರಾಕರಿಸಿದರಂತೆ.

  ವಿರಹ ವೇದನೆ

  ವಿರಹ ವೇದನೆ

  ಚಾಂಪಿಯನ್ಸ್ ಟ್ರೋಫಿಗೆ ಬಂದ ಉಳಿದ ಆಟಗಾರರು ತಮ್ಮ ಹೆಂಡತಿಯರೊಂದಿಗೆ ಬಂದಿದ್ದರು. ಆದರೆ ಕೊಹ್ಲಿ ಮಾತ್ರ ವಿರಹ ವೇದನೆಯಲ್ಲಿ ಕಾಲ ಕಳೆದರು. ಇದೇ ಕಾರಣದಿಂದ ಈಗ ಕುಂಬ್ಳೆ ಮತ್ತು ಕೊಹ್ಲಿ ನಡುವೆ ಬಿರುಕು ಮೂಡಿರಬಹುದು ಎನ್ನಲಾಗುತ್ತಿದೆ.

  'ಸಚಿನ್' ಸಿನಿಮಾ ಸಮಯದಲ್ಲಿ

  'ಸಚಿನ್' ಸಿನಿಮಾ ಸಮಯದಲ್ಲಿ

  ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ 'ಸಚಿನ್' ಸಿನಿಮಾದ ಕಾರ್ಯಕ್ರಮದಲ್ಲಿಯೂ ಇಬ್ಬರು ಒಟ್ಟಿಗೆ ಕಂಡು ಎಲ್ಲರ ಗಮನ ಸೆಳೆದಿದ್ದರು.

  English summary
  Is Actress Anushka Sharma is a Reason for the dispute between Anil Kumble and Virat Kohli?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X